• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾದಕ ವಸ್ತು ಸೇವನೆ-ಅಶ್ಲೀಲ ಚಿತ್ರ ವೀಕ್ಷಣೆ ಚಟಗಳ ಪರಿಣಾಮ ಒಂದೇ!

|

ಬೆಂಗಳೂರು, ಜುಲೈ 11: ಮಾದಕ ದ್ರವ್ಯಗಳ ವ್ಯಸನಕ್ಕೂ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಗೀಳಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿ ದುಷ್ಪರಿಣಾಮ ಉಂಟುಮಾಡುತ್ತದೆ.

ಸದಾ ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಮುಳುಗಿರುವ ವ್ಯಕ್ತಿಗಳು ಕೂಡ ಮಾದಕ ವ್ಯಸನಿಗಳಂತೆಯೇ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎನ್ನುತ್ತಾರೆ ನಿಮ್ಹಾನ್ಸ್ ವೈದ್ಯರು.

ಸರ್ಕಾರಿ ನೌಕರರಿಗೆ ಉದ್ದೀಪನ ಮದ್ದು ಪರೀಕ್ಷೆ ಕಡ್ಡಾಯ

ಸದಾ ಅಶ್ಲೀಲ ಚಿತ್ರಗಳು, ವೆಬ್ ಸರಣಿಗಳು ಹಾಗೂ ಆನ್‌ಲೈನ್ ಗೇಮ್‌ಗಳಲ್ಲಿ ಮುಳುಗಿದ್ದ 23 ವರ್ಷದ ಯುವಕನೊಬ್ಬನನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು.

ಆತ ಇವುಗನ್ನು ಬಿಟ್ಟು ಇರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ. ಸುಮಾರು ಮೂರು ವರ್ಷಗಳಿಂದ ದಿನಕ್ಕೆ 6ರಿಂದ 15 ಗಂಟೆ ಸಮಯವನ್ನು ಈ ಅಭ್ಯಾಸಕ್ಕಾಗಿ ಬಳಸುತ್ತಿದ್ದ.

ತಾನು ಮಾದಕ ವಸ್ತುಗಳ ವ್ಯಸನವನ್ನು ತಗ್ಗಿಸಿಕೊಳ್ಳಲು ಅಶ್ಲೀಲ ಚಿತ್ರ ವೀಕ್ಷಣೆಯ ಅಭ್ಯಾಸ ಬೆಳೆಸಿಕೊಂಡಿದ್ದಾಗಿ ಆ ಯುವಕ ಹೇಳಿಕೊಂಡಿದ್ದಾನೆ.

ಗ್ರಹಚಾರ ಕೈಕೊಟ್ರೆ ಹೀಗೆಲ್ಲಾ ಆಗುತ್ತೆ

ಮಾದಕ ದ್ರವ್ಯಗಳ ಸೇವನೆಯು ಮಿದುಳಿನ ಮೇಲೆ ಬೀರುವ ಪರಿಣಾಮ ಹಾಗೂ ಉದ್ದೀಪನದ ಅನುಭವವನ್ನೇ ಅಶ್ಲೀಲ ಚಿತ್ರ ವೀಕ್ಷಣೆಯು ನೀಡುತ್ತದೆ.

ಮಾದಕದ್ರವ್ಯದ ವ್ಯಸನದಂತೆಯೇ ಅಶ್ಲೀಲ ಚಿತ್ರ ವೀಕ್ಷಣೆಯೂ ಮಿತಿಮೀರಿದ ಚಟವಾಗಿ ಇತ್ತೀಚೆಗೆ ಬೆಳೆಯುತ್ತಿರುವುದಕ್ಕೆ ಈ ಪ್ರಕರಣ ಒಂದು ನಿದರ್ಶನ ಎನ್ನುತ್ತಾರೆ ನಿಮ್ಹಾನ್ಸ್ ವೈದ್ಯರು.

ಮಾದಕ ವಸ್ತುಗಳ ಸೇವನೆಯಿಂದ ಮಿದುಳಿನಲ್ಲಾಗುವ ಪರಿವರ್ತನೆ ಮತ್ತು ಪರಮಾನಂದ ನೀಡುವ ಭ್ರಮಾಲೋಕದಲ್ಲಿ ತೇಲಾಡುವ ಅನುಭವವನ್ನು ಅಶ್ಲೀಲ ಚಿತ್ರ ವೀಕ್ಷಣೆಯ ಚಟಕ್ಕೆ ತನ್ನನ್ನು ಬದಲಿಸಿಕೊಂಡಾಗಲೂ ಪಡೆದುಕೊಳ್ಳುತ್ತಿದ್ದ.

