ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಸಭ್ಯ ಹೇಳಿಕೆ : ತೇಜಸ್ವಿನಿ ರಮೇಶ್- ಉಮಾಶ್ರೀ ಜಟಾಪಟಿ

By Kiran B Hegde
|
Google Oneindia Kannada News

ಬೆಂಗಳೂರು, ನ. 12: ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಪದೇ ಪದೆ ಅತ್ಯಾಚಾರಗಳು ಸಂಭವಿಸುತ್ತಿರುವಾಗ, ಮಹಿಳೆಯರಿಗೆ ಚುನಾವಣಾ ಟಿಕೆಟ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ, ಇಬ್ಬರು ಪ್ರಖರ ಮಹಿಳಾ ರಾಜಕಾರಣಿಗಳು ಮಾತಿನ ಚಕಮಕಿಗಿಳಿದಿದ್ದಾರೆ. ಟಿಕೆಟ್ ಸಿಗದೆ ಬೇಸತ್ತು ಬಿಜೆಪಿ ಸೇರಿರುವ ಮಾತಿನ ಮಲ್ಲಿ ತೇಜಸ್ವಿನಿ ರಮೇಶ್ ಮತ್ತು ಟಿಕೆಟ್ ಪಡೆದು ಗೆದ್ದು ಸಚಿವೆಯಾಗಿರುವ ಉಮಾಶ್ರೀ ಈ ಇಬ್ಬರು ಮಹಿಳೆಯರು.

ಕಾಂಗ್ರೆಸ್ಸಲ್ಲಿ ಸೌಂದರ್ಯ ನೋಡಿ ಚುನಾವಣಾ ಟಿಕೆಟ್ ನೀಡಲಾಗುತ್ತಿದೆಯಾ? ಕಾಂಗ್ರೆಸ್ಸಿನಲ್ಲಿ ದುಶ್ಶಾಸನರಂಥ ಸಚಿವರಿದ್ದಾರಾ? ಇಂಥ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ಸಿನ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಚಿವೆ ಉಮಾಶ್ರೀ ಅವರು ಸರೀ ತರಾಟೆಗೆ ತೆಗೆದುಕೊಂಡಿದ್ದು, ತೇಜಸ್ವಿನಿ ರಮೇಶ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

tejaswini-ramesh-umashree

ವಿಧಾನಸೌಧದಲ್ಲಿ ತೇಜಸ್ವಿನಿ ಹೇಳಿಕೆಯನ್ನು ಖಂಡಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಇದೊಂದು ಅತ್ಯಂತ ಅಸಹ್ಯಕರ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ಅತ್ಯಂತ ಅವಮಾನಕರವಾದದ್ದು. ನಾನು ಕಾಂಗ್ರೆಸ್‌ನಲ್ಲಿ ದಿನದ 24 ಗಂಟೆಯೂ ಪುರುಷರೊಂದಿಗೆ ಕೆಲಸ ಮಾಡಿದ್ದೇನೆ. ಇದುವರೆಗೂ ಯಾವುದೇ ಸಮಸ್ಯೆ ಎದುರಾಗಿಲ್ಲ. ಮಹಿಳೆಯರು ರಾಜಕೀಯ ಪ್ರವೇಶಿಸದಂತೆ ತಡೆಯುವ ಹುನ್ನಾರ ಈ ಹೇಳಿಕೆಯ ಹಿಂದೆ ಅಡಗಿದೆ ಎಂದು ಆರೋಪಿಸಿದ್ದಾರೆ. [ಡಿಕೆಶಿಯನ್ನು ಹುಚ್ಚು ನಾಯಿ ಎಂದಿದ್ದ ತೇಜಸ್ವಿನಿ]

