ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಕ್ಕಲಿಗರ ಚುನಾವಣೆ: ಒಳ ಪಂಗಡದ ರಾಜಕೀಯ ಉಲ್ಬಣ

By # ರಾಜೇಶ್ ಕೊಂಡಾಪುರ
|
Google Oneindia Kannada News

ಬೆಂಗಳೂರು/ರಾಮನಗರ, ಅ.23: ರಾಜ್ಯದಲ್ಲಿ ಒಕ್ಕಲಿಗರ ಶಕ್ತಿ ಕೇಂದ್ರವಾದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಒಳ ಪಂಗಡದ ರಾಜಕೀಯ ಉಲ್ಬಣಗೊಳ್ಳುತ್ತಿದೆ.

ಹೌದು, ಸಂಘದ ಅಧಿಕಾರ ಚುಕ್ಕಾಣಿ ಹಿಡಿಯಲು ತಹತಹಿಸುತ್ತಿರುವ ಸ್ಪರ್ಧಾಕಾಂಕ್ಷಿಗಳು ತಾವೇ ಸಿಂಡಿಕೇಟ್‌ ಗಳ ಮುಖ್ಯಸ್ಥರಾಗಬೇಕೆನ್ನುವ ಇರಾದೆಯಿಂದ ಒಳಪಂಗಡದ ಅಸ್ತ್ರವನ್ನು ಬಿಟ್ಟು, ಬಿರುಕು ಮೂಡಿಸುತ್ತಿರುವ ಬೆಳವಣಿಗೆ ಒಂದು ವಾರದಿಂಚೇಗೆ ಬಲಗೊಳ್ಳುತ್ತಿದೆ. ಇದರಿಂದಾಗಿ ಈಗಾಗಲೇ ಒಂದು ಸುತ್ತು ಬಿರುಸಿನ ಪ್ರಚಾರ ನಡೆಸಿದ ತಂಡದಲ್ಲಿ ಸಾರಥ್ಯಕ್ಕಾಗಿ 'ಪಂಗಡದ ಪೋಟಿ' ನಡೆಯುತ್ತಿದೆ.

ಯಡಿಯೂರಪ್ಪ ಅಧಿಕಾದಿಂದ ವಂಚಿತರಾದ ಸಂದರ್ಭದಲ್ಲಿ ತಾವು ಅಧಿಕಾರ ಹಿಡಿಯಲು ಲಿಂಗಾಯಿತ ಒಳ ಪಂಗಡಗಳನ್ನು ಒಟ್ಟುಗೂಡಿಸಿ, ಮುಖ್ಯಮಂತ್ರಿ ಗದ್ದುಗೆ ಹಿಡಿದು ಯಶಸ್ವಿಯಾದವರೇ, ಅವರ ಪ್ರತಿಸ್ಪರ್ಧಿಯಾಗಿ ಒಕ್ಕಲಿಗರೆಲ್ಲಾ ಒಂದಾಗಬೇಕು' ಗುಟುರು ಹಾಕಿದ್ದ ಒಕ್ಕಲಿಗ ಸಮುದಾಯದ ಶಕ್ತಿ ಕೇಂದ್ರ' ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸಂಘದಲ್ಲಿ ಆಳ್ವಿಕೆ ನಡೆಸಿದ ಕೆಲವು ನಿರ್ದೇಶಕರು ಒಳ ಪಂಗಡದ ರಾಜಕೀಯ ಆರಂಭಿಸಿದ್ದು, ಜನಾಂಗದ ಮತದಾರರಲ್ಲಿ ಅಸಹ್ಯ ಮೂಡಿಸುತ್ತಿದೆ.

ಒಕ್ಕಲಿಗರ ಸಂಘದ ಚುನಾವಣೆ ಡಿಸೆಂಬರ್ 29ಕ್ಕೆ ನಿಗದಿ:

Vokkaligara Sangha election Dec 2013 sub groups in Vokkaliga communities major issue
ಒಂದೂ ಕಾಲು ಲಕ್ಷ ಮತದಾರರಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಡಿಸೆಂಬರ್ 29ಕ್ಕೆ ನಿಗದಿಯಾಗಿದೆ. ಅದ್ದರಿಂದ ತಮ್ಮ ತಮ್ಮ ತಂಡಗಳ ಪಟ್ಟಿ ಅಂತಿಮವಾಗಬೇಕಿದ್ದು, ತಂಡದ ಸಾರಥ್ಯವನ್ನು ತಾನೇ ವಹಿಸಿಕೊಳ್ಳಬೇಕೆನ್ನುವ ಹಠ'ಕ್ಕೆ ಬಿದ್ದಿರುವ ಕೆಲವು ಪ್ರತಿಷ್ಠಿತರೆನಿಸಿದ ನಿರ್ದೇಶಕರು ಗಂಗಡಿಕಾರ, ಮರಸು, ಕುಚುಂಟಿಗ ಎನ್ನುವ ಒಳ ಪಂಗಡಗಳನ್ನು ಇದೇ ಪ್ರಥಮ ಬಾರಿಗೆ ಈಚೆಗೆ ತಂದು, ಮತಗಳ ವಿಭಜನೆಯ ಮೇಲೆ ಅಧಿಕಾರದ ಕನಸು ಕಾಣುತ್ತಿದ್ದಾರೆ!

ಅವ ಶ್ರೇಷ್ಠ- ಇವ ದುಷ್ಟ: ಈಗಾಲೇ ಪ್ರಚಾರ ಕೈಗೊಂಡಿರುವ ಕೆಲವು ಹಾಲಿ ಸಂಘದ ನಿರ್ದೇಶಕರು, ಮಾಜಿ ನಿರ್ದೇಶಕರು ಹಾಗೂ ಕಳೆದ ಬಾರಿ ಪರಭಾವಗೊಂಡಿದ್ದವರು ನಾನು ಶ್ರೇಷ್ಠ - ಆತ ದುಷ್ಟ ಎಂದು ಒಬ್ಬರ ಮೇಲೆ ಒಬ್ಬರು ಕೆಸರು ಎರಚಿಕೊಳ್ಳುತ್ತಾ ಪ್ರಚಾರಕ್ಕಿಳಿದಿದ್ದಾರೆ.

