ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲು, ವಿಟಿಯು ಪರೀಕ್ಷೆ ಮುಂದಕ್ಕೆ

By Nayana
|
Google Oneindia Kannada News

ಬೆಂಗಳೂರು, ಜು.4: ಪ್ರಶ್ನೆಪತ್ರಿಕೆ ಅದಲು ಬದಲು ಗೊಂದಲದಿಂದ ಅವಾಂತರಕ್ಕೊಳಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತೊಮ್ಮೆ ಸುದ್ದಿಯಲ್ಲಿದೆ.

ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಮಂಗಳವಾರ ಬಿಇ ಆರನೇ ಸೆಮಿಸ್ಟರ್‌ನ ಮೆಕ್ಯಾಟ್ರಾನಿಕ್ಸ್‌ ಸ್ಯಾಟಲೈಟ್‌ ಕಮ್ಯುನಿಕೇಷನ್ಸ್‌ವಿಷಯದ ಪರೀಕ್ಷೆ ನಡೆಯಬೇಕಿತ್ತು. ಸಿಬಿಸಿಎಸ್‌ ಪದ್ಧತಿಯಡಿ ಹೊಸದಾಗಿ ಪರಿಷಯಿಸಿರುವ ಈ ವಿಷಯಗಳ ಪ್ರಶ್ನೆ ಪತ್ರಿಕೆಯನ್ನು ಆಯ್ಕೆ ಮಾಡಿ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶವಿತ್ತು.

ಶುಲ್ಕ ಹೆಚ್ಚಳ ಶೇ.8ರಷ್ಟು ಸಾಕಾಗಲ್ಲ ಎನ್ನುತ್ತಿವೆ ಖಾಸಗಿ ಸಂಸ್ಥೆಗಳು ಶುಲ್ಕ ಹೆಚ್ಚಳ ಶೇ.8ರಷ್ಟು ಸಾಕಾಗಲ್ಲ ಎನ್ನುತ್ತಿವೆ ಖಾಸಗಿ ಸಂಸ್ಥೆಗಳು

ಪ್ರತಿ ವರ್ಷವೂ, ಪ್ರಸ್ನೆ ಪತ್ರಿಕೆ ಸೋರಿಕೆ, ಪ್ರಶ್ನೆ ಪತ್ರಿಕೆ ನಕಲು ಹೀಗೆ ಅನೇಕ ವಿಷಯಗಳ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸುದ್ದಿಯಾಗುತ್ತಿತ್ತು. ಪರೀಕ್ಷಾ ಕೊಠಡಿಗೆ ಹಾಜರಾದ ವಿದ್ಯಾರ್ತಿಗಳು ಪ್ರಶ್ನೆ ಪತ್ರಿಕೆಯ ನಿರೀಕ್ಷೆಯಲ್ಲಿದ್ದರು.

VTU postpones exams as question paper code error

ಆದರೆ, ಪ್ರಶ್ನೆ ಪತ್ರಿಕೆ ವಿತರಣೆಯಾಗಲೇ ಇಲ್ಲ, ಒಂದು ಗಂಟೆ ನಂತರ ಪರೀಕ್ಷೆ ಮುಂದೂಡಲಾಗಿದೆ. ಪ್ರಶ್ನೆ ಪತ್ರಿಕೆಯ ಕೋಡ್‌ ಗೊಂದಲದಿಂದಾಗಿ ಈ ಅವಾಂತರವಾಗಿದೆ. ನಾವು ಪ್ರಶ್ನೆಪತ್ರಿಕಯನ್ನು ಸಿದ್ಧಪಡಿಸಿದ ನಂತರ ಕೋಡ್‌ ಕಳಿಸುವಂತೆ ಕಾಲೇಜಿಗೆ ತಿಳಿಸಲಾಗಿತ್ತು. ಆದರೆ ಕೋಡ್‌ ಅದಲು ಬದಲಾಗಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ವಿಟಿಯು ಕುಲಸಚಿವ ಪ್ರೊ. ಸತೀಶ್‌ ಅಣ್ಣಿಗೇರಿ ತಿಳಿಸಿದ್ದಾರೆ.

ಬೆಂಗಳೂರಿನ ಒಂದೇ ಒಂದು ಕಾಲೇಜಿನಲ್ಲಿ ಈ ಅವಾಂತರವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಗೊಂದಲ ಉಂಟಾಯಿತು ಜು.9ಕ್ಕೆ ಪರೀಕ್ಷೆ ಮುಂದೂಡಲಾಗಿದೆ.

English summary
Visvesvaraya Technical University has postponed sixth semester of mechatronics satellite communications exams as error was found in question paper code bar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X