ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾವ್ಯಾರೂ ಸಚಿವ ಸ್ಥಾನ, ಖಾತೆ ಕೇಳಿಲ್ಲ ಎಂದ ಸೋಮಶೇಖರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ನಾವ್ಯಾರೂ ಸಚಿವ ಸ್ಥಾನವನ್ನಾಗಲಿ ಖಾತೆಯನ್ನಾಗಲಿ ಕೇಳಿಲ್ಲ ಎಂದು ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ನಾವು ಖಾತೆ ಅಥವಾ ಸಚಿವಸ್ಥಾನ ಏನನ್ನೂ ಕೇಳಿಲ್ಲ. ನಾವೆಲ್ಲ 17 ಜನರೂ ಒಟ್ಟಾಗಿದ್ದೇವೆ, ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ,ಪರಸ್ಪರರ ಸಹಕಾರದಲ್ಲಿರ್ತೇವೆ, ಸಿಎಂ ಈ ಬಗ್ಗೆ ನಿರ್ಧಾರ ತಗೋತಾರೆ ಎಂದು ಹೇಳಿದರು.

ಮುನಿರತ್ನ, ಪ್ರತಾಪ್ ವಿರುದ್ಧದ ದೂರು ವಾಪಸ್ ಪಡೆಯಲು ಮನವಿ

ಮುನಿರತ್ನ, ಪ್ರತಾಪ್ ವಿರುದ್ಧದ ದೂರು ವಾಪಸ್ ಪಡೆಯಲು ಮನವಿ

ಮುನಿರತ್ನ ಮತ್ತು‌ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ದೂರುಗಳನ್ನು ವಾಪಸ್ ಪಡೆಯಲು ಶಾಸಕರು ಒತ್ತಾಯಿಸಿದ್ದಾರೆ. ಅವರಿಬ್ಬರ ಕ್ಷೇತ್ರಗಳಿಗೆ ಬೇಗ ಚುನಾವಣೆ ಆಗುವಂತೆ ನೋಡಿಕೊಳ್ಳಬೇಕು ಎಂದರು.

ಮುನಿರತ್ನ ಅವರಿಗೂ ಸಚಿವ ಸ್ಥಾನ ಖಾಯ್ದಿರಿಸಬೇಕು

ಮುನಿರತ್ನ ಅವರಿಗೂ ಸಚಿವ ಸ್ಥಾನ ಖಾಯ್ದಿರಿಸಬೇಕು

ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರ ವಿರುದ್ಧವಿರುವ ಕೇಸು ಹಿಂಪಡೆದು ಶೀಘ್ರ ಚುನಾವಣೆ ನಡೆಸುವಂತೆ ಮನವಿ ಮಾಡಿದ ಎಸ್‌ಟಿ ಸೋಮಶೇಖರ್ ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಇಬ್ಬರಿಗೂ ಸಚಿವ ಸ್ಥಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಭೇಟಿ: ಗರಿಗೆದರಿದ ರಾಜ್ಯ ರಾಜಕೀಯಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಭೇಟಿ: ಗರಿಗೆದರಿದ ರಾಜ್ಯ ರಾಜಕೀಯ

ಸಚಿವ ಸ್ಥಾನ ಪಡೆಯಲು ಯೋಗೇಶ್ವರ್ ಕಸರತ್ತು

ಸಚಿವ ಸ್ಥಾನ ಪಡೆಯಲು ಯೋಗೇಶ್ವರ್ ಕಸರತ್ತು

ಮುಖ್ಯಮಂತ್ರಿ ಬಿಎಸ್ ಯಡೊಯೂರಪ್ಪ ಅವರ ನಿವಾಸಕ್ಕೆ ಸಿಪಿ ಯೋಗೇಶ್ವರ್ ಕೂಡ ಆಗಮಿಸಿದ್ದಾರೆ. ಈ ಬಾರಿಯೂ ಸಚಿವ ಸ್ಥಾನ ಪಡೆಯಲು ಯೋಗೇಶ್ವರ್ ಕಸರತ್ತು ಮುಂದುವರೆಸಿದ್ದಾರೆ.

ಸಿಎಂ ಭೇಟಿ ಮಾಡಿದ ಗೆದ್ದು ಹಾಗೂ ಸೋತ ಶಾಸಕರು

ಸಿಎಂ ಭೇಟಿ ಮಾಡಿದ ಗೆದ್ದು ಹಾಗೂ ಸೋತ ಶಾಸಕರು

ಗೆದ್ದ ಶಾಸಕರ ಪೈಕಿ ರಮೇಶ್ ಜಾರಕಿಹೊಳಿ, ಬಿಸಿ ಪಾಟೀಲ್, ಎಸ್‌ಟಿ ಸೋಮಶೇಖರ್, ಬೈರತಿ ಬಸವರಾಜು, ಸುಧಾಕರ್ ಸೋತವರ ಪೈಕಿ ವಿಶ್ವನಾಥ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

English summary
BJP MLA ST Somashekar said we have never asked any minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X