ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕತ್ ಟ್ರೆಂಡಿಂಗ್: ಲೆಸ್ಬಿಯನ್ ಜಾಹೀರಾತು ವಿಡಿಯೋ

By Mahesh
|
Google Oneindia Kannada News

ಬೆಂಗಳೂರು, ಜೂ.11: ಲಿವ್ ಇನ್ ಸಂಬಂಧವನ್ನೇ ಒಪ್ಪಿಕೊಳ್ಳದ ಸಮಾಜದಲ್ಲಿ ಸಲಿಂಗಿ ಮಹಿಳೆಯರು ತಮ್ಮ ನಡುವಿನ ಸಂಬಂಧ, ಬೆಸುಗೆಗಳ ಬಗ್ಗೆ ಜಾಹೀರಾತೊಂದು ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಪೋಷಕರನ್ನು ಭೇಟಿ ಮಾಡಲು ಹೋಗುವ ಕಾತುರದಲ್ಲಿರುವ ಲೆಸ್ಬಿಯನ್ ಸಂಗಾತಿಗಳ ಈ ರೀತಿ ವಿಡಿಯೋ ಬಹುಶಃ ಭಾರತದಲ್ಲಿ ಇದೇ ಮೊದಲು.

ಫ್ಯಾಷನ್ ಲೋಕದ ಉತ್ಪನ್ನಗಳ ಆನ್ ಲೈನ್ ಮಾರಾಟ ಮಳಿಗೆ ಮಿಂಟ್ರಾ.ಕಾಂ ಗಾಗಿ ನಿರ್ಮಿಸಲಾಗಿರುವ ಈ ವಿಡಿಯೋ ಜಾಹೀರಾತಿಗೆ 'ದಿ ವಿಸಿಟ್' ಹೆಸರಿಡಲಾಗಿದೆ. ಯೂಟ್ಯೂಬಿನಲ್ಲಿ ಈಗಾಗಲೇ ಅನೌಕ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಜಾಹೀರಾತಿಗೆ ಈ ಸಮಯಕ್ಕೆ 2,67,151 ವೀಕ್ಷಣೆ ಸಿಕ್ಕಿದೆ. [ಗೂಗಲ್ 'ದಂಪತಿ' ಸ್ಮೃತಿ-ಶ್ವೇತಾ ಕಂಗ್ರಾಟ್ಸ್!]

Watch: India’s first lesbian ad goes viral

ಸಾಮಾನ್ಯವಾಗಿ ಗೇ(ಪುರುಷ ಸಂಗಾತಿ) ಗಳನ್ನು ಬಳಸಿಕೊಂಡು ಜಾಹೀರಾತು ರೂಪಿಸುವುದನ್ನು ಕಂಡಿರುತ್ತೀರಿ. ಈ ಸಲ ಲೆಸ್ಬಿಯನ್ ಬಳಸಿ ಭಾರತದಲ್ಲಿ ಹೊಸ ಮಾದರಿ ಜಾಹೀರಾತು ನೀಡುವ ಪ್ರಯತ್ನ ಇದಾಗಿದೆ ಎಂದು ಹೆಕ್ಟಿಕ್ ಕಂಟೆಂಟ್ ಪ್ರೊಡೆಕ್ಷನ್ ಹೌಸ್ ನ ಅವಿಶೇಕ್ ಘೋಶ್ ಹೇಳಿದ್ದಾರೆ. [ಐಪಿಸಿ 377 : ಸುಪ್ರೀಂ ತೀರ್ಪೂ, ಲೈಂಗಿಕ ಆಸಕ್ತಿಯೂ]

ಬೆಂಗಳೂರಿನ ಜಾಹೀರಾತು ಸಂಸ್ಥೆ ಒಗಿಲ್ವಿ ಹಾಗೂ ಮಾಥೇರ್ ನ ಪ್ರಸ್ತುತಿಯಾದ ಈ ಜಾಹೀರಾತು ಫೇಸ್ ಬುಕ್, ಯೂಟ್ಯೂಬ್ ನಲ್ಲಿ ಭಾರಿ ಚರ್ಚೆಗೀಡಾಗುತ್ತಿದೆ. ಇಂಥ ಜಾಹೀರಾತುಗಳು ಅವಶ್ಯವಾಗಿ ಬೇಕು ಎಂದು ಎಲ್ ಜಿಬಿಟಿ ಕಾರ್ಯಕರ್ತ ಅಶೋಕ್ ಕವಿ ಹೇಳಿದ್ದಾರೆ. [ಸಲಿಂಗಕಾಮಿ ಗಂಡನ ಕಿರುಕುಳ, ವೈದ್ಯೆ ಆತ್ಮಹತ್ಯೆ]

ಜಾಹೀರಾತು ಲೋಕದಲ್ಲೂ ಈ ಮೊದಲು ಈ ರೀತಿ ಆಡ್ ಗಳನ್ನು ಪ್ರಯತ್ನಿಸಲಾಗಿತ್ತು. ತಾನಿಷ್ಕ್, ಫಾಸ್ಟ್ ಟ್ರ್ಯಾಕ್ ಗಳಲ್ಲಿ ಗೇ ಗಳನ್ನು ಬಳಸಿಕೊಳ್ಳಲಾಗಿತ್ತು. ಈ ಜಾಹೀರಾತು ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ಜಾಹೀರಾತು ಲೋಕದ ತಜ್ಞ ಕೆವಿ ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನೇಕೆ ತಡ ನೀವು ಜಾಹೀರಾತು ನೋಡಿ...

English summary
The country's first advertisement by ad agency Ogilvy & Mather, Bangalore is making waves on social media. The ad shows a lesbian couple preparing to meet the parents. The online video shows two women in a live-in relationship flirting and dressing up for the day, chatting about the expectations they face and their love for each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X