ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಸಿಕಾಕರಣದಿಂದ ಮಾತ್ರ ರಕ್ಷಣೆ ಸಾಧ್ಯ: ಸಚಿವ ಡಾ.ಕೆ.ಸುಧಾಕರ್

|
Google Oneindia Kannada News

ಬೆಂಗಳೂರು, ಜನವರಿ 14: ಲಸಿಕಾಕರಣದಿಂದ ಮಾತ್ರ ಕೋವಿಡ್ ನಿಂದ ದೂರವಿರಲು ಸಾಧ್ಯ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಜನರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಈ ಉತ್ತರಾಯಣದ ಪುಣ್ಯ ಕಾಲದಲ್ಲಿ ಎಲ್ಲರಿಗೂ ಸಂತಸ, ಆರೋಗ್ಯ, ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಇಂದು ಮೂರನೇ ಕೋವಿಡ್ ಲಸಿಕೆ ಪಡೆದಿದ್ದಾರೆ. 9 ತಿಂಗಳ ಹಿಂದೆ ಅವರು ಎರಡು ಡೋಸ್ ಪಡೆದಿದ್ದರು. ಬಿಎಂಸಿಆರ್‌ಐನಲ್ಲಿ ಈವರೆಗೆ 83,937 ಡೋಸ್ ಗಳನ್ನು ನೀಡಲಾಗಿದೆ. ಈ ಪೈಕಿ 420 ಬಾಣಂತಿ, 1,179 ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಸಿಬ್ಬಂದಿ ಸೇರಿದಂತೆ ಅರ್ಹರು ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆಯಬೇಕು. ಲಸಿಕಾಕರಣ ಒಂದರಿಂದಲೇ ರಕ್ಷಣೆ ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಪ್ರಧಾನಿಗಳು ಕೂಡ ಅದನ್ನೇ ಹೇಳಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯೋಣ ಎಂದರು.

ಕೋವಿಡ್ ಮಾರ್ಗಸೂಚಿ ಯಾವಾಗ ಅಂತ್ಯ?; ಮಾಹಿತಿ ನೀಡಿದ ಆರೋಗ್ಯ ಸಚಿವಕೋವಿಡ್ ಮಾರ್ಗಸೂಚಿ ಯಾವಾಗ ಅಂತ್ಯ?; ಮಾಹಿತಿ ನೀಡಿದ ಆರೋಗ್ಯ ಸಚಿವ

ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಸ್ವಾಗತಿಸುತ್ತೇನೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೆ ಪೂರಕವಾಗಿದೆ. ಕೋವಿಡ್ ಪ್ರಕರಣ ಹೆಚ್ಚಿರುವ ಈ ಸಮಯದಲ್ಲಿ ಇದು ಸೂಕ್ತವಾಗಿದೆ. ಕಾಂಗ್ರೆಸ್‌ನ ಬೇಜವಾಬ್ದಾರಿ ನಡೆಯನ್ನು ಜನ ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ, ಎಂದರು.

We can defeat Covid-19 only through vaccine: Health and Medical Education Minister Dr.K.Sudhakar

ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ 5-6% ರೋಗಿಗಳು ಮಾತ್ರ ಆಸ್ಪತ್ರೆ ಸೇರುತ್ತಿದ್ದಾರೆ. ನರ್ಸ್‌ಗಳು ಕೂಡಾ ಸೋಂಕಿಗೊಳಗಾಗುತ್ತಿರುವುದು ಆತಂಕದ ವಿಚಾರವಾಗಿದೆ. ಹೀಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕತೆ ಇದೆ. ರಾಜ್ಯದಲ್ಲಿ ಕೊರೊನಾ ಇನ್ನು ಪೀಕ್‌ಗೆ ಹೋಗಿಲ್ಲ ಎಂದು ತಜ್ಞರು ಕೂಡಾ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್‌ಗೆ ಹೋಗುವ ಸಾಧ್ಯತೆ ಇದೆ. 3-4ನೇ ವಾರದಿಂದ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ ಎಂದರು.

