ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮದು ಮಾಟ ಮಂತ್ರ ಮಾಡುವ ಕುಟುಂಬವಲ್ಲ ಎಂದ ಕುಮಾರಸ್ವಾಮಿ

|
Google Oneindia Kannada News

Recommended Video

ಮಾಟ-ಮಂತ್ರದ ಬಗ್ಗೆ ಮಾತನಾಡಿದ ಕುಮಾರಣ್ಣ

ಬೆಂಗಳೂರು, ಜುಲೈ 19: ನಮ್ಮದು ಮಾಟ ಮಂತ್ರ ಮಾಡುವ ಕುಟುಂಬವಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ರೇವಣ್ಣನನ್ನು ಮಾಟ-ಮಂತ್ರ ಎಂದು ಕರೆದಿರಿ, ನೀವು ನಿಮ್ಮನ್ನು ಹಿಂದೂಗಳು ಎಂದುಕೊಳ್ಳುತ್ತೀರಿ, ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದಿರಿ ಆದರೆ ಆತ ದೇವಸ್ಥಾನಕ್ಕೆ ಹೋಗುವುದನ್ನು ವ್ಯಂಗ್ಯ ಮಾಡುತ್ತೀರಿ.

ನಮ್ಮ ಕುಟುಂಬ ಮಾಟ ಮಾಡಿಸುವ ಕುಟುಂಬವಲ್ಲ, ಮಾಟ-ಮಂತ್ರ ಮಾಡಿ ಅಧಿಕಾರಕ್ಕೆ ಹಿಡಿಯುವ ಹಾಗಿದ್ದರೆ ಚುನಾವಣೆ ಏಕೆ? ಎಂದು ಸಿಎಂ ಪ್ರಶ್ನೆ ಮಾಡಿದರು.

ವಿಶ್ವಾಸಮತ LIVE: ಸಿಎಂ ಭಾವುಕ ಭಾಷಣ; ಹೋಲ್'ಸೇಲ್' ಆರೋಪವಿಶ್ವಾಸಮತ LIVE: ಸಿಎಂ ಭಾವುಕ ಭಾಷಣ; ಹೋಲ್'ಸೇಲ್' ಆರೋಪ

ನಿಂಬೆ ಹಣ್ಣಿಟ್ಟುಕೊಂಡು ಸರ್ಕಾರವನ್ನು ರಚನೆ ಮಾಡಲು ಸಾಧ್ಯವಿಲ್ಲ.ಹಣ ಕೊಟ್ಟು ಶಾಸಕರನ್ನು, ಅಧಿಕಾರವನ್ನು ಕೊಂಡುಕೊಂಡಿದ್ದೀರಿ ಆದರೆ ಜನರನ್ನು ಹೇಗೆ ಕೊಂಡುಕೊಳ್ಳುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ರೇಣುಕಾಚಾರ್ಯ ಅವರ ಬಗ್ಗೆ ಹಳೆಯ ದಿನಪತ್ರಿಕೆಯ ಪ್ರತಿಯೊಂದನ್ನು ಓದಿ ಕುಮಾರಸ್ವಾಮಿ ಹೇಳಿದರು.

2008ರಲ್ಲಿ ನಿಮ್ಮ ಸರ್ಕಾರ ಏನು ಮಾಡಿದೆ, ಪಕ್ಷಾಂತರ ನಿಷೇದ ಓವರ್ ಕಂ ಮಾಡೋಕೆ ಏನೆಲ್ಲಾ ಮಾಡಿತ್ತು?, ನನಗೆ ಬೋಪಯ್ಯ ಅವರ ಬಗ್ಗೆ ಅನುಕಂಪವಿದೆ.

ಅವರು ಅಂದು ಸದನ ನಡೆಸಿದ್ದು ಹೇಗೆ ಗೊತ್ತಿದೆ, ಈ ಸಭಾಂಗಣಕ್ಕೆ ಪೊಲೀಸರು ಬರುವಂತೆ ಮಾಡಿದ್ದರು, ಬೋಪಯ್ಯನವರು ಅಂದು ಹಾಗೆ ಮಾಡಿದ್ದರು, ಸದನದೊಳಗೆ ಪೊಲೀಸರು ಬರೋಕೆ ಅವಕಾಶವಿದೆಯೇ?, ಆದರೆ ಇಂದು ನೀವು ಹೇಗೆ ಸದನ ನಡೆಸುತ್ತಿದ್ದೀರಿ.

