ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ಔದಾರ್ಯತೆಯ ಪರಮಾವಧಿ ತೋರಿದ ಸಿಎಂ ಬಿಎಸ್ವೈ

|
Google Oneindia Kannada News

ಬೆಂಗಳೂರು, ಅ 22: ಸಿದ್ದರಾಮಯ್ಯನವರಿಗೆ ಅದೃಷ್ಟದ ವಸತಿಗೃಹ ಎಂದೇ ಹೇಳಲಾಗುತ್ತಿರುವ 'ಕಾವೇರಿ' ನಿವಾಸ ತೆರವಿನ ವಿಚಾರದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ, ಹೇಳಿಕೆಯನ್ನು ನೀಡಿದ್ದಾರೆ.

ನಾಲ್ಕು ದಿನದಲ್ಲಿ 'ಕಾವೇರಿ' ನಿವಾಸವನ್ನು ಖಾಲಿ ಮಾಡಬೇಕು ಎಂದು ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿತ್ತು. ಈ ಬಗ್ಗೆ, ಮುಖ್ಯಮಂತ್ರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.

ಕೊನೆಗೂ, ಜ್ಯೋತಿಷ್ಯ, ಭವಿಷ್ಯದ ಮೊರೆ ಹೋದ ಸಿದ್ದರಾಮಯ್ಯ?ಕೊನೆಗೂ, ಜ್ಯೋತಿಷ್ಯ, ಭವಿಷ್ಯದ ಮೊರೆ ಹೋದ ಸಿದ್ದರಾಮಯ್ಯ?

"ಕಾವೇರಿ ನಿವಾಸ ತೊರೆಯುವಂತೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಸೂಚನೆ ನೀಡಿಲ್ಲ" ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

We Have Not Told Siddaramaiah To Vacate Cauvery Bungalow CM Yediyurapapa

"ಈ ಬಂಗಲೆ ಕೆ.ಜೆ.ಜಾರ್ಜ್ ಅವರಿಗೆ ಮಂಜೂರಾಗಿತ್ತು. ಈಗ ಅವರು ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಸಿದ್ದರಾಮಯ್ಯನವರಿಗೆ ಮನೆ ಖಾಲಿ ಮಾಡಿ ಎಂದು ಹೇಳಿಲ್ಲ".

"ಅವರು ಇರುವಷ್ಟು ದಿನ ಕಾವೇರಿಯಲ್ಲಿ ಇರಬಹುದು. ಅವರು ಖಾಲಿ ಮಾಡಿದ ನಂತರ, ನಾನು ಅಲ್ಲಿಗೆ ಶಿಫ್ಟ್ ಆಗುತ್ತೇನೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.

'ಕಾವೇರಿ' ಖಾಲಿ ಮಾಡಲು ಸಿದ್ದರಾಮಯ್ಯಗೆ 4 ದಿನದ ಗಡುವು'ಕಾವೇರಿ' ಖಾಲಿ ಮಾಡಲು ಸಿದ್ದರಾಮಯ್ಯಗೆ 4 ದಿನದ ಗಡುವು

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. 2018ರ ವಿಧಾನಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಿದ್ದರಾಮಯ್ಯ ಕಾವೇರಿಯಲ್ಲಿಯೇ ಮುಂದುವರಿದಿದ್ದರು.

ಸಿದ್ದರಾಮಯ್ಯನವರ ಪತ್ನಿಗೆ ಕಾವೇರಿ ಬಂಗ್ಲೆಯ ಮೇಲೆ ಇನ್ನಿಲ್ಲದ ನಂಬಿಕೆ. ಹಾಗಾಗಿಯೇ, ಆ ಬಂಗಲೆ ಖಾಲಿ ಮಾಡಲು ಸಿದ್ದರಾಮಯ್ಯ ಮುಂದಾಗುತ್ತಿಲ್ಲ ಎನ್ನುವ ಮಾತಿದೆ.

English summary
We Have Not Told Siddaramaiah To Vacate Cauvery Bungalow (Race Course Road, Bengaluru), Chief Minister Yediyurapapa Clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X