ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಂಗ್ರೆಸ್ ಕಳೆ' ವಿವಾದ: ಇಬ್ಬರು ಸಚಿವರ ಬಹಿರಂಗ ಕಿತ್ತಾಟ

|
Google Oneindia Kannada News

Recommended Video

ಕಾಂಗ್ರೆಸ್ ಕಳೆ' ವಿವಾದ: ಇಬ್ಬರು ಸಚಿವರ ಬಹಿರಂಗ ಕಿತ್ತಾಟ | Oneindia Kannada

ಬೆಂಗಳೂರು, ಸೆ.25: ಕಾಂಗ್ರೆಸ್ ಕಳೆಯನ್ನು ಬುಡಸಮೇತ ಕಿತ್ತು ಹಾಕಬೇಕೆನ್ನುವ ಶಿಕ್ಷಣ ಸಚಿವ ಎನ್‌ ಮಹೇಶ್ ಹೇಳಿಕೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ ಪುಟ್ಟರಂಗ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎನ್‌ ಮಹೇಶ್ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿರುವ ಪುಟ್ಟರಂಗಶೆಟ್ಟಿ 'ಅವನ್ಯಾರು ಕಿತ್ತುಹಾಕುವುದಕ್ಕೆ, ಕಾಂಗ್ರೆಸ್ ಮನಸ್ಸು ಮಾಡಿದರೆ ಅವನೇ ನಿರ್ನಾಮವಾಗುತ್ತಾನೆ' ಎಂದು ಎದಿರೇಟು ನೀಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗೋಕೆ ಸಾಧ್ಯ ಇಲ್ಲ: ಸಚಿವ ಮಹೇಶ್‌ ಟಾಂಗ್ ಸಿದ್ದರಾಮಯ್ಯ ಸಿಎಂ ಆಗೋಕೆ ಸಾಧ್ಯ ಇಲ್ಲ: ಸಚಿವ ಮಹೇಶ್‌ ಟಾಂಗ್

ಕಾಂಗ್ರೆಸ್ ಪಕ್ಷ 80 ಸಿಟು ಗೆದ್ದಿಗೆ ಜೆಡಿಎಸ್ 38 ಸೀಟು ಗೆದ್ದಿದೆ ಬಿಎಸ್ ಪಿಯಿಂದ ಅವರೊಬ್ಬರೇ ಗೆದ್ದಿರುವುದು ಕಾಂಗ್ರೆಸ್ ಮನಸ್ಸು ಮಾಡಿದರೆ ಅವರನ್ನು ಕಿತ್ತುಹಾಕುವುದು ಕಷ್ಟವಲ್ಲ ಅವರು ಒನ್ ಮ್ಯಾನ್ ಆರ್ಮಿ ಎನ್ನುವುದನ್ನು ಮರೆಯಬಾರದು, ಕಾಂಗ್ರೆಸ್ ವಿರುದ್ಧ ಮಾತನಾಡಬೇಕಾದರೆ ಎಚ್ಚರದಿಂದಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

War of words between two ministers in the coalition government

ಲೋಕಸಭೆ ಚುನಾವಣೆ : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಅಧಿಕೃತ ಒಪ್ಪಿಗೆ ಲೋಕಸಭೆ ಚುನಾವಣೆ : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಅಧಿಕೃತ ಒಪ್ಪಿಗೆ

ಸಚಿವ ಎನ್. ಮಹೇಶ್ ಮೊದಲು ಸಾಧನೆ ಮಾಡಲಿ ಆಮೇಲೆ ಮಾತನಾಡಲಿ, ರಾಜಕಾರಣದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಕೂಸು, ಮೊದಲ ಬಾರಿಗೆ ಗೆದ್ದು ಇಷ್ಟೊಂದು ಆಟವಾಡುತ್ತಿರುವುದು ಸರಿಯಲ್ಲ, ಕಾಂಗ್ರೆಸ್ ಮನಸ್ಸು ಮಾಡಿದ್ದರಿಂದಲೇ ಮಹೇಶ್ ಸಚಿವರಾಗಿದ್ದಾರೆ ಅದನ್ನು ನೆಪಿಟ್ಟುಕೊಂಡು ಎಚ್ಚರದಿಂದ ಮಾತನಾಡಲಿ ಎಂದು ಹೇಳಿದ್ದಾರೆ.

English summary
Minister C.Puttaranga Shetty condemned statement by another minister N.Mahesh who was made derogatory comments on Congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X