ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಕಲಾ ಪರಿಷತ್ತಿನಲ್ಲಿ ನ. 30 ರಂದು ಚೈನೀಸ್‌ ಲಯನ್‌ ಡ್ಯಾನ್ಸ್‌

|
Google Oneindia Kannada News

ಬೆಂಗಳೂರು ನವೆಂಬರ್‌ 29: ಸಿಂಹ ಶಕ್ತಿ, ಬುದ್ದಿ ಹಾಗೂ ಶ್ರೇಷ್ಟತೆಯ ಸಂಕೇತ. ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಲು ಹಾಗೂ ಒಳ್ಳೆಯ ಅದೃಷ್ಟವನ್ನು ತರುವ ಉದ್ದೇಶದಿಂದ ಚೈನಾ ದೇಶದಲ್ಲಿ ಈ ಸಿಂಹದ ಕುಣಿತವನ್ನು ಆಯೋಜಿಸಲಾಗುತ್ತದೆ. ಚೈನಾ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಈ ಸಿಂಹದ ಕುಣಿತವನ್ನು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ.

ಚಳಿಗಾಲದ ವಸ್ತ್ರಗಳ ಸಂಗ್ರಹ ಹಾಗೂ ದೇಶದ ವಿವಿಧ ಭಾಗಗಳ ಕರಕುಶಲಗಾರರ ಕೈಚಳಕದ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದ ಸೋಕ್‌ ಮಾರ್ಕೇಟ್‌ ನಲ್ಲಿ ಈ ಸಿಂಹದ ಕುಣಿತವನ್ನು ಆಯೋಜಿಸಲಾಗಿದೆ. ಸಂಜೆ 5 ಗಂಟೆಯಿಂದ 7 ಗಂಟೆಯ ವರೆಗೆ ಕಲಾವಿದರು ಈ ಸಿಂಹದ ಕುಣಿತವನ್ನು ಪ್ರದರ್ಶಿಸಲಿದ್ದಾರೆ.

ಸಿಂಹದ ವೇಷ ಧರಿಸಿರುವ ಕಲಾವಿದರು, ಡ್ರಂ ಮ್ಯೂಸಿಕ್‌ ನ ಹಿನ್ನಲೆಯಲ್ಲಿ ಸಿಂಹದ ಅನೇಕ ಭಾವ ಭಂಗಿಗಳನ್ನು ಪ್ರದರ್ಶಿಸುತ್ತಾರೆ. ಡಿಸೆಂಬರ್‌ 1 ರಂದು ಭಾನುವಾರ ಸಂಜೆ ಇದೇ ಸ್ಥಳದಲ್ಲಿ ಡೊಳ್ಳುಕುಣಿತವನ್ನು ಆಯೋಜಿಸಲಾಗಿದೆ.

Watch Chinese Lion Dance at Chitrakala Parishath

ದ ಸೋಕ್‌ - ಮಾರ್ಕೇಟ್‌

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್

(ಶಿವಾನಂದ ವೃತ್ತದ ಬಳಿ)

ದಿನಾಂಕ: ನವೆಂಬರ್‌ 29 ರಿಂದ ಡಿಸೆಂಬರ್‌ 1 ರ ವರೆಗೆ

ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

English summary
Watch Chinese Lion Dance at Chitrakala Parishath during the ongoing The Souq market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X