ಪರೋಕ್ಷವಾಗಿ ಮಾಜಿ ಸ್ಪೀಕರ್ ಬೋಪಯ್ಯಗೆ ಕುಟುಕಿದ ಸಿಎಂ, ಇಲ್ಲಿ ರಾಜ್ಯಪಾಲರ ಪ್ರತಿನಿಧಿಗಳು ಬಂದಿದ್ದರು, ಇಂದೂ ಅವರ ಪ್ರತಿನಿಧಿಗಳು ಬಂದಿದ್ದಾರೆ, ಮಿನಿಟ್ ಮಿನಿಟ್ ಏನೋ ಕಳಿಸ್ತಾರೆ, ನಾವು ಅಂಬೇಡ್ಕರ್ ಸಂವಿಧಾನ ಕಾಪಾಡೋಕೆ ಇದ್ದೇವೆ.

ಒಂದೇ ದಿನದಲ್ಲಿ ಮುಗಿಸಬೇಕೆಂಬ ಆತುರ ನಿಮಗೇಕೆ, ವಾಜಪೇಯಿಯವರು 10 ದಿನ ತೆಗೆದುಕೊಂಡಿದ್ದರು, ಸಂಖ್ಯಾಬಲ ಇರುವವರಿಗೆ ಹೆದರಿಕೆ ಯಾಕೆ, ಇಂದೇ ಆಗಬೇಕೆಂಬ ಒತ್ತಾಯವೇಕೆ, ಅಲ್ಲಿಗೆ ಹೋಗಿರುವ ಶಾಸಕರ ಪರಿಸ್ಥಿತಿ ನಮಗೆ ಗೊತ್ತಿದೆ.

ಇಂದಲ್ಲಾ ನಾಳೆ ಅವರೇ ಬಹಿರಂಗ ಪಡಿಸ್ತಾರೆ, ನಿಮ್ಮ ಅಸ್ತ್ರವನ್ನ ನಾನು ಮಾಡೋಕೆ ಆಗ್ತಿರಲಿಲ್ವೇ?, ನಿಮ್ಮ ಶಾಸಕರ ಮೇಲೆ ಪ್ರಯೋಗ ಮಾಡೋಕೆ ಆಗ್ತಿರಲಿಲ್ವೇ?, ಮುಂಬೈನಲ್ಲಿ ಎಷ್ಟು ದಿನ ಶಾಸಕರನ್ನ ಹಿಡಿದಿಡುತ್ತೀರಾ?, ಬೌನ್ಸರ್, ಬಾಕ್ಸರ್ ಇಟ್ಟುಕೊಂಡು ಮಾಡ್ತೀರಾ ಎಂದು ಪ್ರಶ್ನಿಸಿದರು.

ಶಾಸಕರನ್ನ ಯಾರ್ಯಾರು ಕರೆದೊಯ್ದಿದ್ದಾರೆ, ಮುಂಬೈ, ಬಾಂಬೆಗೆ ಎಷ್ಟು ವಿಶೇಷ ವಿಮಾನ ಓಡಾಡಿವೆ, ನಮ್ಮ ಆಟೋಗಳೂ ಅಷ್ಟು ಓಡಿಲ್ಲ, ಅಷ್ಟು ವಿಶೇಷ ವಿಮಾನ ಓಡಾಡಿವೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಅತೃಪ್ತರು ನನ್ನ ಬಳಿ ಬಂದಿದ್ರು

ಬಿಜೆಪಿ ಅಧಿಕಾರದಲ್ಲಿದ್ದಾಗ ಅತೃಪ್ತರು ನನ್ನ ಬಳಿ ಬಂದಿದ್ರು

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅತೃಪ್ತ ಶಾಸಕರು ನನ್ನ ಬಳಿ ಬಂದಿದ್ದಾಗ, ಅವರಿಗೆ ಬುದ್ಧಿ ಹೇಳಿದ್ದೆನೇಯೇ ಹೊರತು ಅವರಿಗೆ ರಾಜೀನಾಮೆ ನೀಡಿ ಎಂದು ಅವರಿಗೆ ಹೇಳಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರೇಣುಕಾಚಾರ್ಯ ಅವರು ಮಂತ್ರಿ ಆಗಲು ನನ್ನನ್ನು ಹೇಗೆ ಬಳಸಿಕೊಂಡರು, ಬಾಲಚಂದ್ರ ಜಾರಕಿಹೊಳಿ ಹೇಗೆ ಬಳಸಿಕೊಂಡರು ಎಂಬುದು ನಾನು ಹೇಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಪಕ್ಷಾಂತರ ಕಾಯ್ದೆ ಓವರ್ ಲ್ಯಾಪ್ ಮಾಡುವ ಪ್ರಯತ್ನ

