ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯಾಹ್ನ ಮೂರು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2019ರ ಎರಡನೇ ಹಂತದ ಮತದಾನ ಈವರೆಗೆ ಶಾಂತಿಯುತವಾಗಿ ನಡೆದಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ 48.90% ಮತದಾನವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

1 ಗಂಟೆ ವೇಳೆಗೆ 36.61% ಇದ್ದ ಮತದಾನ ನಿಧಾನವಾಗಿ ಹೆಚ್ಚಾಗುತ್ತಿದ್ದು ಮೂರು ಗಂಟೆ ವೇಳೆಗೆ 48.90% ಆಗಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಕೆಲವು ಕಡೆ ಮಳೆ ಆಗಿದ್ದು, ಮತದಾನಕ್ಕೆ ಅಲ್ಪ ಹಿನ್ನಡೆ ಆಗಿದೆ.

ಕರ್ನಾಟಕದಲ್ಲಿ ಲೋಕಸಮರ LIVE: ಇದುವರೆಗೆ ಶಿವಮೊಗ್ಗದಲ್ಲೇ ಅತೀ ಹೆಚ್ಚು ಮತದಾನ ಕರ್ನಾಟಕದಲ್ಲಿ ಲೋಕಸಮರ LIVE: ಇದುವರೆಗೆ ಶಿವಮೊಗ್ಗದಲ್ಲೇ ಅತೀ ಹೆಚ್ಚು ಮತದಾನ

ಇಂದು ಮತದಾನವಾಗುತ್ತಿರುವ 14 ಕ್ಷೇತ್ರಗಳ ಪೈಕಿ ಈವರೆಗೆ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಮೂರು ಗಂಟೆ ವೇಳೆಗೆ 54.88% ಮತದಾನವಾಗಿದೆ. ಉತ್ತರ ಕನ್ನಡದಲ್ಲಿ 53.48% ಮತದಾನವಾಗಿದೆ.

Voting percentage in Karnatakas second poling lok sabha constituenciestill 3 PM

ಬೀದರ್‌ನಲ್ಲಿ ಶೇ 47.04% ಮತದಾನವಾಗಿದೆ. ಕೊಪ್ಪಳದಲ್ಲಿ 51.13%, ಬಳ್ಳಾರಿಯಲ್ಲಿ 48.61%, ಹಾವೇರಿಯಲ್ಲಿ 50.24%, ಧಾರವಾಡದಲ್ಲಿ 51.28% ಮತದಾನವಾಗಿದೆ, ದಾವಣಗೆರೆಯಲ್ಲಿ 51.67% ಮತದಾನವಾಗಿದೆ.

ಲೋಕಸಭೆ ಚುನಾವಣೆ LIVE: ಮನೆಯಲ್ಲೇ ಮತಗಟ್ಟೆ ಏಜೆಂಟ್ ಮೃತದೇಹ ಪತ್ತೆ ಲೋಕಸಭೆ ಚುನಾವಣೆ LIVE: ಮನೆಯಲ್ಲೇ ಮತಗಟ್ಟೆ ಏಜೆಂಟ್ ಮೃತದೇಹ ಪತ್ತೆ

ಚಿಕ್ಕೋಡಿಯಲ್ಲಿ 53.06%, ಬೆಳಗಾವಿಯಲ್ಲಿ 48.66%, ಬಾಗಲಕೋಟೆಯಲ್ಲಿ 52.09%, ರಾಯಚೂರಿನಲ್ಲಿ 43.02% , ವಿಜಯಪುರ 43.83% ಮತದಾನವಾಗಿದೆ ಮತ್ತು ಈ ವರೆಗೆ ಅತ್ಯಂತ ಕಡಿಮೆ ಮತದಾನವಾಗಿರುವುದು ಕಲಬುರಗಿಯಲ್ಲಿ, ಅಲ್ಲಿ ಮೂರು ಗಂಟೆ ವರೆಗೆ ಕೇವಲ 38.94% ಮಾತ್ರವೇ ಮತದಾನವಾಗಿದೆ.

English summary
Voting percentage in Karnataka's second poling lok sabha constituencies till 3 o'clock. Shimoga voters voted best till 3 PM, Kalburgi voters less till 3 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X