ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಕಾದಿದೆ ಮತ್ತೊಂದು ಆಘಾತ: ಶೀಘ್ರ ನೀರಿನ ದರ ಹೆಚ್ಚಳ

|
Google Oneindia Kannada News

ಬೆಂಗಳೂರು, ಜನವರಿ 3: ಹಾಲು, ಅಡುಗೆ ಅನಿಲ ಸಿಲಿಂಡರ್, ರೈಲ್ವೆ ಪ್ರಯಾಣ ದರ ಏರಿಕೆಯಾಗಿರುವ ಬೆನ್ನಲ್ಲೇ ಈಗ ಮತ್ತೊಂದು ಬೆಲೆ ಏರಿಕೆ ಬಿಸಿ ಬೆಂಗಳೂರಿಗರಿಗೆ ತಟ್ಟಲಿದೆ.

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಜಲಮಂಡಳಿಯವರು ಶೀಘ್ರದಲ್ಲೇ ನೀರಿನ ಪ್ರಸ್ತುತ ದರವನ್ನು ಪರಿಷ್ಕರಣೆ ಮಾಡಲು ಮುಂದಾಗಿದ್ದು, ಸದ್ಯದಲ್ಲೇ ನೀರಿನ ದರ ಏರಿಕೆಯಾಗುವ ಸಾಧ್ಯತೆ ಇದೆ.

ನೀರು ದರ ಹೆಚ್ಚಳಕ್ಕೆ ಬ್ರೇಕ್ ಹಾಕಿದ ಜಲಮಂಡಳಿನೀರು ದರ ಹೆಚ್ಚಳಕ್ಕೆ ಬ್ರೇಕ್ ಹಾಕಿದ ಜಲಮಂಡಳಿ

ಈಗಿರುವ ನಿರ್ವಹಣೆಗೂ ಬಳಕೆದಾರರ ಶುಲ್ಕ ಪಾವತಿಗೂ ಅಜಗಜಾಂತರ ವ್ಯತ್ಯಾಸ ಇರುವುದರಿಂದ ದರ ಏರಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. 2013ರ ಜುಲೈನಲ್ಲಿ ದರವನ್ನು ಪರಿಷ್ಕರಣೆ ಮಾಡಲಾಗಿತ್ತು.

ಆ ವೇಳೆ ಅಪಾರ್ಟ್‍ಮೆಂಟ್‍ಗಳು, ಕೇಂದ್ರ-ರಾಜ್ಯ ಸರ್ಕಾರಗಳ ವಸತಿಗೃಹಗಳು, ವಿಲ್ಲಾಗಳಿಗೆ ಅನ್ವಯವಾಗುವಂತೆ ದರ ಏರಿಕೆ ಮಾಡಿದ್ದೆವು. ಪ್ರಸ್ತುತ ವಾಣಿಜ್ಯ ಬಳಕೆ, ಗೃಹ ಬಳಕೆ, ಖಾಸಗಿದಾರರು, ಅಪಾರ್ಟ್‍ಮೆಂಟ್‌ಗಳು, ಕೈಗಾರಿಕೆಗಳಿಗೆ ಹಾಲಿ ಇರುವ ದರವನ್ನು ಪರಿಷ್ಕರಿಸಲೇಬೇಕು.

ಮಳೆ ನೀರು ಕೊಯ್ಲು : ಜಲಮಂಡಳಿಯಿಂದ ದಂಡ ಮೊತ್ತ ಹೆಚ್ಚಳಮಳೆ ನೀರು ಕೊಯ್ಲು : ಜಲಮಂಡಳಿಯಿಂದ ದಂಡ ಮೊತ್ತ ಹೆಚ್ಚಳ

1200 ಚದರ ಅಡಿ ಕೇಂದ್ರದಲ್ಲಿ ಒಂದು ಮಹಡಿಗಿಂತ ಹೆಚ್ಚು ನಿರ್ಮಿಸುವ ಅಥವಾ ಒಂದೇ ಕಟ್ಟಡದಲ್ಲಿ 3 ಅಡುಗೆ ಕೋಣೆಗಳಿದ್ದರೆ ಪ್ರತಿ ಚದರ ಮೀಟರ್‍ಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು 250ರಿಂದ 400 ರೂ.ಗೆ ಹೆಚ್ಚಿಸಬೇಕು. ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಳ್ಳದಿದ್ದರೆ ಮಂಡಳಿ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೀರಿನ ದರ ಎಷ್ಟು ಹೆಚ್ಚಳ

ನೀರಿನ ದರ ಎಷ್ಟು ಹೆಚ್ಚಳ

ಈ ಸಂಬಂಧ ಜಲಮಂಡಳಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತುತ ಮಂಡಳಿಯನ್ನು ನಿರ್ವಹಣೆ ಮಾಡಲು ಹಣಕಾಸು ಮುಗ್ಗಟ್ಟು ಎದುರಾಗಿರುವುದರಿಂದ ಶೇ.30ರಿಂದ 35ರಷ್ಟು ನೀರಿನ ದರ ಏರಿಕೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

ಜಲಮಂಡಳಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಈ ಪ್ರಸ್ತಾವನೆ ಕಡತ ಮುಖ್ಯಮಂತ್ರಿಗಳ ಕಚೇರಿ ತಲುಪಿದೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ಅಧಿಕಾರಿಗಳ ಸಭೆಯ ಕರೆದು ಅಂತಿಮ ತೀರ್ಮಾನ

ಯಡಿಯೂರಪ್ಪ ಅಧಿಕಾರಿಗಳ ಸಭೆಯ ಕರೆದು ಅಂತಿಮ ತೀರ್ಮಾನ

ಬೆಂಗಳೂರು ಜಲಮಂಡಳಿ ಪ್ರಸ್ತುತ ಮುಖ್ಯಮಂತ್ರಿ ಯಡಿಯೂರಪ್ಪನವರೇ ನೋಡಿಕೊಳ್ಳುತ್ತಿರುವುದರಿಂದ ಈ ವಾರದಲ್ಲಿ ಅಧಿಕಾರಿಗಳು ಸಭೆ ಕರೆದು ನೀರಿನ ದರ ಏರಿಕೆ ಮಾಡುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಗೃಹ, ವಾಣಿಜ್ಯ ಮತ್ತು ಕೈಗಾರಿಕೆಗೆ ಬಳಸುವ ಮಾಸಿಕ ಶುಲ್ಕ ಕಡಿಮೆ

ಗೃಹ, ವಾಣಿಜ್ಯ ಮತ್ತು ಕೈಗಾರಿಕೆಗೆ ಬಳಸುವ ಮಾಸಿಕ ಶುಲ್ಕ ಕಡಿಮೆ

ಗೃಹ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗೆ ಬಳಸುವ ನೀರಿನ ಮಾಸಿಕ ಶುಲ್ಕವು ಕಡಿಮೆಯಾಗಿದೆ. ಪ್ರಸ್ತುತ ಮಾಸಿಕವಾಗಿ ಜಲಮಂಡಳಿಗೆ ನೂರು ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ಇದರಲ್ಲಿ 60 ಕೋಟಿಗೂ ಹೆಚ್ಚು ಹಣ ವಿದ್ಯುತ್ ಶುಲ್ಕಕ್ಕೆ ಪಾವತಿ ಮಾಡಬೇಕು.

2013ರಲ್ಲಿ ನೀರಿನ ದರ ಏರಿಕೆಯಾಗಿತ್ತು

2013ರಲ್ಲಿ ನೀರಿನ ದರ ಏರಿಕೆಯಾಗಿತ್ತು

ಕಚೇರಿ ನಿರ್ವಹಣೆ, ಸಿಬ್ಬಂದಿ ವೇತನ, ಪೈಪ್‍ಗಳ ದುರಸ್ತಿ ಸೇರಿದಂತೆ ಪ್ರತಿ ತಿಂಗಳ ನಿರ್ವಹಣೆಗೆ ಹಣದ ಸಮಸ್ಯೆ ಇರುವುದರಿಂದ ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಹಿಂದೆ 2013ರಲ್ಲಿ ಮಾತ್ರ ನೀರಿನ ದರವನ್ನು ಏರಿಕೆ ಮಾಡಲಾಗಿತ್ತು. ತದನಂತರ ದರವನ್ನು ಪರಿಷ್ಕರಿಸಲು ಸಾಧ್ಯವಾಗಿಲ್ಲ.

ಬೆಸ್ಕಾಂಗೆ 60 ಕೋಟಿ ರೂ ವಿದ್ಯುತ್ ಶುಲ್ಕ ಪಾವತಿ

ಬೆಸ್ಕಾಂಗೆ 60 ಕೋಟಿ ರೂ ವಿದ್ಯುತ್ ಶುಲ್ಕ ಪಾವತಿ

ಪ್ರತಿ ವರ್ಷವು ವಿದ್ಯುತ್ ದರ ಏರಿಕೆಯಾಗುವುದರಿಂದ ಮಂಡಳಿ ತಿಂಗಳಿಗೆ 60 ಕೋಟಿಗೂ ಅಧಿಕ ಶುಲ್ಕವನ್ನು ಪಾವತಿಸುತ್ತಿದೆ. ನಮಗೆ ಮಂಡಳಿಯನ್ನು ನಿರ್ವಹಣೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ನೋವು ತೋಡಿಕೊಂಡಿದ್ದಾರೆ. ನೌಕರರ ವೇತನ, ವಿದ್ಯುತ್ ದರ, ಕಾರ್ಯಾಚರಣೆ, ನಿರ್ವಹಣೆ ವೆಚ್ಚ, ಇಂಧನ ದರ ಏರಿಕೆ ಅಂಶಗಳನ್ನು ಪರಿಗಣಿಸಿ ಸರ್ಕಾರ ದರ ಏರಿಕೆಗೆ ಅನುಮತಿ ನೀಡಬೇಕು.

English summary
Milk cylinders, rail travel prices have gone up and another price hike is now on the heels. BWSSB will increase Water Price this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X