ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ನೀರಿನ ಸಮಸ್ಯೆ ಶೀಘ್ರವೇ ಕೊನೆ, ಇಲ್ಲಿದೆ ಮಾಹಿತಿ!

|
Google Oneindia Kannada News

ಬೆಂಗಳೂರು,ಜು.11: ಬೆಂಗಳೂರಿನಲ್ಲಿ ಕುಡಿಯುವ ನೀರು ನಿಲ್ಲದ ಸಮಸ್ಯೆಯಾಗಿದೆ. ಬೆಂಗಳೂರಿಗೆ ನೀರು ಒದಗಿಸುವ ಸವಾಲು ದಿನ ದಿನಕ್ಕೆ ಬೆಳೆಯುತ್ತಲೇ ಇದೆ. ಹಾಗಾಗಿ ಮುಂದಿನ 30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಜಲಮಂಡಳಿ ಬೆಂಗಳೂರಿಗೆ ಹೆಚ್ಚುವರಿ ನೀರು ತರುವ ಪ್ರಯತ್ನಕ್ಕೆ ಮುಂದಾಗಿದೆ. ಈಗ ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಂಡಿದೆ.

ಜಪಾನ್‌ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯಿಂದ ಜಲಮಂಡಳಿ ಒಟ್ಟು 5500 ಕೋಟಿ ಸಾಲ ಪಡೆದಿದ್ದು, ಇದರಲ್ಲಿ 2940 ಕೋಟಿ ಹಣವನ್ನು ಕಾವೇರಿ 5ನೇ ಹಂತದ ಯೋಜನೆಗೆ ಹಾಗೂ ಒಳಚರಂಡಿ, ಪೈಪ್‌ಲೈನ್‌, ಕಾಮಗಾರಿಗಳಿಗೆ ಬಳಸಲು ಉದ್ದೇಶಿಸಲಾಗಿದೆ. ಯೋಜನೆ ಪೂರ್ಣಗೊಳಿಸಲು ಜಪಾನ್‌ ಸಂಸ್ಥೆ 2023ರ ಮಾರ್ಚ್‌ ಇಲ್ಲವೇ ಆಗಸ್ಟ್‌ವರೆಗೆ ಗಡುವು ನೀಡಿದೆ. ಆದರೆ ಕಾಮಗಾರಿ ಕೆಲಸ ತ್ವರಿತಗತಿಯಲ್ಲಿ ಮುಗಿಸುತ್ತಿರುವ ಬೆಂಗಳೂರು ಜಲಮಂಡಳಿಯು ಇದೇ ಡಿಸೆಂಬರ್‌ ವೇಳೆಗೆ ಎಲ್ಲ ಕೆಲಸ ಮುಗಿಸುವ ಗುರಿ ಹಾಕಿಕೊಂಡಿದೆ. ಹೀಗಾಗಿ ಮುಂದಿನ ಆರೇ ಬೆಂಗಳೂರಿಗೆ 775 ಎಂಎಲ್‌ಡಿ ನೀರು ಲಭ್ಯವಾಗಲಿದೆ.

Bengalurus water problem will end soon, Cauvery 5th phase project details

ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕೆರೆಕಟ್ಟೆಗಳು ತುಂಬುತ್ತಿವೆ. ಅಂತರ್ಜಲ ಮಟ್ಟವೂ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಸದ್ಯ ಇರುವ 1.30 ಕೋಟಿ ಜನರಿಗೆ ನಿತ್ಯ ಸುಮಾರು 1430ಕ್ಕೂ ಅಧಿಕ ದಶಲಕ್ಷ ಲೀಟರ್‌(ಎಂಎಲ್‌ಡಿ) ನೀರನ್ನು ಬೆಂಗಳೂರು ಜಲಮಂಡಳಿ ಪೂರೈಸುತ್ತಿದೆ. 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಒಟ್ಟು 225 ಚದರ ಕಿಲೋಮಿಟರ್‌ನ 110 ಹಳ್ಳಿಗಳ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದ ಜೊತೆಗೆ ಭವಿಷ್ಯದಲ್ಲಿ ಹೆಚ್ಚಾಗಲಿರುವ ಜನಸಂಖ್ಯೆ ಆಧಾರದಲ್ಲಿ ಜಲಮಂಡಳಿಯು ಕಾವೇರಿ ನೀರಿನ ಐದನೇ ಹಂತದ ಯೋಜನೆ ಕೈಗೆತ್ತಿಕೊಂಡಿದೆ. ಈ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯೋಜನೆಯಡಿ ಮುಂದಿನ 30 ವರ್ಷಕ್ಕೆ ಬೇಕಾಗುವಷ್ಟು ಹೆಚ್ಚುವರಿ 775 ಎಂಎಲ್‌ಡಿ ನೀರು ಬೆಂಗಳೂರಿಗೆ ಲಭ್ಯವಾಗಲಿದೆ.

Bengalurus water problem will end soon, Cauvery 5th phase project details

ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡ ಹಳ್ಳಿಗಳು ಸೇರಿದಂತೆ ನಗರದಲ್ಲಿ2049ರ ವೇಳೆಗೆ 50 ಲಕ್ಷ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಅಷ್ಟು ಜನರಿಗೆ ಲಭ್ಯವಾಗುವ ನೀರನ್ನು ಏದನೇ ಹಂತದ ಯೋಜನೆಯಡಿ ಪೈಪ್‌ಲೈನ್‌ಗಳ ಮೂಲಕ ನೀರು ಶುದ್ದೀಕರಣ ಘಟಕಗಳಿಗೆ ಹರಿಸಿ ನೆಲಮಟ್ಟದ ನೀರು ಸಂಗ್ರಹಾಗಾರಗಳ ಮೂಲಕ ಮನೆ ಮನೆಗೆ ನೀರು ಪೂರೈಸಲಾಗುವುದು. ಈ ಸಂಬಂಧ ಈಗಾಗಲೇ 2686 ಕಿಮೀ. ಕೊಳವೆ ಜೋಡಣಾ ಕಾರ್ಯ ಹಮ್ಮಿಕೊಂಡಿತ್ತು. ಏಳು ಕಡೆಗಳಲ್ಲಿ 260 ಎಂಎಲ್‌ಡಿ ಸಾಮಾರ್ಥ್ಯದ ಜಲಸಂಗ್ರಹಾರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.

Recommended Video

ದೇವೇಗೌಡರ ಮನೆಯ ತುಳಸಿ ಕಟ್ಟೆಗೆ ನಮಸ್ಕರಿಸಿದ ದ್ರೌಪದಿ ಮುರ್ಮು | *Politics | OneIndia Kannda

English summary
Keeping in mind the next 30 years, Jalmandali has started an effort to bring additional water to Bangalore. Now Cauvery 5th phase project has been completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X