ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜಾಕೀಯ ಅರ್ಥವಾಗಬೇಕಿದ್ದರೆ ಏನ್ಮಾಡ್ಬೇಕು: ಓವರ್ ಟು ಉಪ್ಪಿ

|
Google Oneindia Kannada News

ಬೆಂಗಳೂರು, ಜುಲೈ 24: ಹೊಸ ಹುರುಪು, ಆಶಯ, ಕಲ್ಪನೆಯೊಂದಿಗೆ ರಾಜಕೀಯ ರಂಗ ಹಾಗೂ ಜೀವನಶೈಲಿ ಬದಲಾವಣೆ ಬಯಸಿದ್ದ ನಟ ಉಪೇಂದ್ರ ಸ್ಥಾಪಿಸಿದ ಪ್ರಜಾಕೀಯದ ಬಗ್ಗೆ ಜನಕ್ಕೆ ಇನ್ನೂ ಸ್ಪಷ್ಟ ಅರಿವು ಮೂಡಿಲ್ಲ. ರಾಜಕೀಯದಲ್ಲಿ ಅಧಿಕಾರವಿದ್ದರೆ ಎಲ್ಲಾ ಎಂಬ ಕಲ್ಪನೆಯನ್ನು ಹೊಡೆದು ಹಾಕಿ, ಪ್ರಜೆಗಳೆ ಪ್ರಭುಗಳು ಎನ್ನುವ ಪ್ರಜಾಪ್ರಭುತ್ವದ ಮೂಲ ಆಶಯವನ್ನುಳ್ಳ ಪ್ರಜಾಕೀಯ ಅರ್ಥವಾದಗಬೇಕಿದ್ದರೆ ಏನ್ಮಾಡ್ಬೇಕು ಎಂಬುದನ್ನು ನಟ, ನಿರ್ದೇಶಕ ಕಮ್ ರಾಜಕಾರಣಿ ಉಪೇಂದ್ರ ಟ್ವೀಟ್ ಮೂಲಕ ಹೇಳಿದ್ದಾರೆ.

ಉಪೇಂದ್ರ ಆಶಯದಂತೆ ಭಾರಿ ನಿರೀಕ್ಷೆಯಿಂದ ಸ್ಥಾಪನೆಯಾಗಿದ್ದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆ.ಪಿ.ಜೆ.ಪಿ ) ದಲ್ಲಿ ಭಿನ್ನಮತ ಸ್ಫೋಟಗೊಂಡು ಪಕ್ಷದ ಅಧ್ಯಕ್ಷ ಮಹೇಶ್ ಗೌಡ ಅವರು ಉಪೇಂದ್ರರನ್ನೇ ಹೊರ ಹಾಕಿದ್ದರು. ನಂತರ ಮೊದಲ ಎಂಟ್ರಿಯಲ್ಲೇ ಬಂಪರ್ ಹೊಡೆದು ರಾಣೆಬೆನ್ನೂರು ಶಾಸಕರಾದ ಆರ್ ಶಂಕರ್ ಅವರು ಕೆಪಿಜೆಪಿಯನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದಾರೆ.

ಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರ ಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರ

"ಹಣವಿಲ್ಲದೆ ಮಾಡೋಣ, ವಿಚಾರ ಮುಖ್ಯ ಎಂದರು, ಒಂದೆರಡು ತಿಂಗಳು ಚೆನ್ನಾಗಿ ನಡೆಯಿತು. ಕೆಪಿಜೆಪಿ ಹಾಗೂ ಪ್ರಜಾಕೀಯ ಬಗ್ಗೆ ಅವರಿಗಿದ್ದ ಗೊಂದಲ ಪರಿಹಾರವಾದ ಬಳಿಕ ಈಗ ಟಿಕೆಟ್ ರಾಜಕೀಯ ಸಮಸ್ಯೆ ಎದುರಾಯಿತು. ಈ ಬಗ್ಗೆ ಸ್ಪಷ್ಟನೆ ನೀಡುವುದಕ್ಕೂ ಮುಂಚೆ ಆತುರವಾಗಿ ಅವರು ಮಾಧ್ಯಮಗಳ ಮುಂದೆ ಹೋಗಿ ನನ್ನನ್ನು ಡಿಕ್ಟೇಟರ್ ಎಂದೆಲ್ಲ ಹೇಳಿದ್ದಾರೆ" ಎಂದು ಉಪೇಂದ್ರ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದಾದ ಬಳಿಕ ಚುನಾವಣಾ ರಾಜಕೀಯದಿಂದ ದೂರ ಉಳಿದ ಉಪೇಂದ್ರ ಹೊಸದಾಗಿ ಪಕ್ಷವನ್ನು ಪ್ರಜಾಕೀಯ ಆಶಯದ ಮೇಲೆ ಕಟ್ಟುವ ಭರವಸೆ ನೀಡಿದರು. ಕಾಲಕಾಲಕ್ಕೆ ಪ್ರಜಾಕೀಯ ಎಂದರೇನು ಅದು ಹೇಗೆ ರಾಜಕೀಯಕ್ಕಿಂತ ಭಿನ್ನ ಎಂಬುದನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.2019ರ ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರರ ಪ್ರಜಾಕೀಯ ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲೂ ಗೆಲುವು ಸಾಧಿಸಲಿಲ್ಲ.

