ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

MLA ಮುನಿರತ್ನಂನಾಯ್ಡು ಗೆಲುವಿನ ಸಂಭ್ರಮದಲ್ಲೇ ಶಾಕ್‌

|
Google Oneindia Kannada News

ಬೆಂಗಳೂರು ನ. 11 : ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಜಯ ಗಳಿಸಿ ಶಾಸಕರಾದ ಮುನಿರತ್ನಂ ಅವರಿಗೆ ಗೆಲುವಿನ ಸಂಭ್ರಮದ ಒಂದೇ ದಿನಕ್ಕೆ ಹೈಕೋರ್ಟ್‌ ಶಾಕ್‌ ಕೊಟ್ಟಿದೆ. ಅಕ್ರಮ ವೋಟರ್ ಐಡಿ ತಯಾರಿಕೆ ಆರೋಪ ಎದುರಿಸುತ್ತಿರುವ ಮುನಿರತ್ನಂ ವಿರುದ್ಧದ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ನಡೆಸುವಂತೆ ಹೈಕೋರ್ಟ್‌ ಆದೇಶ ಮಾಡಿದೆ.

ಮಂಗಳವಾರವಷ್ಟೇ ಭಾರೀ ಮತಗಳ ಅಂತರದಿಂದ ಜಯ ಗಳಿಸಿದ ಮುನಿರತ್ನಂ ರಾಜರಾಜೇಶ್ವರಿನಗರ ಶಾಸಕರಾಗಿ ಆಯ್ಕೆಯಾಗಿದ್ದರು. ಡಿ.ಕೆ ಸಹೋದರರನ್ನೇ ಉಪ ಸಮರದಲ್ಲಿ ಮಣಿಸಿದ ಸಂತಸದಲ್ಲಿದ್ದ ಮುನಿರತ್ನಂಗೆ ಒಂದೇ ದಿನಕ್ಕೆ ನಕಲಿ ವೋಟರ್ ಐಡಿ ಪ್ರಕರಣ ಶಾಕ್‌ ಕೊಟ್ಟಿದೆ. ಮುನಿರತ್ನಂ ವಿರುದ್ಧ ನಕಲಿ ವೋಟರ್ ಐಡಿ ತಯಾರಿಸಿದ ಆರೋಪ ಸಂಬಂಧ ಕ್ರಿಮಿನಲ್ ದಾವೆ ದಾಖಲಾಗಿದ್ದವು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಆನಂದ್ ಮತ್ತು ಸಂತೋಷ್‌ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಆರ್. ಆರ್. ನಗರ ಉಪ ಚನಾವಣೆ; ಬಿಜೆಪಿಯ ಮುನಿರತ್ನ ಜಯಭೇರಿಆರ್. ಆರ್. ನಗರ ಉಪ ಚನಾವಣೆ; ಬಿಜೆಪಿಯ ಮುನಿರತ್ನ ಜಯಭೇರಿ

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್‌. ಓಕಾ ನೇತೃತ್ವದ ಪೀಠ ಬುಧವಾರ ಮಹತ್ವದ ಆದೇಶ ನೀಡಿದ್ದಾರೆ. ಅಕ್ರಮ ವೋಟರ್ ಐಡಿ ಪತ್ತೆ ಪ್ರಕರಣದ ಆರೋಪ ಪಟ್ಟಿಯನ್ನು ಉನ್ನತ ದರ್ಜೆಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಪರಮಾರ್ಶೆ ನಡೆಸಲು ನ್ಯಾಯಾಲಯ ಸೂಚಿಸಿದೆ.

Voter ID scam: Setback to MLA Munirathna, HC directs probe

ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಈ ಕುರಿತು ನಿರ್ದೇಶನ ನೀಡಿರುವ ನ್ಯಾಯಾಲಯ, ಅರ್ಜಿದಾರರ ಸಮಸ್ಯೆ ಆಲಿಸಬೇಕು. ತನಿಖೆ ಸೂಕ್ತವಾಗಿ ನಡೆದಿದೆಯೋ ಇಲ್ಲವೋ ಪರಿಶೀಲಿಸಬೇಕು. ತನಿಖೆ ಮುಂದುವರೆಸುವ ಅಗತ್ಯತೆಯ ಬಗ್ಗೆ ಡಿಸೆಂಬರ್‌ 15ರೊಳಗೆ ವರದಿ ಸಲ್ಲಿಸಲು ಸೂಚಿಸಿದೆ.

Recommended Video

ಅಬ್ಬಾ ಇನ್ನೂ ಕೆಲವೇ ದಿನ ಭಾರತಕ್ಕೆ ಕೊರೋನ ಲಸಿಕೆ ! | Sputnik v Covid-19 Vaccine | Oneindia Kannada

English summary
Voter ID scam: Setback to MLA Munirathna, HC directed to set up High level IPS officers team to probe the case again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X