ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ತಡೆಗೆ ಜನರ ಸಹಕಾರ ಬಹಳ ಅಗತ್ಯ: ಡಿಸಿಪಿ ಇಶಾ ಪಂತ್

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೊರೊನಾ ಓಡಿಸಲು ಪೊಲೀಸ್ ಇಲಾಖೆ ಶ್ರಮವಹಿಸುತ್ತಿದ್ದು, ಅದಕ್ಕೆ ನಿಮ್ಮ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಡಿಸಿಪಿ ಇಶಾ ಪಂತ್ ಜನರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇ ಕಾಮರ್ಸ್ ಪಾಸ್ ಪಡೆಯುವ ಬಗ್ಗೆ ಡಿಸಿಪಿ ಇಶಾ ಪಂತ್ ಉತ್ತರ ನೀಡಿದ್ದಾರೆ. ಈ ವೇಳೆ ಸರ್ಕಾರ ಆದೇಶವನ್ನು ಜನರು ಪಾಲಿಸಬೇಕು. ಮನೆಯಲ್ಲಿಯೇ, ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದರು.

25ಕ್ಕೂ ಹೆಚ್ಚು ಆನ್‌ಲೈನ್ ಸಂಸ್ಥೆಗಳ ವ್ಯವಹಾರಕ್ಕೆ ಪೊಲೀಸರ ಅನುಮತಿ25ಕ್ಕೂ ಹೆಚ್ಚು ಆನ್‌ಲೈನ್ ಸಂಸ್ಥೆಗಳ ವ್ಯವಹಾರಕ್ಕೆ ಪೊಲೀಸರ ಅನುಮತಿ

ಸಾಮಾನ್ಯ ಜನರಿಗೆ ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಪಾಸ್ ನೀಡುವುದಿಲ್ಲ. ಬೆಂಗಳೂರಿನಂತಹ ನಗರದಲ್ಲಿ ತರಕಾರಿ, ಹಣ್ಣು, ಹಾಲು, ಔಷದಿ ಎಲ್ಲವೂ ಮನೆಯ ಬಳಿಯ ಸಿಗಲಿದ್ದು, ಪಾಸ್‌ಗಳನ್ನು ಪಡೆಯುವ ಅವಕಾಶವೇ ಇರುವುದಿಲ್ಲ ಎಂದಿದ್ದಾರೆ. ಮೆಡಿಕಲ್ ಎಮರ್ಜನ್ಸಿ ಇರುವವರಿಗೆ ಪಾಸ್ ನೀಡಲಾಗುತ್ತದೆ. ಆ ಪಾಸ್‌ಗೆ ಸಮಯದ ನಿರ್ಬಂಧ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

We Need People Support To Beat Corona Says DCP Isha Pant

ಇ ಕಾಮರ್ಸ್ ಡಿಲೇವೇರಿ ಬಾಯ್‌ಗಳಿಗೆ ಹಾಗೂ ಅವರ ವಾಹನಗಳಿಗೆ ಪಾಸ್‌ಗಳನ್ನು ಈಗಾಗಲೇ ನೀಡಲಾಗುತ್ತದೆ. ತರಕಾರಿ, ಊಟ, ತಿನಿಸು, ಔಷದಿಗಳ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ 1 ಲಕ್ಷದ 10 ಸಾವಿರ ಪಾಸ್‌ಗಳನ್ನು ವಿತರಣೆ ಮಾಡಲಾಗಿದೆಯಂತೆ.

ಪಾಸ್‌ ತೆಗೆದುಕೊಳ್ಳುವ ಅರ್ಹತೆ ಇರುವವರು, ಡಿಸಿಪಿ ಕಛೇರಿಗೆ ಹೋಗಿ ಪಡೆದುಕೊಳ್ಳಬಹುದಾಗಿದೆ. ಅದರೊಂದಿಗೆ, ಈಗ ಆನ್‌ಲೈನ್‌ನಲ್ಲಿಯೂ ಪಾಸ್‌ಗಳನ್ನು ಪಡೆಯಬಹುದಾಗಿದೆ. ಈ ಸೇವೆಗಳನ್ನು ಸದ್ಯದಲ್ಲಿಯೇ ಶುರು ಮಾಡುವುದಾಗಿ ಇಶಾ ಪಂತ್ ತಿಳಿಸಿದ್ದಾರೆ.

ಸ್ವಿಗ್ಗಿ, ಜೊಮ್ಯಾಟೊ, ಫ್ಲಿಪ್ ಕಾರ್ಟ್, ಬಿಗ್ ಬಜಾರ್, ಸ್ನಾಪ್ ಡೀಲ್, ಮೆಡ್ ಲೈಫ್, ಬಿಗ್ ಬ್ಯಾಸ್ಕೆಟ್, ಅಮೇಜಾನ್, ಎಮ್ ಟಿ ಆರ್ ಫುಡ್, ಅಪೊಲೊ ಫಾರ್ಮಸಿ, ಒಲಾ ಇಟ್ಸ್, ಮಿಲ್ಕ್ ಬ್ಯಾಸ್ಕೆಟ್ ಹೀಗೆ 25ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿದೆ.

English summary
Bengaluru DCP Isha Pant says that they need people support to beat coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X