ಪಕ್ಷಾಂತರ ಕಾಯ್ದೆ ಓವರ್ ಲ್ಯಾಪ್ ಮಾಡುವ ಪ್ರಯತ್ನ

ರಾಜ್ಯಪಾಲರು ನಮಗೆ ನಿರ್ದೇಶನ ಹೊರಡಿಸಿದ್ದಾರೆ ಪಕ್ಷಾಂತರ ಕಾಯ್ದೆಯನ್ನು ಓವರ್ ಲಾಪ್ ಮಾಡುವ ಪ್ರಯತ್ನ ನಡೆದಿದೆ, ನಾನು ಎಲ್ಲಾ ರಾಜ್ಯಗಳ ತೀರ್ಪನ್ನ ಗಮನಿಸಿದ್ದೇನೆ ಹಿಂದೆಯೂ ಸಮ್ಮಿಶ್ರ ಸರ್ಕಾರವಿತ್ತು, ಧರ್ಮಸಿಂಗ್ ಅವಧಿಯಲ್ಲಿ 20 ತಿಂಗಳ ಆಡಳಿತವಿತ್ತು. ನಂತರ ಯಡಿಯೂರಪ್ಪ ಜೊತೆ ಸರ್ಕಾರ ರಚಿಸಿದ್ದೆವು.

ಆಗಲೂ ನನ್ನ ಮೇಲೆ ಹಲವು ಆರೋಪ ಎದುರಾಗಿದ್ದವು 12 ವರ್ಷದಲ್ಲಿ ಹಲವು ನಿರ್ಧಾರ ತೆಗೆದುಕೊಂಡಿದ್ದೆ, ಬಿಜೆಪಿ ನಾಯಕರ ಒತ್ತಾಯಕ್ಕೆ ನಾನು ಕೈಜೋಡಿಸಿದ್ದೆ ಚುನಾವಣೆ ಎದುರಿಸುವುದು ಬೇಡ,ಆಸ್ತಿ,ಪಾಸ್ತಿ ಕಳೆದುಕೊಂಡಿದ್ದೇವೆ, ಮತ್ತೆ ಚುನಾವಣೆ ಬೇಡ ಅಂತ ಕಾರಜೋಳ ಹೇಳಿದ್ದರು. ಹಾಗಾಗಿ ಅಂದು ಬಿಜೆಪಿ ಜೊತೆ ಕೈಜೋಡಿಸಿದ್ದೆ ಎಂದರು.

ಬ್ರದರ್ ಕುಮಾರಸ್ವಾಮಿ ಬೈಬಲ್‌ನ 'Judgement Day' ನೆನಪಿಸಿಕೊಂಡಿದ್ದೇಕೆ?ಬ್ರದರ್ ಕುಮಾರಸ್ವಾಮಿ ಬೈಬಲ್‌ನ 'Judgement Day' ನೆನಪಿಸಿಕೊಂಡಿದ್ದೇಕೆ?

