ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ಸಾವು, ಕೊರೊನಾ ಇನ್ನೂ ದೃಢಪಟ್ಟಿಲ್ಲ: ಶ್ರೀರಾಮುಲು

|
Google Oneindia Kannada News

ಬೆಂಗಳೂರು, ಮಾ. 11: ಕಲಬುರಗಿಯಲ್ಲಿ ಕೊರೊನಾ ವೈರಸ್‌ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಸುದ್ದಿ ಹಬ್ಬಿದೆ, ಅದರೆ ಸದ್ಯಕ್ಕೆ ಅದು ಅಧಿಕೃತವಾಗಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು, ಕಲಬುರಗಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ಕೊರೊನಾ ವೈರಸ್ ವರದಿ ಬರಬೇಕಿದೆ. ಮಧ್ಯಾಹ್ನ 4 ಗಂಟೆಗೆ ಲ್ಯಾಬ್ ರಿಪೋರ್ಟ್ ಬರಲಿದೆ. ಆ ಬಳಿಕವಷ್ಟೆ ಕೊರೊನಾ ವೈರಸ್‌ನಿಂದ ಅವರು ಮೃತಪಟ್ಟಿರುವ ಬಗ್ಗೆ ದೃಢಪಡಲಿದೆ. ಎಲ್ಲ ವರದಿಗಳನ್ನು ತರಿಸಿಕೊಳ್ಳುತ್ತಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಕೊರೊನಾ ಶಂಕಿತ ವೃದ್ಧ ಬಲಿ: ಕರ್ನಾಟಕದ ಮೊದಲ ಸಾವುಕೊರೊನಾ ಶಂಕಿತ ವೃದ್ಧ ಬಲಿ: ಕರ್ನಾಟಕದ ಮೊದಲ ಸಾವು

ಈ ವರೆಗೆ ರಾಜ್ಯದಲ್ಲಿ ನಾಲ್ಕು ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಅವರೆಲ್ಲರಿಗೂ ಚಿಕಿತ್ಸೆ ಕೊಡಲಾಗುತ್ತಿದೆ. ಅದರೆ ಕಲಬುರಗಿಯಲ್ಲಿ ವ್ಯಕ್ತಿ ಕರೋನಾದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದು, 4 ಗಂಟೆಗೆ ಎಲ್ಲವನ್ನು ವಿವರವಾಗಿ ತಿಳಿಸುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

Report of The Death of Person Who Died in Kalaburagi Waiting Said Sriramulu

ದುಬೈನಿಂದ ಆಗಮಿಸಿದ್ದ ವೃದ್ಧರೊಬ್ಬರು ಶಂಕಿತ ಕೊರೋನಾ ವೈರಸ್‌ನಿಂದ ಸಾವನ್ನಪ್ಪಿದ್ದು, ಸೂಕ್ತ ನಿಗಾವಹಿಸುವಂತೆ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆ ಸುತ್ತೊಲೆ ಹೊರಡಿಸಿತ್ತು. ಆದರೆ ಇನ್ನೂ ಲ್ಯಾಬ್ ರಿಪೋರ್ಟ್ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸುತ್ತೊಲೆಯಲ್ಲಿ ತಿಳಿಸಿದೆ.
ಕಲಬುರಗಿ ಡಿಹೆಚ್ಓಗೆ ಆರೋಗ್ಯ ಇಲಾಖೆ ತರಾಟೆ: ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹೇಳಿದಂತೆ ಗೌಪ್ಯತೆ ಕಾಪಾಡುವಲ್ಲಿ ವಿಫಲವಾಗಿದ್ದಾರೆಂದು ಕಲಬುರಗಿ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಗೊಂದಲದ ಆದೇಶ ಹೊರಡಿಸಿರುವುದಕ್ಕೂ ಹಿರಿಯ ಅಧಿಕಾರಿಗಳು ಗರಂ ಆಗಿದ್ದಾರೆ. ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಮೌಖಿಕ ವಿವರಣೆಯನ್ಮು ಆರೋಗ್ಯ ಇಲಾಖೆ ಆಯುಕ್ತರು ಕೇಳಿದ್ದಾರೆ ಎಂಬ ಮಾಹಿತಿಯಿದೆ.

English summary
Exact report of the death of a person who died in Kalaburagi waiting said sriramulu. The lab report is yet to come, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X