ಎಲುಬಿಲ್ಲದ ನಾಲಿಗೆ ಜಾರಬಾರದು. ಮಾತನಾಡುವ ವೇಳೆ ಪ್ರಜ್ಞೆ ಇರಬೇಕು. ತೇಜಸ್ವಿನಿ ರಮೇಶ ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ, ಪಕ್ಷ ಬಿಟ್ಟ ನಂತರ ಕೀಳು ಹೇಳಿಕೆ ನೀಡುತ್ತಿದ್ದಾರೆ. ಅವರು ಕಾಂಗ್ರೆಸ್‌ನಲ್ಲಿದ್ದಾಗ ಯಾರು ಕಿರುಕುಳ ನೀಡಿದ್ದರು ಎಂಬುದನ್ನು ಬಹಿರಂಗಪಡಿಸಲಿ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಪಕ್ಷಕ್ಕಾಗಿ ತಳಮಟ್ಟದಿಂದ ಕೆಲಸ ಮಾಡಿದ್ದೇನೆ. ಇದನ್ನು ಗುರುತಿಸಿಯೇ ಪಕ್ಷ ನನಗೆ ಸಚಿವ ಸ್ಥಾನ ನೀಡಿದೆ. ತೇಜಸ್ವಿನಿ ಅವರ ಹೇಳಿಕೆಯಿಂದ ರಾಜಕಾರಣದ ಕುರಿತು ಕೆಟ್ಟ ಸಂದೇಶ ಹೋಗುತ್ತದೆ. ಹೆಣ್ಣು ಮಕ್ಕಳು ರಾಜಕೀಯದಿಂದ ದೂರ ಉಳಿಯುವಂತೆ ಮಾಡುತ್ತದೆ. ಈ ಕುರಿತು ಅವರು ಬಹಿರಂಗ ಚರ್ಚೆಗೆ ಬರಲಿ. ನಾನು ತಯಾರಾಗಿದ್ದೇನೆಂದು ಉಮಾಶ್ರೀ ಸವಾಲು ಹಾಕಿದ್ದಾರೆ.

ತೇಜಸ್ವಿನಿ ರಮೇಶ ಹೇಳಿದ್ದೇನು?
ಕಾಂಗ್ರೆಸ್‌ನಲ್ಲಿ ಸುಂದರ ಮಹಿಳೆಯರನ್ನು ವಸ್ತುವಿನಂತೆ ಬಳಸಿಕೊಳ್ಳಲಾಗುತ್ತಿದೆ. ಆ ಪಕ್ಷದಲ್ಲಿ ದುಶ್ಯಾಸನನಂತಹ ಮಹಿಳಾ ಪೀಡಕರಿದ್ದಾರೆ. ಪುರುಷರು ಹೇಳಿದಂತೆ ಕೇಳಿದರೆ ಮಾತ್ರ ಮಹಿಳೆಯರಿಗೆ ಪದವಿ ಸಿಗುತ್ತದೆ. ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ, ಅಧಿಕಾರ ನೀಡುವುದಿಲ್ಲ. ಚಿತ್ರನಟಿ ರಮ್ಯಾ ಸುಂದರಿಯಾಗಿದ್ದು, ಸೆಲೆಬ್ರಿಟಿಯಾಗಿರುವ ಕಾರಣ ಅವರಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಮಹಿಳೆಯರು ಕಾಂಗ್ರೆಸ್ ಸೇರುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದರು.

ಅಲ್ಲದೆ, ಕಾಂಗ್ರೆಸ್ ಆಡಳಿತದ ವಿರುದ್ಧ ಕಿಡಿಕಾರಿದ್ದ ತೇಜಸ್ವಿನಿ, ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಭಾವನೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದುಬಿದ್ದಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಾರ್ಜ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ತಮ್ಮ ಹುಟ್ಟುಹಬ್ಬದ ದಿನವೇ ತೇಜಸ್ವಿನಿ ರಮೇಶ ಆಗ್ರಹಿಸಿದ್ದರು.

ಅಲ್ಲದೆ, ನಂದಿತಾ ಸಾವು ಲವ್ ಜಿಹಾದ್‌ನಿಂದ ಆಗಿರುವ ಶಂಕೆಯಿದೆ. ಸರ್ಕಾರ ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಅತ್ಯಾಚಾರದಂತಹ ವಿಷಯದಲ್ಲಿ ಬಿಜೆಪಿ ಯಾವತ್ತೂ ರಾಜಕೀಯ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಬಾಲಂಗೋಚಿ : ಸೌಂದರ್ಯ, ಗ್ಲಾಮರ್ ನೋಡಿ ಟಿಕೆಟ್ ನೀಡಲಾಗುತ್ತಿದೆ ಅಂತ ಹೇಳ್ತಾರಲ್ಲಾ ಇವರೂ... 2004ರಲ್ಲಿ ಕನಕಪುರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಗೆದ್ದಾಗ, 2009ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಾಗ, ಇವರ ಸೌಂದರ್ಯವನ್ನು ನೋಡಿ ಕಾಂಗ್ರೆಸ್ ಪಕ್ಷ ತೇಜಸ್ವಿನಿ ರಮೇಶ್ ಅವರಿಗೆ ಟಿಕೆಟ್ ನೀಡಿತ್ತಾ?

English summary
Former Congress MP Tejaswini Ramesh (Now in BJP) has sparked a controversy by attacking Karnataka Congress. Tejaswinis statement "women are not safe in Congress camps" has evoked severe criticism from Minister of Kannada and Culture Umashree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X