ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಲ್ವೊ ಬಸ್‌ ಸೇವೆ ನಗರಕ್ಕಿಲ್ಲ, ಹೊರವಲಯಕ್ಕೆ ಮಾತ್ರ, ಕಾರಣವೇನು?

|
Google Oneindia Kannada News

ಬೆಂಗಳೂರು, ಜೂನ್ 20: ನಷ್ಟದಿಂದ ತಪ್ಪಿಸಿಕೊಳ್ಳಲು ಬಿಎಂಟಿಸಿ ಆಲೋಚಿಸಿದ್ದು ವೋಲ್ವೊ ಬಸ್ಸನ್ನು ನಗರದೊಳಗೆ ಬಿಟ್ಟು ಕೇವಲ ಹೊರವಲಯದ ಪ್ರದೇಶಗಳಲ್ಲಿ ಕಾರ್ಯಾಚರಿಸಲು ಮುಂದಾಗಿದೆ.

ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು!ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು!

ಪ್ರತಿ ಲೀಟರ್ ಡೀಸೆಲ್‌ಗೆ ಎರಡು ಕಿ.ಮೀ ಅಷ್ಟೇ ಮೈಲೇಜ್ ನೀಡುತ್ತದೆ, ನಗರದೊಳಗೆ ಸಂಚಾರ ಮಾಡುವವರು ಅತಿ ವಿರಳ ಹೀಗಾಗಿ ನಗರ ಬಿಟ್ಟು ಹೊರವಲಯಗಳಿಗೆ ಮಾತ್ರ ಸೇವೆ ನೀಡಲು ನಿರ್ಧರಿಸಿದೆ.

ಕೆಎಸ್‌ಆರ್‌ಟಿಸಿ ಅಧೀನಕ್ಕೆ ವೋಲ್ವೊ

ಕೆಎಸ್‌ಆರ್‌ಟಿಸಿ ಅಧೀನಕ್ಕೆ ವೋಲ್ವೊ

ನಷ್ಟ ಹಿನ್ನೆಲೆಯಲ್ಲಿ ಬಿಎಂಟಿಸಿಯು ವೋಲ್ವೊ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸುವ ಸಂಬಂಧ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಡಿಸಿ ತಮ್ಮಣ್ಣ ತಿಳಿಸಿದ್ದಾರೆ.

ವೋಲ್ವೊ ನಷ್ಟಕ್ಕೆ ಕಾರಣಗಳಿವು

ವೋಲ್ವೊ ನಷ್ಟಕ್ಕೆ ಕಾರಣಗಳಿವು

ವೋಲ್ವೊ ಬಸ್‌ಗಳ ಬಿಡಿಭಾಗಗಳು ತುಂಬಾ ದುಬಾರಿ, ಬಿಡಿ ಭಾಗಗಳನ್ನು ವೋಲ್ವೊ ಕಂಪನಿಯಿಂದಲೇ ಖರೀದಿಸಲಾಗುತ್ತದೆ. ಹೀಗಾಗಿ ಕಂಪನಿಯು ನಿಗದಿಪಡಿಸಿದಷ್ಟು ದರವನ್ನು ನೀಡಿ ಬಿಡಿಭಾಗಗಳನ್ನು ಖರೀದಿಸಲಾಗುತ್ತದೆ. ಬೇರೆ ಕಂಪನಿಯ ಬಿಡಿಭಾಗಗಳು ಹೊಂದಾಣಿಕೆಯಾಗದಂತೆ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ.

ವೋಲ್ವೊ ಕಡಿಮೆ ಮೈಲೇಜ್ ನೀಡುತ್ತಿದೆ. ಒಂದು ಲೀಟರ್‌ಗೆ ಎರಡು ಕಿ.ಮೀ ಮಾತ್ರ ಮೈಲೇಜ್ ನೀಡುತ್ತಿದೆ. ಸಾಮಾನ್ಯ ಬಸ್‌ಗಳ ಆಯಿಲ್ ಸರ್ವೀಸ್‌ಗೆ 20-30 ಸಾವಿರ ಖರ್ಚಾದರೆ ವೊಲ್ವೊ ಬಸ್‌ಗಳಿಗೆ 1.50 ಲಕ್ಷ ರೂ ವೆಚ್ಚವಾಗುತ್ತಿದೆ. ಇದೇ ಕೆಲವು ಕಾರಣಗಳಾಗಿವೆ.

ವೋಲ್ವೊ ಬಸ್ ಗಳ ಸಂಚಾರದಿಂದ 80 ಕೋಟಿ ರೂ ನಷ್ಟ

ವೋಲ್ವೊ ಬಸ್ ಗಳ ಸಂಚಾರದಿಂದ 80 ಕೋಟಿ ರೂ ನಷ್ಟ

ವೋಲ್ವೊ ಬಸ್‌ ಸಂಚಾರದಿಂದ ಬಿಎಂಟಿಸಿಗೆ ಪ್ರತಿ ವರ್ಷ 80 ಕೋಟಿ ರೂ ನಷ್ಟ ಸಂಭವಿಸುತ್ತಿದೆ. ಕಳೆ ವರ್ಷ 82 ಕೋಟಿ ರೂ ನಷ್ಟವಾಗಿತ್ತು. ಸಾಮಾನಯ ಬಸ್ ಪ್ರತಿ ಲೀಟರ್ ಡೀಸೆಲ್‌ಗೆ 3.5ರಿಂದ 4 ಕಿ.ಮೀ ಬಂದರೆ ಎಸಿ ಬಸ್‌ಗಳು ಕೇವಲ 2 ಕಿ.ಮೀ ಮೈಲೇಜ್ ಮಾತ್ರ ನೀಡುತ್ತವೆ. ವೋಲ್ವೊ ಬಸ್ ಗಳು ಪ್ರತಿ ಕಿ,ಮೀಗೆ 66ರೂ ಆದಾಯ ತಂದು ಕೊಡುತ್ತವೆ.ಆದರೆ 82 ರೂ ವೆಚ್ಚ ಮಾಡಬೇಕಾಗುತ್ತದೆ. ಪ್ರತಿ ಕಿ.ಮೀಗೆ 16 ರೂ ನಷ್ಟ ಉಂಟಾಗುತ್ತಿದೆ.

ನಷ್ಟದಿಂದ ಪಾರಾಗಲು ಈ ಕ್ರಮ

ನಷ್ಟದಿಂದ ಪಾರಾಗಲು ಈ ಕ್ರಮ

ಬೆಂಗಳೂರು ನಗರದಲ್ಲಿ ಸಂಚರಿಸುತ್ತಿರುವ ವೋಲ್ವೊ ಬಸ್‌ಗಳಿಂದ ನಿರೀಕ್ಷಿತ ಆದಾಯ ಬರುತ್ತಿಲಲ್. ನಷ್ಟದಿಂದ ಪಾರಾಗಲು ಈ ನಿರ್ಧಾರಕ್ಕೆ ಬರಲಾಗಿದೆ. ಹೊಸ ವಲಯದ ಪ್ರದೇಶಗಳಿಗೆ ಕಾರ್ಯಾಚರಣೆಗೊಳಿಸಲು ಚಿಂತಿಸಲಾಗಿದೆ. ತಜ್ಞರ ಸಮಿತಿ ರಚಿಸಿ ಬಳಿಕ ಅಧಿಕೃತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

English summary
BMTC decided to handover all Volvo buses to KSRTC and BMTC is thinking to run volvo buses in city outskirt only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X