ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ಮಕ್ಕಳಿಗೆ ಖಂಡಗ್ರಾಸ ಚಂದ್ರಗ್ರಹಣ ವೀಕ್ಷಣೆ ಕಡ್ಡಾಯ: ಶಿಕ್ಷಣ ಇಲಾಖೆ ಆದೇಶ

|
Google Oneindia Kannada News

ಬೆಂಗಳೂರು, ಜನವರಿ 29: ಜನವರಿ 31 ರಂದು ಸಂಭವಿಸುವ ಪೂರ್ಣ ಚಂದ್ರಗ್ರಹಣವನ್ನು ಸರ್ಕಾರಿ ಶಾಲಾ ಮಕ್ಕಳು ಪೋಷಕರೊಡನೆ ಕಡ್ಡಾಯವಾಗಿ ವೀಕ್ಷಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಜನವರಿ 31 ರಂದು ಸಂಜೆ6.30 ರ ಸಮಯದಲ್ಲಿ ಪೂರ್ಣಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣದ ನೇರ ವೀಕ್ಷಣೆಯಿಂದ ಕಣ್ಣುಗಳಿಗೆ ಯಾವುದೇ ರೀತಿಯ ಅಪಾಯ ಸಂಭವಿಸುವುದಿಲ್ಲ. ಈ ಸಂದರ್ಭದಲ್ಲಿ ಕೆಂಪು ಛಾಯೆಯ ಚಂದ್ರ ಕರ್ನಾಟಕದೆಲ್ಲಡೆ ಗೋಚರಿಸುತ್ತದೆ.

ಜ. 31ರಂದು ಬಾನಂಗಳದಲ್ಲಿ ಅದ್ಭುತ 'ಸೂಪರ್ ಬ್ಲ್ಯೂ ಬ್ಲಡ್ ಮೂನ್'ಜ. 31ರಂದು ಬಾನಂಗಳದಲ್ಲಿ ಅದ್ಭುತ 'ಸೂಪರ್ ಬ್ಲ್ಯೂ ಬ್ಲಡ್ ಮೂನ್'

ಪ್ರಕೃತಿಯ ಈ ಚಿತ್ತಾಕರ್ಷಕ ಬೆಳಕು ನೆರಳಿನಾಟವನ್ನು ಶಾಲಾ ವಿದ್ಯಾರ್ಥಿಗಳು, ಪೋಷಕರು ವೀಕ್ಷಿಸಬೇಕು. ಶಿಕ್ಷಕರ ಮೂಲಕ ತಿಳಿವಳಿಕೆ ನೀಡುವಂತೆ ಕೋರಿ ಭಾರತೀಯ ಖಬೌತ ಸಂಸ್ಥೆಯ ವಿಜ್ಞಾನಿ ಪ್ರೊ. ಪ್ರಜ್ವಲ್ ಶಾಸ್ತ್ರಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯು ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು.

Watching Lunar eclipse for students in the state compulsory

ಜನವರಿ ೩೧ರಂದು ಪೂರ್ಣ ಚಂದ್ರಗ್ರಹಣ ಸಂದರ್ಭದಲ್ಲಿ ಚಂದ್ರನು ತಾಮ್ರ ಬಣ್ಣ ತಾಳುವುದರಿಂದ ಕರ್ನಾಕಾದ್ಯಂತ ತಾಮ್ರ ಚಂದ್ರೋದಯವಾಗಲಿದೆ. ಈ ಗ್ರಹಣವು ಸೂಪರ್ ಮೂನ್ ದಿನದಂದು ಸಂಭವಿಸುತ್ತದೆ. ಈ ಅಪರೂಪದ ಚಂದ್ರಗ್ರಹಣವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ತಮ್ಮ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ವೀಕ್ಷಿಸುವಂತೆ ಆದೇಶ ಹೊರಡಿಸಿದೆ.

ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ, ಯಾವ ರಾಶಿಗೆ ಏನು ಫಲ?ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ, ಯಾವ ರಾಶಿಗೆ ಏನು ಫಲ?

ಗ್ರಹಣವು ಸಂಜೆ ಚಂದ್ರೋದಯದ ಸಂದರ್ಭದಲ್ಲಿ ಸಂಭವಿಸುವುದರಿಂದ ಸಾಧ್ಯವಿರುವೆಡೆ ಶಾಲಾ ಶಿಕ್ಷಕರು ತಮ್ಮ ಶಾಲಾ ವಿದ್ಯಾರ್ಥಿಗಳು, ಸಮುದಾಯ ಮತ್ತು ಎಸ್ ಡಿ ಎಂಸಿ ಯವರೊಂದಿಗೆ ವೀಕ್ಷಿಸಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡುವುದರ ಜತೆಗೆ ಕೆಲವು ಖಗೋಳದ ವಿದ್ಯಾಮಾನಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

English summary
Department of primary education has issued notification to make arrangements to watch Lunar eclipse on January 31 for all government, aided and unaided primary and high schools in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X