ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ; ಬೆಂಗಳೂರಲ್ಲಿ ಮಳೆ, ಕೊಚ್ಚಿ ಹೋದ ರಸ್ತೆ

|
Google Oneindia Kannada News

ಬೆಂಗಳೂರು, ಜೂನ್ 25 : ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಗಿದೆ. ವೃಷಭಾವತಿ ತುಂಬಿ ಹರಿದಿದ್ದು, ತಡೆ ಗೋಡೆ ಕೊಚ್ಚಿ ಹೋಗಿ ಮೈಸೂರು ರಸ್ತೆ ಕುಸಿದು ಹೋಗಿದೆ.

ಗುರುವಾರ ಸಂಜೆ 4.30ರ ಸುಮಾರಿಗೆ ನಗರದಲ್ಲಿ ಮಳೆ ಆರಂಭವಾಯಿತು. 6.30ರ ತನಕ ಗುಡುಗು ಮತ್ತು ಸಿಡಿಲಿನ ಜೊತೆಗೆ ಮಳೆ ಸುರಿದಿದೆ. ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಮಳೆ ಆರಂಭವಾಗಿದೆ.

ಬೆಂಗಳೂರಲ್ಲಿ ಭಾರಿ ಗಾಳಿ, ಮಳೆ; ಮರಗಳು ಧರೆಗೆ ಬೆಂಗಳೂರಲ್ಲಿ ಭಾರಿ ಗಾಳಿ, ಮಳೆ; ಮರಗಳು ಧರೆಗೆ

ನಗರದಲ್ಲಿ ಸುರಿದ ಮಳೆಯಿಂದಾಗಿ ವೃಷಭಾವತಿ ತುಂಬಿ ಹರಿಯಿತು. ಇದರಿಂದಾಗಿ ಕೆಂಗೇರಿ ಬಳಿಯ ದುಬಾಸಿಪಾಳ್ಯದಲ್ಲಿ ನದಿಗೆ ಕಟ್ಟಲಾಗಿದ್ದ ತಡೆಗೋಡೆ ಕೊಚ್ಚಿ ಹೋಗಿದೆ. ಇದರಿಂದಾಗಿ ಹಲವು ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಜೂನ್ 24ರಿಂದ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ ಜೂನ್ 24ರಿಂದ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ

Water Level Of Vrishabawathi River Continues To Rise

ಬೆಂಗಳೂರು-ಮೈಸೂರು ಸಂಪರ್ಕಿಸುವ ರಸ್ತೆ ಸುಮಾರು 3 ಅಡಿಯಷ್ಟು ಕುಸಿದು ಹೋಗಿದೆ. ಶುಕ್ರವಾರವೇ ರಸ್ತೆ ದುರಸ್ಥಿ ಕಾರ್ಯ ಆರಂಭಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಯೋಜನೆ: ಸಚಿವ ಸಿಸಿ ಪಾಟೀಲ್‌ ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಯೋಜನೆ: ಸಚಿವ ಸಿಸಿ ಪಾಟೀಲ್‌

ವೃಷಭಾವತಿ ತುಂಬಿ ಹರಿಯುತ್ತಿರುವ ಮತ್ತು ತಡೆ ಗೋಡೆ ಕುಸಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃಷಭಾವತಿ ನೀರಿನಲ್ಲಿ ಹಲವು ವಾಹನಗಳು ಸಹ ಸಿಕ್ಕಿ ಹಾಕಿಕೊಂಡಿರುವ ಫೋಟೋಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.

ವೈರಲ್ ಆಗಿರುವ ವಿಡಿಯೋ

English summary
Bengaluru witnessed heavy rainfall in different parts of the city. Water level of Vrishabawathi river continues to rise. Video goes viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X