ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಮುನಿರತ್ನಗೆ ಮತ್ತೆ ಪರೀಕ್ಷೆ, ಜೂನ್ 06ಕ್ಕೆ ಫಲಿತಾಂಶ

By Mahesh
|
Google Oneindia Kannada News

Recommended Video

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಭವಿಷ್ಯ ಜೂನ್ 6ರಂದು ನಿರ್ಧಾರ | Oneindia Kannada

ಬೆಂಗಳೂರು, ಮೇ 31: 'ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಮನೆಯೊಂದರಲ್ಲಿ ಸಾವಿರಾರು ವೋಟರ್ ಐಡಿ ಕಾರ್ಡ್ ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಶಾಸಕ ಮುನಿರತ್ನ ಅವರು ಆರೋಪಿಯಾಗಿದ್ದಾರೆ.

ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಿದ್ದು, ಜೂನ್ 06ರಂದು ಅರ್ಜಿ ವಿಚಾರಣೆ ನಡೆಯಲಿದೆ.

Voter ID Scam : RR Nagar MLA Munirathna fate to be decided on June 6

ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದ್ದು, ಅರ್ಜಿ ಮಾನ್ಯ ಮಾಡಿ, ವಿಚಾರಣೆ ನಡೆಸುವ ಬಗ್ಗೆ ತೀರ್ಮಾನ ಪ್ರಕಟಿಸಲಿದ್ದಾರೆ.

ಆರ್.ಆರ್.ನಗರ ಚುನಾವಣೆ : ವಶಪಡಿಸಿಕೊಂಡಿದ್ದ ವೋಟರ್ ಐಡಿ ಹಂಚಿಕೆಆರ್.ಆರ್.ನಗರ ಚುನಾವಣೆ : ವಶಪಡಿಸಿಕೊಂಡಿದ್ದ ವೋಟರ್ ಐಡಿ ಹಂಚಿಕೆ

ಚುನಾವಣಾ ಆಯೋಗದ ನಿರ್ದೇಶನದಂತೆ, ಜಾಲಹಳ್ಳಿ ಠಾಣೆ ಪೊಲೀಸರು ಹಾಗೂ ಎರಡು ಪ್ರತ್ಯೇಕ ದೂರು ದಾಖಲಿಸಿ, ಚುನಾವಣಾಧಿಕಾರಿ ಜೆ.ಆರ್.ಭಾಸ್ಕರ್, ಎನ್.ರಾಕೇಶ್ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

<br>ಆರ್.ಆರ್. ನಗರದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆದ್ದ ಮುನಿರತ್ನ
ಆರ್.ಆರ್. ನಗರದಲ್ಲಿ 25 ಸಾವಿರ ಮತಗಳ ಅಂತರದಿಂದ ಗೆದ್ದ ಮುನಿರತ್ನ

ಆದರೆ, ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೂರು, ಪ್ರತ್ಯೇಕ ತನಿಖೆ ನಡೆಸಿರುವುದು ಸರಿಯಲ್ಲ ಎಂದು ಮುನಿರತ್ನ ಪರ ವಕೀಲರು ವಾದಿಸಿದ್ದು, ಎಫ್ ಐಆರ್ ರದ್ದುಪಡಿಸುವಂತೆ ಅರ್ಜಿ ಹಾಕಿದ್ದಾರೆ.

English summary
Voter ID Scam : RR Nagar MLA Munirathna fate to be decided on June 6 as Karnataka High court will take up the case in which Munirathna is accused. Tens of thousands of voter ID found Rajarajeshwari Nagara Constituency, which made CEC to postpone the Election process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X