ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 1996ರ ನಂತರ ಮಾರ್ಚ್‌ನಲ್ಲೇ ಅತಿ ಗರಿಷ್ಠ ತಾಪಮಾನ ದಾಖಲು

|
Google Oneindia Kannada News

ಬೆಂಗಳೂರು, ಮಾರ್ಚ್ 8: ಸುಮಾರು 20 ವರ್ಷಗಳ ಬಳಿಕ ಮಾರ್ಚ್‌ನಲ್ಲೇ ಅತಿ ಗರಿಷ್ಠ ತಾಪಮಾನ ಈ ಬಾರಿ ದಾಖಲಾಗಿದೆ. ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆರಂಭವಾಗಿದೆ.

ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುಡುವ ಬಿಸಿಲ ಝಳವಿರುತ್ತದೆ. ಮಾರ್ಚ್ ಎರಡನೇ ವಾರದಿಂದ ಬೇಸಿಗೆ ಆರಂಭವಾಗುತ್ತದೆ. ಆದರೆ ಈ ಬಾರಿ ಫೆಬ್ರವರಿಯಿಂದಲೇ ಬಿಸಿಲು ಶುರುವಾಗಿದೆ.

ಮಾರ್ಚ್ ಮೊದಲ ವಾರದಲ್ಲೇ ನಗರದ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ತಲುಪಿದೆ. 2017ರ ಮಾರ್ಚ್ 26ರಂದು 37.2 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.

Warm days ahead for Bengaluru


ಅದಕ್ಕೂ ಮೊದಲು 2009ರವರೆಗೂ ಮಾರ್ಚ್‌ನಲ್ಲಿ ಇಷ್ಟು ತಾಪಮಾನ ಕಂಡುಬಂದಿರಲಿಲ್ಲ. 1996ರಲ್ಲಿ ಮಾರ್ಚ್ 29ರಂದು 37.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ಶುಕ್ರವಾರದಿಂದ ತಾಪಮಾನ ಮತ್ತೆ ಎರಡರಿಂದ ಮೂರು ಡಿಗ್ರಿಯಷ್ಟು ಕೆಳಕ್ಕೆ ಇಳಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಒಂದು ವಾರದಿಂದ ತಾಪಮಾನ 34-35 ಡಿಗ್ರಿ ಸೆಲ್ಸಿಯಸ್‌ನಲ್ಲಿಯೇ ಇತ್ತು.

ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಸಿಗಾಳಿ ಬೀಸುತ್ತಿದ್ದು ಅದು ಕರ್ನಾಟಕವನ್ನೂ ಆವರಿಸಿ ಸೆಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಕನಿಷ್ಠ 20.5 ಡಿಗ್ರಿ ಸೆಲ್ಸಿಯಸ್, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್, ಕೆಐಎಎಲ್‌ನಲ್ಲಿ ಕನಿಷ್ಠ 18.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ 36.4 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಕನಿಷ್ಠ 21.3 ಡಿಗ್ರಿ ಸೆಲ್ಸಿಯಸ್, ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

English summary
Bengaluru is situated at a height of 3000 ft above the sea level due to which weather conditions in the city are pleasant in comparison to its neighbouring areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X