ಇದು ನಿಜಕ್ಕೂ ಆಘಾತಕಾರಿ ಸಂಗತಿ. ಈ ಡಿಜಿಟಲ್ ವ್ಯಸನಕ್ಕೆ ತುತ್ತಾದ ಬಳಿಕ ಆತ ಮಾದಕ ವಸ್ತುಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದ ಎಂದಿದ್ದಾರೆ ವೈದ್ಯರು.

ಡಿಜಿಟಲ್ ಅಡಿಕ್ಷನ್ ಅಥವಾ ವ್ಯಸನವು ಮಾದಕ ವಸ್ತುಗಳ ಸೇವನೆಯಷ್ಟೇ ಕೆಟ್ಟದ್ದೇ ಎನ್ನುವುದರ ಕುರಿತು ಸಂಶೋಧನೆಗಳು ನಡೆಯಬೇಕಿವೆ ಎಂದು ಅವರು ಹೇಳುತ್ತಾರೆ.

ಆ ಯುವಕ ಚಿಕ್ಕಂದಿನಿಂದಲೂ ಗ್ರಹಿಕೆಯಲ್ಲಿ ನಿಧಾನ ಹಾಗೂ ಉದ್ವೇಗಕ್ಕೆ ಒಳಗಾಗುತ್ತಿದ್ದ ಎನ್ನುವುದು ಗೊತ್ತಾಗಿದೆ.

ಆತ ಮನೆಯಲ್ಲಿ ಆರ್ಥಿಕ ಸಮಸ್ಯೆಯಿತ್ತು. ಆತ ತನ್ನ ಅಣ್ಣನಿಂದಲೇ ಕಿರುಕುಳಕ್ಕೆ ಒಳಗಾಗಿದ್ದ. ಚಿಕ್ಕಂದಿನಿಂದಲೂ ಒಂಟಿತನ ಕಾಡುತ್ತಿತ್ತು.

ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಹೈಸ್ಕೂಲಿನಲ್ಲಿ ಇರುವಾಗಲೇ ಸಿಗರೇಟ್ ಮತ್ತು ಆಲ್ಕೊಹಾಲ್ ಚಟಕ್ಕೆ ಒಳಗಾಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಕಾಲೇಜು ಮೆಟ್ಟಿಲೇರಿದ ಬಳಿಕ ಮಾದಕದ್ರವ್ಯಗಳ ವ್ಯಸನಕ್ಕೆ ತುತ್ತಾಗಿದ್ದ. ಇದು ಆತನ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿತ್ತು.

ರಸ್ತೆ ಅಪಘಾತವೊಂದರಲ್ಲಿ ಸಿಲುಕಿದ ಬಳಿಕ ಆತ ಸಂಕಟ ಮತ್ತು ನೋವು ಅನುಭವಿಸಿದ. ಇದರ ಬಳಿಕ ಆತ ಅಶ್ಲೀಲ ಚಿತ್ರಗಳ ವೀಕ್ಷಣೆಯತ್ತ ಹೊರಳಿದ. ಆಗಾಗ ಮಾದಕ ವಸ್ತು ಸೇವಿಸುತ್ತಿದ್ದವನು, ಕ್ರಮೇಣ ಸಂಪೂರ್ಣವಾಗಿ ಅದನ್ನು ತ್ಯಜಿಸಿದ.

ಆದರೆ ದಿನವೂ ಕನಿಷ್ಠ 5-6 ಗಂಟೆಯಿಂದ ಗರಿಷ್ಠ 10-15 ಗಂಟೆ ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡತೊಡಗಿದ್ದ ಎಂದು ವೈದ್ಯರು ವಿವರಿಸಿದ್ದಾರೆ.

ತನ್ನ ವ್ಯಸನಗಳಿಂದಾಗಿ ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಕೈಬಿಟ್ಟಿದ್ದ ಯುವಕ ಈಗ ಮತ್ತೆ ಕಾಲೇಜಿಗೆ ಮರಳಲು ಬಯಸುತ್ತಿದ್ದಾನೆ.

ಮನೋವೈದ್ಯರಿಂದ ನೆರವು ಬಯಸಿರುವ ಆತ, ಸದ್ಯ ಚಿಕಿತ್ಸೆಗೆ ಒಳಗಾಗುತ್ತಿದ್ದಾನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A case of a youth showed that the using of Cannabis and Pornography make same impact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more