ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ಕಾನ್‌ನ ಕೃಷ್ಣ ಜನ್ಮಾಷ್ಟಮಿ ಪೂಜೆ ಆನ್‌ಲೈನ್‌ನಲ್ಲಿ ವೀಕ್ಷಿಸಿ

|
Google Oneindia Kannada News

ಬೆಂಗಳೂರು, ಜುಲೈ 27: ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಶ್ರಾಮಣ ಮಾಸ ಬಂದಿದೆ. ಸಾಲು-ಸಾಲು ಹಬ್ಬಗಳು ಆರಂಭವಾಗಿವೆ. ಆಗಸ್ಟ್ ತಿಂಗಳಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಬರಲಿದ್ದು, ದೇವಾಲಯಕ್ಕೆ ಭೇಟಿ ನೀಡಲು ಭಕ್ತರು ಕಾತುರರಾಗಿದ್ದಾರೆ.

Recommended Video

EMISAT ಪ್ರಕಾರ India China Border ನಲ್ಲಿ ಇನ್ನು ಬೆಂಕಿ ಆರಿಲ್ಲ | Oneindia Kannada

ಕೋವಿಡ್ -19 ಪರಿಸ್ಥಿತಿ ಹಿನ್ನಲೆಯಲ್ಲಿ ಬೆಂಗಳೂರಿನ ಇಸ್ಕಾನ್ ದೇವಾಲಯಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಭಕ್ತರಿಗೆ ಪ್ರವೇಶ ನೀಡುತ್ತಿಲ್ಲ. ಆದರೆ, ಭಕ್ತರು ನಿರಾಸೆಗೊಳ್ಳುವ ಅಗತ್ಯವಿಲ್ಲ. ಆನ್‌ಲೈನ್ ಮೂಲಕ ಪೂಜೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

ಇಸ್ಕಾನ್ ದೇಗುಲದ ಕೃಷ್ಣ-ಬಲರಾಮ ಉತ್ಸವ, ಕಣ್ಣಿಗೆ ಹಬ್ಬ ಇಸ್ಕಾನ್ ದೇಗುಲದ ಕೃಷ್ಣ-ಬಲರಾಮ ಉತ್ಸವ, ಕಣ್ಣಿಗೆ ಹಬ್ಬ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹಾಗೂ ಹಾರೈಕೆಗಳನ್ನು ಜಗತ್ತಿನಾದ್ಯಂತ ಇರುವ ಲಕ್ಷಾಂತರ ಭಕ್ತರಿಗೆ ತಲುಪಿಸಲು ಯೋಜನೆ ರೂಪಸಿದ್ದೇವೆ ಎಂದು ಇಸ್ಕಾನ್ ಆಡಳಿತ ಮಂಡಳಿ ಹೇಳಿದೆ. ಆಗಸ್ಟ್‌ 11 ಹಾಗೂ 12ರಂದು ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಆನ್‌ಲೈನ್ ಮೂಲಕ ಪ್ರಸಾರ ಮಾಡಲಾಗುತ್ತದೆ.

ಜನ್ಮಾಷ್ಟಮಿ ವಿಶೇಷ: ಕೃಷ್ಣವೇಷಧಾರಿಗಳ ಅಂದ ಚೆಂದ ನೋಡಿಜನ್ಮಾಷ್ಟಮಿ ವಿಶೇಷ: ಕೃಷ್ಣವೇಷಧಾರಿಗಳ ಅಂದ ಚೆಂದ ನೋಡಿ

Watch ISKCON Krishna Janmashtami Pooja And Celebration Online

'ಸ್ವಾಗತಂ ಕೃಷ್ಣ ಲೈವ್' ಎಂಬ ಶೀರ್ಷಿಕೆಯಡಿ ಇಸ್ಕಾನ್ ಬೆಂಗಳೂರಿನ ಎಲ್ಲಾ ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಜನರು ಮನೆಯಲ್ಲಿಯೇ ಕುಳಿತು ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಬಹುದು.

ಜನ್ಮಾಷ್ಟಮಿ ವಿಶೇಷ: ಸರ್ವಗುಣ ಸಂಪನ್ನ ನಮ್ಮ ಬೆಣ್ಣೆ ಕೃಷ್ಣ!ಜನ್ಮಾಷ್ಟಮಿ ವಿಶೇಷ: ಸರ್ವಗುಣ ಸಂಪನ್ನ ನಮ್ಮ ಬೆಣ್ಣೆ ಕೃಷ್ಣ!

ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಸಲಾಗುವ ಎಲ್ಲಾ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಅಭಿಷೇಕ, ಪೂಜೆ ನೇರವಾಗಿ ಲೈವ್‌ನಲ್ಲಿ ಲಭ್ಯವಾಗಲಿದೆ.

ಮನೆಯಲ್ಲಿಯೇ ಕುಳಿತುಕೊಂಡು ಭಕ್ತರು ಮುಂಜಾನೆ ನಡೆಯುವ ಶ್ರೀ ಶ್ರೀ ರಾಧಾಕೃಷ್ಣಚಂದ್ರ ಸ್ವಾಮಿ ಅವರ ನೌಕಾ ವಿಹಾರ (ತೆಪ್ಪೋತ್ಸವ) ವೀಕ್ಷಿಸಬಹುದು. ಅಭಿಷೇಕ. ಪಂಚಗವ್ಯ, ಪಂಚಾಮೃತ, ಔಷಧೋಪಚಾರ, ಫಲರಸ, ಗಂಧೋದಕಾದಿ ಅಭಿಷೇಕಗಳು.‌ ದೀಪೋತ್ಸವ, ಪುಷ್ಪವೃಷ್ಟಿ, ಚಾಮರ ಸೇವೆ ಹಾಗೂ ಉಯ್ಯಾಲೆ ಸೇವೆಯ ನೇರ ಪ್ರಸಾರವಾಗಲಿದೆ.

ಅನೂಪ್ ಜೋಲಾಟ ಅವರಿಂದ ಸಂಗೀತ ಕಛೇರಿ, ಅನುರಾಧಾ ಪೌಡ್ವಾಲ್ ಅವರಿಂದ ಸಂಗೀತ ಕಾರ್ಯಕ್ರಮ, ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಮೊಮ್ಮಕ್ಕಳಿಂದ ಸಂಗೀತ ಕಛೇರಿ, ಅಗಂ ತಂಡದಿಂದ ಸಂಗೀತ ಕಾರ್ಯಕ್ರಮ, ಇಸ್ಕಾನ್ ಬೆಂಗಳೂರಿನ ಸ್ಫೂರ್ತಿದಾಯಕ ಪಯಣ ಮತ್ತು ಸಂದೇಶಗಳ ಬಗ್ಗೆ ಸಂವಾದ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಆನ್‌ ಲೈನ್‌ನಲ್ಲಿ ಲಭ್ಯವಿದೆ.

English summary
Due to COVID 19 pandemic devotes not allowed to visit ISKCON temple on the day of Krishna janmashtami on August 11 and 12, 2020. People can watch Janmashtami celebration and pooja online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X