• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನ ಮತದಾರರಿಗೆ ಎಂದೂ ಅಗೌರವ ತಂದಿಲ್ಲ: ಸದಾನಂದಗೌಡ

|
   ನನ್ನ ಮುಖದಲ್ಲಿ ನಗು ಇದೆ..! ಸಿದ್ದರಾಮಯ್ಯ ಮುಖ ಊದಿದೆ..! | Oneindia Kannada

   ಬೆಂಗಳೂರು, ಏಪ್ರಿಲ್ 08: ಜನಪ್ರತಿನಿಧಿ ಲಂಚಕೋರನಾದರೆ ಚುನಾಯಿಸಿದ ಪ್ರಜೆಗಳಿಗೆ ಅಪಮಾನವಾಗುತ್ತದೆ. ಆದ್ದರಿಂದ ಭ್ರಷ್ಟರನ್ನು ದೂರವಿರಿಸಿ ಪ್ರಜಾಪ್ರಭುತ್ವ ಮೌಲ್ಯವನ್ನು ಉಳಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದರು.

   ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚಿಕ್ಕಜಾಲದ ಕೆ.ಎನ್.ಎಸ್. ಕನ್ವೆನ್‍ಷನ್ ಹಾಲ್‌ನಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಇತ್ತೀಚೆಗೆ ಹೋಟೆಲ್‌ ಒಂದರಲ್ಲಿ ಲಂಚ ಪಡೆಯುತ್ತಿದ್ದವರು ಪೊಲೀಸರಿಗೆ ಸಿಕ್ಕಿಬಿದ್ದರು. ಇದು ಯಾವ ಇಲಾಖೆಗೆ ಸೇರಿದ್ದು ಎಂದು ಅವರು ಹೇಳಿಕೆ ನೀಡಿದ್ದರಿಂದ ಅದು ಜಗಜ್ಜಾಹೀರಾಗಿದೆ. ನಿಮಗೆ ಇಂತಹ ಜನಪ್ರತಿನಿಧಿ ಬೇಕೇ ಎಂದು ಪ್ರಶ್ನಿಸಿದರು.

   ವಿಳಾಸದ ವಿಚಾರದಲ್ಲಿ ಸಿದ್ದರಾಮಯ್ಯ, ಡಿವಿಎಸ್ ನಡುವೆ ಕಿತ್ತಾಟ!

   ನಿಮಗೆ ಅಗೌರವ ಬರುವಂತೆ ನಾನು ಯಾವಾಗಲಾದರೂ ನಡೆದುಕೊಂಡಿದ್ದೇನೆಯೇ ? ಭ್ರಷ್ಟಾಚಾರ ನಡೆಸಿದ್ದೇನೆಯೇ ? ನಿಮ್ಮ ಕೆಲಸಗಳನ್ನು ಮಾಡಿಕೊಡಲು ನಾಳೆ ಬನ್ನಿ ಎಂದಿದ್ದೇನೆಯೇ ? ಜಾತಿ ಆಧಾರದಲ್ಲಿ ತಾರತಮ್ಯ ಮಾಡಿದ್ದೇನೆಯೇ ? ನನ್ನ ಕೆಲಸವನ್ನು ನೋಡಿ ಮೌಲ್ಯಮಾಪನ ಮಾಡಿ ಎಂದು ಮನವಿ ಮಾಡಿದರು. ಸಂಸದರ ಅನುದಾನವನ್ನು ಶೇ.100 ರಷ್ಟು ಬಳಸಿಕೊಂಡು ನಿಮಗೆ ಗೌರವ ಬರುವಂತೆ ಮಾಡಿಲ್ಲವೇ ? ಕಾರ್ಯಕರ್ತರು, ಮುಖಂಡರಿಗೆ ಯಾವಾಗಲಾದರೂ ನೋವುಂಟು ಮಾಡಿದ್ದೇನೆಯೇ ? ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿಲ್ಲವೇ ? ಎಂದು ಪ್ರಶ್ನಿಸಿದರು.

   Vote for non corrupt candidates: Sadananda Gowda

   ಭ್ರಷ್ಟಾಚಾರದ ವಿರುದ್ಧ ಸಮರ ಸಾರೋಣ. ಇದಕ್ಕಾಗಿ ನೀವೆಲ್ಲರೂ ನನಗೆ ಕೈಜೋಡಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರೂ ಭ್ರಷ್ಟಾಚಾರದ ಕಡುವಿರೋಧಿಗಳಾಗಿದ್ದು ಅವರನ್ನು ಪುನಃ ಪ್ರಧಾನಿ ಮಾಡೋಣ ಎಂದು ಕರೆ ನೀಡಿದರು.

   ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

   ನನಗೆ ನಗುವುದನ್ನು ಬಿಟ್ಟರೆ ಬೇರೇನೂ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಾನು ನಗದೇ ಅವರಂತೆ ಯಾವಾಗಲೂ ಮುಖ ಊದಿಸಿಕೊಂಡು ಇರಬೇಕಿತ್ತೇ. ಅವರಂತೆ ದುರಹಂಕಾರದ ಮಾತುಗಳನ್ನಾಡುವುದು ನನಗೆ ಬರುವುದಿಲ್ಲ ಎಂದು ಸದಾನಂದಗೌಡರು ವಾಗ್ದಾಳಿ ನಡೆಸಿದರು. ನನ್ನನ್ನು ಪುತ್ತೂರಿಗೆ ಓಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಿಂದಲೇ ಜನರು ಅವರನ್ನು ಓಡಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದವನಾಗಿ ನಾನು ಕೆಲಸ ಮಾಡುತ್ತಿಲ್ಲವೇ ಎಂದು ತಿರುಗೇಟು ನೀಡಿದರು.

   ಸಿದ್ದರಾಮಯ್ಯ ರಿಜೆಕ್ಟೆಡ್ ಗೂಡ್ಸ್ : ಸದಾನಂದ ಗೌಡ

   ಕಳೆದ ಚುನಾವಣೆಯಲ್ಲಿ ಜಾಲದಲ್ಲಿ ನನಗೆ 37 ಸಾವಿರಕ್ಕೂ ಅಧಿಕ ಮತಗಳ ಲೀಡ್ ಸಿಕ್ಕಿತ್ತು. ಈ ಬಾರಿ ಅದು 50 ಸಾವಿರವನ್ನು ದಾಟಬೇಕು. ಇದಕ್ಕಾಗಿ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು. ನನ್ನ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

   ಯುಪಿಎ ಆಡಳಿತದಲ್ಲಿ ಸೈನಿಕರಿಗೆ ಸ್ವಾತಂತ್ರ್ಯವಿರಲಿಲ್ಲ: ಸದಾನಂದಗೌಡ

   ರಾಷ್ಟ್ರೀಯ ಪರಿಷತ್ ಸದಸ್ಯ ಎ.ರವಿ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಪಿ.ಕೆ.ರಾಜಗೋಪಾಲ್, ಮುಖಂಡರಾದ ದೊಡ್ಡ ಬಸವರಾಜು, ಪ್ರಕಾಶ್, ದೀಪು, ರಮೇಶ್‌ ಗೌಡ, ಅಮುದಾ ಮತ್ತಿತರರು ಹಾಜರಿದ್ದರು.

   ನಂತರ ಸದಾನಂದಗೌಡರು ಕೊಡಿಗೇಹಳ್ಳಿಯಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಕಳೆದ ಐದು ವರ್ಷದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ವಿವರಿಸಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Bengaluru North constituency BJP candidate Sadananda Gowda said, vote for non corrupt candidates, he also said i did not dis honer the people who vote me.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more