ರಾಜಕೀಯ ಬೆಳವಣಿಗೆ ಬಗ್ಗೆ ಉಪ್ಪಿ ಟ್ವೀಟ್

ರಾಜಕೀಯ ಬೆಳವಣಿಗೆ ಬಗ್ಗೆ ಉಪ್ಪಿ ಟ್ವೀಟ್

ಮೈತ್ರಿ ಸರ್ಕಾರ ಬಿದ್ದ ಬಳಿಕ ಟ್ವೀಟ್ ಮಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಇಂಥ ಸನ್ನಿವೇಶ ಎದುರಿಸಬೇಕಾಗುತ್ತದೆ. ಇದಕ್ಕೆ ಪ್ರಜಾಕೀಯವೆ ಪರಿಹಾರ ಎಂಬಂತೆ ಹೇಳಿದ್ದಾರೆ.

"ಎಲ್ಲಿಯವರೆಗೆ ನಾವು ಭಗವದ್ಗೀತೆ, ಬೈಬಲ್, ಕುರಾನ್​ಗಳಲ್ಲಿ ಹೇಳಿರುವ ಶ್ರೇಷ್ಠ ವಿಚಾರವನ್ನು ಬಿಟ್ಟು ಕೃಷ್ಣ, ಅಲ್ಲಾ, ಜೀಸಸ್​ರನ್ನು ವ್ಯಕ್ತಿಯಾಗಿ ಪೂಜಿಸುವ ಮನಸ್ಥಿತಿಯಲ್ಲಿ ಇರುತ್ತೇವೋ ಅಲ್ಲಿಯವರೆಗೆ ವ್ಯಕ್ತಿ ಪೂಜೆ ಮಾಡುವ ರಾಜಕೀಯ ದೇಶದಲ್ಲಿ ಇದ್ದೇ ಇರುತ್ತದೆ. ವಿಚಾರವನ್ನು ತಿಳಿದು ಪ್ರಚಾರ ಮಾಡುವ ಮನಸ್ಥಿತಿ ಬರಬೇಕಿದೆ. ಅಲ್ಲಿ ತನಕ ಪ್ರಜಾಕೀಯ ಉಗಮ, ಪ್ರಗತಿ ಹೇಗೆ ಸಾಧ್ಯ?" ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಕಂಟೆಂಟ್ ಬಗ್ಗೆ ಮಾತ್ರ ಮಾತಾಡೋದು ಪ್ರಜಾಕೀಯ

ಕಂಟೆಂಟ್ ಬಗ್ಗೆ ಮಾತ್ರ ಮಾತಾಡೋದು ಪ್ರಜಾಕೀಯ

ಬೇರೆ ಪಕ್ಷಗಳ ಬಗ್ಗೆ ಕಾಮೆಂಟ್ ಮಾಡೋದು ರಾಜಕೀಯ .........
ತಮ್ಮ ಪಕ್ಷದ ಕಂಟೆಂಟ್ ಬಗ್ಗೆ ಮಾತ್ರ ಮಾತಾಡೋದು ಪ್ರಜಾಕೀಯ......

ಇನ್ನೊಂದು ಟ್ವೀಟ್ ನಲ್ಲಿ : ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ , ಆನಂತರ ನಾವು ಮೂಕ ಪ್ರೇಕ್ಷಕರು !!!! ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಬೇಕು !! ( ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು )

ರಾಜಕೀಯ ಬೆಳವಣಿಗೆ ಬಗ್ಗೆ ಉಪೇಂದ್ರ ಟ್ವೀಟ್

ಹಣ, ಹೆಸರು ಬೇಡ, ನಿಮ್ಮ ಸಿದ್ಧಾಂತ ಒಪ್ಪಿದ್ದೇವೆ, ಪ್ರಜಾಕೀಯಕ್ಕೆ ಬೆಂಬಲವಿದೆ' ಎಂದು ಹೇಳಿದ್ದರಿಂದ ಅವರ ಜತೆ ಕೈಜೋಡಿಸಿದ್ದೆವು. ಆದರೆ, ಅವರ ಕಮಿಟಿಯವರು ಉಪೇಂದ್ರ ಸಿದ್ಧಾಂತ ಸರಿಯಿಲ್ಲ, ಅವರನ್ನು ಪಕ್ಷದಿಂದ ಹೊರ ಹಾಕೋಣ ಎಂದು ನಿರ್ಧರಿಸಿದರೆ, ಏನು ಮಾಡಲಿ" ಎಂದು ಉಪೇಂದ್ರ ಅವರು ಪಕ್ಷದಿಂದ ಹೊರ ಬಂದ ನಂತರ ಪ್ರಶ್ನಿಸಿದ್ದರು.

ರಾಜಕೀಯ ಬೆಳವಣಿಗೆ ಬಗ್ಗೆ ಉಪೇಂದ್ರ ಟ್ವೀಟ್

"ಕಂಟೆಂಟ್ ಗಟ್ಟಿ ಇದ್ದರೆ ಜನರೇ ಅದನ್ನು ತೆಗೆದುಕೊಂಡು ಹೋಗ್ತಾರೆ. ನಮ್ಮ ಉದ್ದೇಶ- ವಿಚಾರ ಗಟ್ಟಿಯಿದೆ. ಅದು ಇಷ್ಟವಾದರೆ ಅವರೇ ಮುಂದಕ್ಕೆ ತಲುಪಿಸುತ್ತಾರೆ. ನಮಗೆ ಅಬ್ಬರ ಬೇಡ. ವಿಚಾರ ಬೇಕು" ಎಂದು ಈ ಹಿಂದೆ ಒನ್ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ನಿನ್ನೆ ಸದನದಲ್ಲೂ ಡಿಕೆ ಶಿವಕುಮಾರ್ ಅವರು ಸಿದ್ಧಾಂತ ರಾಜಕೀಯದ ಬಗ್ಗೆ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
"We need to develop a new mentality Prajakeeya to flourish, Rajakeeya(Politics) is with glorified iconic worship said Actor cum Politician Upendra via his twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X