ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾನಗರದ ಕರಾಚಿ ಬೇಕರಿ ಪ್ರಕರಣ, 9 ಮಂದಿ ಬಂಧನ

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಇಂದಿರಾನಗರದಲ್ಲಿರುವ ಕರಾಚಿ ಬೇಕರಿಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ 9 ಮಂದಿಯನ್ನು ಬಂಧಿಸಲಾಗಿದೆ. ಹೈದರಾಬಾದ್ ಮೂಲಕ ಕರಾಚಿ ಬೇಕರಿ ಮಾಲೀಕರು ಸ್ಪಷ್ಟನೆ ನೀಡಿದ್ದು, ನಾವು ಭಾರತೀಯರೇ ಎಂದಿದ್ದಾರೆ.

ಇತ್ತೀಚೆಗೆ ಕರಾಚಿ ಬೇಕರಿಗೆ ಬಂದಿದ್ದ ಗುಂಪೊಂದು ಬೇಕರಿಯ ಬೋರ್ಡ್ ನಲ್ಲಿದ್ದ 'ಕರಾಚಿ' ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿ, ಕರಾಚಿ ಹೆಸರಿನ ಮೇಲೆ ಭಾರತದ ಬಾವುಟ ಹಾಕಿದ್ದರು. ಪಾಕಿಸ್ತಾನದ ಜತೆ ಬೇಕರಿಗೆ ಸಂಪರ್ಕ ಇದೆ ಎಂದು ಆರೋಪಿಸಿದ್ದರು.

ಬೇಕರಿಯಲ್ಲಿ 'ಕರಾಚಿ' ತೆಗೆಸಿದವರು ರಾಜದೀಪ್ ಪಾಲಿಗೆ ಗೂಂಡಾಗಳುಬೇಕರಿಯಲ್ಲಿ 'ಕರಾಚಿ' ತೆಗೆಸಿದವರು ರಾಜದೀಪ್ ಪಾಲಿಗೆ ಗೂಂಡಾಗಳು

1953ರಲ್ಲಿ ಹೈದಾರಾಬಾದಿನಲ್ಲಿ ಸಿಂಧಿ ಜನಾಂಗದ ಖಾನ್ ಚಂದ್ ರಮ್ನಾನಿ ಅವರು ಆರಂಭಿಸಿದ ಕರಾಚಿ ಬೇಕರಿಯ ಬಿಸ್ಕಟ್, ಕೇಕ್ ಗಳು ತುಂಬಾ ಜನಪ್ರಿಯವಾಗಿವೆ.

We are Indian, says Karachi Bakery after protest over Pulwama attack

ಕರಾಚಿ ಬೇಕರಿಯು ಹೃದಯದಿಂದ ಭಾರತೀಯವಾಗಿದೆ ಹಾಗೂ ಭಾರತೀಯತೆಯ ಪ್ರತೀಕವಾಗೇ ಉಳಿಯಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಎಲ್ಲರನ್ನು ಕೇಳುತ್ತೇವೆ ಎಂದು ಸಂಸ್ಥೆಯ ಫೇಸ್ಬುಕ್ ನಲ್ಲಿ ಬರೆದುಕೊಂಡಿದೆ.

ಕರಾಚಿ ಬೇಕರಿ ಹೈದರಾಬಾದಿನ ಮೊಜ್ಜಾರಂ ಜಾಹಿ ಮಾರ್ಕೆಟ್ ನಲ್ಲಿ ಸ್ಥಾಪನೆಯಾಗಿದ್ದು ಎಂದು ಹಲವರಿಗೆ ಗೊತ್ತಿದೆ ನಂತರ ಸಿಕಂದರಾಬಾದ್ ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ಹೊಂದಿತು.

ಈಗ ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕರಾಚಿ ಬೇಕರಿಯನ್ನು ಕಾಣಬಹುದು.

English summary
Hyderabad-based Karachi Bakery on Saturday clarified it is an Indian company and urged all to refrain from any misconceptions.The clarification came after protest at one of its outlets in Bengaluru, demanding the change of name for its connection with Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X