ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ದಿನ ಇಡೀ ಬೆಂಗಳೂರಿಗೆ ನೀರು ಸರಬರಾಜು ಇರಲ್ಲ

|
Google Oneindia Kannada News

Recommended Video

Bengaluru : ಜುಲೈ 21 ಹಾಗು 22 ಎರಡು ದಿನ ಬೆಂಗಳೂರಿನಲ್ಲಿ ನೀರಿನ ಸರಬರಾಜು ಇಲ್ಲ

ಬೆಂಗಳೂರು, ಜುಲೈ 19: ಈ ಬಾರಿ ಮುಂಗಾರು ಕೈಕೊಟ್ಟಿದ್ದು ಬೆಂಗಳೂರಲ್ಲಿ ನೀರಿಗೆ ಹಾಹಾಕಾರವೆದ್ದಿದೆ. ಇಷ್ಟೆಲ್ಲಾ ಬೇಡಿಕೆ ನಡುವೆಯೇ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

220ಕೆವಿ ಮೀಟರಿಂಗ್ ಕೆಲಸ ನಡೆಯುತ್ತಿರುವ ಕಾರಣ ಎರಡು ದಿನ ಬೆಂಗಳೂರಿನಾದ್ಯಂತ ನೀರಿನ ವ್ಯತ್ಯಯ ಉಂಟಾಗಲಿದೆ. ಸಿಎಬ್ಲ್ಯೂಎಸ್‌ಎಸ್ ಸ್ಟೇಜ್ 1,2,3, ಹಾಗೂ 4, ಟಿಕೆ ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ ಪಂಪಿಂಗ್ ಸಿಸ್ಟ್ಂ 1-2 ನೇ ಹಂತದಲ್ಲಿ ಕಾಮಗಾರಿ ನಡೆಯಲಿದೆ.

ಕೈಕೊಟ್ಟ ಮುಂಗಾರು,ಕೆಟ್ಟ ಬೋರ್‌ವೆಲ್: ಬೆಂಗಳೂರಲ್ಲಿ ನೀರಿಗೆ ಹಾಹಾಕಾರಕೈಕೊಟ್ಟ ಮುಂಗಾರು,ಕೆಟ್ಟ ಬೋರ್‌ವೆಲ್: ಬೆಂಗಳೂರಲ್ಲಿ ನೀರಿಗೆ ಹಾಹಾಕಾರ

ಎರಡು ದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರಿನ ಹಲವು ಕೆರೆಗಳು ಬತ್ತಿಹೋಗಿವೆ, ಇನ್ನೂ ಕೆಲವು ಕೆರೆಗಳಲ್ಲಿರುವ ನೀರು ಬಳಕೆಗೆ ಯೋಗ್ಯವಾಗಿಲ್ಲ, ಇನ್ನೂ ಕೆಲವು ಕೆರೆಗಳ ಮೇಲೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿವೆ.

Water interruption in Entire Bengaluru on July 21 and 22

ಇನ್ನು ಮುಂದೆ ಸುರಿಯುವ ಮಳೆಗೆ ಬೆಂಗಳೂರು ಮತ್ತಷ್ಟು ತತ್ತರಿಸುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿ ಎದುರಾಗದಂತೆ ಮುನ್ನೆಚರಿಕೆ ವಹಿಸಿ ಮುಂಬರುವ ಮಳೆಯಿಂದಾಗುವ ಅನಾಹುತವನ್ನು ನಿಯಂತ್ರಿಸಲು ರಾಜಕಾಲುವೆಗಳನ್ನು ವಿಸ್ತರಿಸಲು ಹಾಗೂ ಹಾಳಾಗುತ್ತಿರುವ ರಾಜಕಾಲುವೆಗಳನ್ನು ಸರಿಪಡಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿ ಬಿಬಿಎಂಪಿಗೆ ಚಾಟಿ ಬೀಸಿದೆ. ಆದರೆ ಈ ಯಾವ ಕೆಲಸವೂ ಬಿಬಿಎಂಪಿಯಿಂದ ನಡೆದಿಲ್ಲ, ಇದಕ್ಕೆ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವ ಮೇಯರ್ ಮತ್ತು ಆಯುಕ್ತರೇ ನೇರ ಹೊಣೆಯಾಗುತ್ತಾರೆ.

English summary
Water interruption in Entire Bengaluru on July 21 and 22, The work of replacement of 220KV metering CT and PT refurbishment of surge protection system is proposed to be taken on 21 and 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X