ತಂದೆಯನ್ನು ಎದುರು ಹಾಕಿಕೊಂಡು ಬಿಜೆಪಿ ಜೊತೆ ಕೈ ಜೋಡಿಸಿದ್ದೆ

ತಂದೆಯನ್ನು ಎದುರು ಹಾಕಿಕೊಂಡು ಬಿಜೆಪಿ ಜೊತೆ ಕೈ ಜೋಡಿಸಿದ್ದೆ

ನಮ್ಮ ತಂದೆಯವರನ್ನ ಎದುರು ಹಾಕಿ ಕೈಜೋಡಿಸಿದ್ದೆ, ರಾಜ್ಯದಲ್ಲಿ ಪ್ರಥಮ ಸಮ್ಮಿಶ್ರ ಸರ್ಕಾರ ರಚಿಸಿದ್ದೆ, 20 ತಿಂಗಳ ಆಡಳಿತದಲ್ಲಿ ನನ್ನಿಂದ ಚ್ಯುತಿಯಾಗಲಿಲ್ಲ ಅಂದೂ ಅಧಿಕಾರ ಕೊಡಲು ನಾನು ತಯಾರಿದ್ದೆ, ಆದರೂ ನನ್ನನ್ನ ವಚನ ಭ್ರಷ್ಟ ಅಂತ ಆರೋಪಿಸಿದ್ದರು, 2008 ರಲ್ಲಿ ಬಿಜೆಪಿ ಸರ್ಕಾರ‌ ರಚನೆಯಾಗಿತ್ತು. ಒಂದೇ ತಿಂಗಳಲ್ಲಿ ಪಕ್ಷೇತರರು ಕೈಕೊಡೋಕೆ ರೆಡಿಯಾಗಿದ್ದರು. ವೆಂಕಟರಮಣಪ್ಪ,ಗೂಳಿಹಟ್ಟಿ ಶೇಖರ್ ಬಂದಿದ್ದರು.

ನನ್ನ ಬಳಿ ಬಂದು ಬೇರೆ ಸರ್ಕಾರ ರಚನೆ ಮಾಡುವಂತೆ ಹೇಳಿದ್ದರು. ಈ ಸರ್ಕಾರ ರಚನೆಯಾದಾಗಿನಿಂದ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾನೂನು ತಿರುಚುವ ಪ್ರಯತ್ನಗಳೂ ನಡೆದಿವೆ.

2008ರಲ್ಲಿ ಶಾಸಕರಿಗೆ ರಾಜೀನಾಮೆ ಕೊಡಸಲಿಲ್ಲ

2008ರಲ್ಲಿ ಶಾಸಕರಿಗೆ ರಾಜೀನಾಮೆ ಕೊಡಸಲಿಲ್ಲ

ಪಕ್ಷಾಂತರ ನಿಷೇಧ ಕಾಯ್ದೆಗೂ ಭಂಗ ಬಂದಿದೆ, 2008ರಲ್ಲಿ ಶಾಸಕರನ್ನು ನಾವು ರಾಜಿನಾಮೆ ಕೊಡಿಸಲಿಲ್ಲ, ಆ ಕೆಲಸವನ್ನ ನಾವ್ಯಾರೂ ಮಾಡಲಿಲ್ಲ, ಆದರೆ ರಾಜೀನಾಮೆ ಕೊಡಿಸುವ ಕೆಲಸ ಅಲ್ಲಿಂದಲೇ ನಡೆಯಿತು , ಜಡ್ಜ್ ಮೆಂಟ್ ಡೇ ಅನ್ನೋದು ಎಲ್ಲರಿಗೂ ಬರುತ್ತದೆ. ಇಲ್ಲಿ ಅಲ್ಲದಿದ್ದರೂ ಮೇಲೆ ಬರುತ್ತದೆ.

ತಪ್ಪಿದ ಬಿಜೆಪಿ ಲೆಕ್ಕಾಚಾರ ; 1 ದಿನ ಸರ್ಕಾರ ಉಳಿಸಿದ ಸಿದ್ದರಾಮಯ್ಯ!ತಪ್ಪಿದ ಬಿಜೆಪಿ ಲೆಕ್ಕಾಚಾರ ; 1 ದಿನ ಸರ್ಕಾರ ಉಳಿಸಿದ ಸಿದ್ದರಾಮಯ್ಯ!

ಬಹುಮತ ಸಾಬೀತಿಗೆ ಇಂದೇ ಕೊನೆಯ ದಿನವಲ್ಲ

ಬಹುಮತ ಸಾಬೀತಿಗೆ ಇಂದೇ ಕೊನೆಯ ದಿನವಲ್ಲ

ಸರ್ಕಾರಕ್ಕೆ ಬಹುಮತ ಇಲ್ಲ ಅಂತ ಬಿಎಸ್ ವೈ ಹೇಳ್ತಿದ್ದಾರೆ, ಬಹುಮತ ಸಾಬೀತಿಗೆ ಇವತ್ತೇ ಕೊನೆಯಲ್ಲ ಸೋಮವಾರ,ಮಂಗಳವಾರವೂ ಮಾಡಬಹುದು, ನಾವು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ, ಪಕ್ಷಾಂತರ ಕಾಯ್ದೆ ಜಾರಿಗೆ ತಂದವರು ರಾಜೀವ್ ಗಾಂಧಿ 1985ರಲ್ಲಿ ಕಾಯ್ದೆ ಜಾರಿಗೆ ತಂದರು. ಆಗ 400 ಕ್ಕೂ ಹೆಚ್ಚು ಸೀಟು ಅವರಿಗಿತ್ತು.