ಕಳೆದ ವಾರದಿಂದ ವೀಕೆಂಡ್ ನಿರ್ಬಂಧ ತರಲಾಗಿದೆ. ಆದರೆ 7 ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಬಾರಿಯ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಇನ್ನು ಸ್ವಲ್ಪ ದಿನದಲ್ಲಿ ವೀಕೆಂಡ್ ಕರ್ಫ್ಯೂ ನಿಂದಾದ ಫಲಿತಾಂಶ ದೊರೆಯಬಹುದು ಎಂದರು.

We can defeat Covid-19 only through vaccine: Health and Medical Education Minister Dr.K.Sudhakar

ಇನ್ನು ರಾಜ್ಯದಲ್ಲಿ ಲಾಕ್​ಡೌನ್ ಹೇರಿಕೆ ಕುರಿತು ಮಾತನಾಡಿದ ಸಚಿವ ಸುಧಾಕರ್, ''ಲಾಕ್‌ಡೌನ್ ಮೂಲಕ ಕೊರೊನಾ ನಿಯಂತ್ರಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೂ ಇದನ್ನೇ ಹೇಳಿದ್ದಾರೆ. ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಅನಗತ್ಯವಾಗಿ ಜನಜಂಗುಳಿ ಸೇರುವುದು, ಸಮಾರಂಭ ಮಾಡಬೇಡಿ,'' ಎಂದಿದ್ದಾರೆ.

ಜನರು ಮಾಸ್ಕ್, ಸಾಮಾಜಿಕ ಅಂತರದಂತ ನಿಯಮ ಪಾಲಿಸಿ. ಸದ್ಯದ ಈಗಿನ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವಂತ ಕೋವಿಡ್ ಸೋಂಕಿತರ ಪ್ರಮಾಣ ಗಮನಿಸಿದರೆ, ಶೇ.5-6ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನರ್ಸ್‌, ವೈದ್ಯರಿಗೂ ಕೊರೊನಾ ಸೋಂಕು ದೃಢಪಡುತ್ತಿದೆ. ಇದು ನಮಗೆ ಆತಂಕದ ಸಂಗತಿಯಾಗಿದೆ ಎಂದು ಆರೋಗ್ಯ ಸಚಿವರು ಕಳವಳ ವ್ಯಕ್ತಪಡಿಸಿದರು.

We can defeat Covid-19 only through vaccine: Health and Medical Education Minister Dr.K.Sudhakar

Recommended Video

Virat Kohli ಹೀಗೆ ಮೈಕ್ ನಲ್ಲಿ ಹೇಳಿದ ಮೇಲೆ ಮೊದಲ ಬಾರಿಗೆ ಪ್ರತಿಕ್ರಿಯೆ | Oneindia Kannada

ಕೋವಿಡ್ ಪರೀಕ್ಷೆಗೆ ಪ್ರತಿ ದಿನ 2 ಲಕ್ಷದ ಗುರಿ
ಕೋವಿಡ್ ಪರೀಕ್ಷೆಗೆ ಪ್ರತಿ ದಿನ 2 ಲಕ್ಷದ ಗುರಿ ನೀಡಿದ್ದು, ಇನ್ನೂ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಬೆಂಗಳೂರಿನಲ್ಲಿ 1 ಲಕ್ಷದಷ್ಟು ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 265 ಪರೀಕ್ಷೆ ಲ್ಯಾಬ್ ಸ್ಥಾಪಿಸಿದ್ದು, ಮೊದಲ ಬಾರಿಗೆ 5 ಜೀನೋಮಿಕ್ ಸೀಕ್ವೆನ್ಸ್ ಲ್ಯಾಬ್ ಆರಂಭಿಸಲಾಯಿತು. ಕೇಂದ್ರ ಸರ್ಕಾರ 4 ಸೇರಿ ಒಟ್ಟು 9 ಜೀನೋಮಿಕ್ ಸೀಕ್ವೆನ್ಸ್ ಲ್ಯಾಬ್ ಇದೆ. 1,875 ಮಾದರಿಗಳನ್ನು ಒಂದು ಬ್ಯಾಚ್ ನಲ್ಲಿ ಸೀಕ್ವೆನಿಂಗ್ ಮಾಡುವ ಸೌಲಭ್ಯವಿದೆ ಎಂದು ತಿಳಿಸಿದರು.

English summary
We can defeat Covid only though vaccine. Therefore everyone should get vaccinated without fail, said health and medical education minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X