ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪವಿತ್ರ ಮೈತ್ರಿಯಿಂದ ನೊಂದು ಪಕ್ಷ ಬಿಟ್ಟಿದ್ದು: ಸುಧಾಕರ್

|
Google Oneindia Kannada News

ಬೆಂಗಳೂರು, ನವೆಂಬರ್ 14: ನಾವು ಎಲ್ಲ ಒಮ್ಮೆಲೆ ಪಕ್ಷ ಬಿಟ್ಟು ಬಂದವರಲ್ಲ.ಕಳೆದ 14 ತಿಂಗಳ ಹಿಂದೆ ಅಪವಿತ್ರ ಮೈತ್ರಿ ಆಗಿತ್ತು ಅದನ್ನು ನೋಡಿ ಬೇಸತ್ತು ಪಕ್ಷ ಬಿಟ್ಟು ಬಂದಿದ್ದೇವ ಎಂದು ಡಾ. ಕೆ ಸುಧಾಕರ್ ಹೇಳಿದ್ದಾರೆ.

ಯಾವುದೇ ಮೈತ್ರಿ ಆಗಬೇಕಾದರೆ ಚುನಾವಣೆಗೆ ಮೊದಲು ಆಗಬೇಕು.ಆದರೆ ಕೇವಲ ಬಿಜೆಪಿಯನ್ನು ದೂರ ಇಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡರು.

ಆದರೆ ನಮಗೆ ಮನಸ್ಸುಗಳು ಒಂದಾಗಲಿಲ್ಲ.ನಮ್ಮ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ.ನಾವೆಲ್ಲ ಸ್ವಯಂ ಶಕ್ತಿಯಿಂದ ಗೆದ್ದು ಬಂದವರು.ನಮಗೆ 14ತಿಂಗಳಲ್ಲಿ ಸಾಕಷ್ಟು ನೋವು ಕೊಟ್ಟಿದ್ದಾರೆ.

We Left Congress Because Of An Unholy Alliance

ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದಾರೆ.ಸ್ವಾಭಿಮಾನ ಇಲ್ಲದೇ ಇದ್ದರೆ ಅಧಿಕಾರ ಇದ್ದರೆಷ್ಟು ಬಿಟ್ಟರೆಷ್ಟು.ಹಾಗಾಗಿ ನಾವು ರಾಜೀನಾಮೆ ಕೊಟ್ಟು ಬಂದಿದ್ದೇವೆ.ರಾಜೀನಾಮೆ ಕೊಟ್ಟು ಬರುವುದು ಸುಲಭವಲ್ಲ.

ಈಗ ಎರಡೂ ಪಕ್ಷಗಳವರು ಹೇಗೆ ಬೀದಿ ಜಗಳ ಮಾಡುತ್ತಿದ್ದಾರೆ ಎಂದು ನೋಡಿದ್ದೀರಿ.ನಾವು ಪೂರ್ಣ ಅಂತಕರಣದಿಂದ ಬಿಜೆಪಿಗೆ ಬಂದಿದ್ದೇವೆ.ನಮ್ಮ ಮೇಲೆ ಜವಾಬ್ದಾರಿ ಇದೆ.
ಇಂತಹಾ ಕ್ರೂರ,ವಿಕೃತ ಮನಸ್ಸಿನಿಂದ ಆದೇಶ ಕೊಟ್ಡ ರಮೇಶ್ ಕುಮಾರ್ ರಂತಹಾ ಸ್ಪೀಕರ್ ಈ ರಾಜ್ಯದ ರಾಜಕಾರಣದಲ್ಲಿ ಮತ್ತೊಮ್ನೆ ಬರಬಾರದು.ನಮ್ಮ ರಾಜಕೀಯ ಬದುಕನ್ಬೇ ಮುಗಿಸಲು ಹೊರಟಿದ್ದ ಅವರಿಗೆ ಸುಪ್ರಿಂಕೋರ್ಟ್ ತಕ್ಕ ಉತ್ತರ ಕೊಟ್ಟಿದೆ‌.

ಸಮ ಸಮಾಜ ನಿರ್ಮಾಣ ಮಾಡಬೇಕಾದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಉಳಿಯಬೇಕು.ಹಾಗಾಗಬೇಕಾದರೆ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕು.ಎಲ್ಲರ ಪ್ರಾರ್ಥನೆ ಫಲಿಸಿದೆ.ನಮಗೆ ನ್ಯಾಯ ಸಿಕ್ಕಿದೆ.ನಾವು ರಾಜ್ಯದ ಒಳಿತಿಗಾಗಿ ರಾಜೀನಾಮೆ ಕೊಟ್ಟಿದ್ದೇವೆ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂದು ಹೇಳಿದರು.

English summary
Dr Sudhakar says We are not only lest Congress Party at all, We Left Congress Because Of An Unholy Alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X