ಪ್ರಧಾನಿಗೆ ಬಂದಿರುವ ಸೀಟು ಶಾಶ್ವತವಲ್ಲ

ಪ್ರಧಾನಿಗೆ ಬಂದಿರುವ ಸೀಟು ಶಾಶ್ವತವಲ್ಲ

ಈಗ ಪ್ರಧಾನಿಯವರಿಗೂ 300 ಸೀಟು ಬಂದಿರಬಹುದು, ಆದರೆ ಯಾವುದೂ ಶಾಶ್ವತವಲ್ಲ, ನಿಮ್ಮ ಶಾಸಕರನ್ನ ಕಾಯೋಕೆ ಐದೈದು ಜನ ಹಾಕಿದ್ದೀರಾ, ನಾನು ನನ್ನ ಕುರ್ಚಿಗೆ ಮಹತ್ವ ಕೊಟ್ಟಿಲ್ಲ. ನನಗೆ ಕುರ್ಚಿ ಮುಖ್ಯವಲ್ಲ, ನಿಮಗೂ ಕುರ್ಚಿ ಮುಖ್ಯವಲ್ಲ.

ನೀವು ಎಷ್ಟು ದಿನ ಇಲ್ಲಿ ಕೂರ್ತೀರಿ, ನಾವು ನೋಡ್ತೇವೆ, ಏನೆನೆಲ್ಲಾ ಹರಸಾಹಸ ಮಾಡ್ತೀರಾ ನೋಡ್ತೇನೆ, ರೇಣುಕಾಚಾರ್ಯ ಹೇಗೆ ಮಂತ್ರಿ ಆದ್ರು, ನ್ನನ್ನ ಹೇಗೆ ಉಪಯೋಗಿಸಿಕೊಂಡ್ರು ಗೊತ್ತಿದೆ

ಎಂತಹ ಕಷ್ಟ ಬಂದರೂ ಎದುರಿಸುವ ಶಕ್ತಿ ನನಗಿದೆ

ಎಂತಹ ಕಷ್ಟ ಬಂದರೂ ಎದುರಿಸುವ ಶಕ್ತಿ ನನಗಿದೆ

ಎಂತಹ ಕಷ್ಟ ಬಂದ್ರೂ ಎದುರಿಸುವ ಶಕ್ತಿ ನನಗಿದೆ, ನಿಂಬೆ ಹಣ್ಣು ರೇವಣ್ಣ ಅಂತ ಹೇಳಿದ್ದಾರೆ, ಮಾಟ ಮಂತ್ರ ಮಾಡುವ ಕುಟುಂಬ ಅಂದಿದ್ದಾರೆ, ರಾಮನ ಹೆಸರೇಳಿ ಅಧಿಕಾರಕ್ಕೆ ಬಂದವರು ನೀವು ನೀವೂ ದೇವಸ್ಥಾನಕ್ಕೆ ಹೋಗ್ತೀರ, ಏಲಕ್ಕಿ ಹಾರ ಹಾಕಿದ್ರೆ ಮಾಠಮಂತ್ರ ಮಾಡ್ತಾರೆ ಅಂತಾರೆ, ಮಾಠ ಮಾಡಿ ಸರ್ಕಾರ ಉಳಿಸಿಕೊಳ್ಳಬಹುದಿತ್ತಲ್ಲಾ, ಹಿಂದೆ ಯಡಿಯೂರಪ್ಪ ಇಳಿಸೋಕೆ ಇವರೆಲ್ಲಾ ಓಡಿಹೋಗಿದ್ರು. ಹಿಂದೆ ಯಡಿಯೂರಪ್ಪನವರ ವಿರುದ್ಧ ಷಡ್ಯಂತ್ರ ಮಾಡಿದ್ರು, ಈಗ ಯಡಿಯೂರಪ್ಪನವರನ್ನು ಉಳಿಸೋಕೆ ಬಂದಿದ್ದಾರೆ ಎಂದರು.

English summary
Chief Minister HD Kumaraswamy counters BJP that we do not belong to black magic family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X