ವಿಪರ್ಯಾಸವೆಂದರೆ ಇವರೆಲ್ಲಾ ತಮ್ಮ ಬೆನ್ನಿಗೆ ಅಂಟಿಸಿಕೊಂಡಿರುವುದು ಒಕ್ಕಲಿಗರ ಸಂಘದ ಒಳಿತಿಗಾಗಿ ಶ್ರಮಿಸಿದ ಪ್ರೊ ಕೆ ವೆಂಕಟಗಿರಿಗೌಡ, ಗುತ್ತಲೇ ಗೌಡ, ಎಚ್ ಕೆ ವೀರಣ್ಣ ಗೌಡ ಅವರಂತಹ ಸಜ್ಜನರ ಹೆಸರನ್ನು! ಆದರೆ ಈಗಾಗಲೇ ಹೆಸರಿಸಲಾಗಿರವ ತಂಡದಲ್ಲಿ ಆಡಳಿತ ನಡೆಸಿ ಹೆಸರು ಕೆಡಿಸಿಕೊಂಡವರು, ವಿವಿಧ ಸ್ತರಗಳಲ್ಲಿ ಸಾಮಾಜಿಕವಾಗಿ ಜನತೆಗೆ ವಂಚಿಸಿದವರು ಸೇರಿದ್ದಾರೆ. ಅದ್ದರಿಂದ ಯಾವ ಸಿಂಡಿಕೇಟಿನಲ್ಲಿಯೂ ಸಜ್ಜನರೇ ತುಂಬಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಹಣವೇ ತಂಡಕ್ಕೆ ಮೂಲವಯ್ಯ?
ಕೆಲ ಸಿಂಡಿಕೇಟುಗಳು ಮತದಾರರ ಮನ ಗೆಲ್ಲಲು ಎಲ್ಲಾ ಮಾರ್ಗಗಳನ್ನು ಅನುಸರಿಸುತ್ತಿವೆ. ಹಣ ಬಲ ಈ ಚುನಾವಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದು, ತಮ್ಮ ಸಿಂಡಿಕೇಟುಗಳಿಗೆ ಸೇರಿಸಿಕೊಳ್ಳಲು ಹಾಲಿ ಮತ್ತು ಮಾಜಿ ನಿರ್ದೇಶಕರು ಕೋಟಿ ಕೋಟಿ ಹಣವುಳ್ಳವರನ್ನು ತಮ್ಮ ಬಗಲಿಗೆ ಹಾಕಿಕೊಂಡು ಜನಾಂಗದ ಉದ್ಧಾರದ ಹೆಸರಲ್ಲಿ ಮತ ಸಮರ ಆರಂಭಿಸಿದ್ದಾರೆ!

ಅಭ್ಯರ್ಥಿಗಳು 1-2 ಕೋಟಿ ರೂ ಖರ್ಚು ಮಾಡಲು ಉತ್ಸುಹಕರಾಗಿದ್ದು, ಅದಾಗಲೇ ಅಲ್ಲಲ್ಲಿ ಬಾಡೂಟ, ಗುಂಡಿನ ಪಾರ್ಟಿಗಳು ಆರಂಭಗೊಂಡಿವೆ. ಅಲ್ಲದೆ, ಕೆಲವು ಪ್ರಮುಖ ಪುಡಿ ನಾಯಕರಿಗಳಿಗೆ ಕೆಲ ಬಾರ್ ಮತ್ತು ಡಾಬಾಗಳು ಅಡ್ಡೆಗಳಾಗಿ ಮಾರ್ಪಟ್ಟಿವೆ.

ಒಟ್ಟಾರೆ, ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪಂಗಡ ರಾಜಕೀಯ ಗರಿಗೆದರಿದೆ. ಹಣವುಳ್ಳವರಿಗೆ ಹೆಚ್ಚಿನ ಮನ್ನಣೆ ಅಯಾ ಸಿಂಡಿಕೇಟಿನಲ್ಲಿ ನೀಡಲಾಗುತ್ತಿದೆ. ನಾವು ಎಲ್ಲರಿಗಿಂತಲು ಸಭ್ಯರು ಎಂದು ಪುಂಖಾನುಪುಂಖವಾಗಿ ಬೊಬ್ಬರಿದರು. ಕಾಸು ಖರ್ಚು ಮಾಡದೆ, ಮತದಾರನ ಮನೆಗೆ ಎಡತಾಕದೆ ಕೇವಲ ಮತಪತ್ರವನ್ನು ಮತದಾರನ ಮನೆಗೆ ಕಳುಹಿಸಿ, ಯಾವಾಗಲೂ ಅತ್ಯಧಿಕ ಮತಗಳಿಂದ ಗೆಲ್ಲುತ್ತಿದ್ದ ಪ್ರೊ. ಕೆ ವೆಂಕಟಗಿರಿ ಗೌಡರಂತೆ ನಿಲ್ಲುವವರ್‍ಯಾರು ಸ್ವಚ್ಛರಲ್ಲ ಎನ್ನುವುದು ಮಾತ್ರ ಒಕ್ಕಲಿಗ ಜನಾಂಗದ ಸಮುದಾಯಕ್ಕೆ ಮನದಟ್ಟಾಗಿದೆ ಎನ್ನುವುದು ಸದ್ಯದ ಸುದ್ದಿ.

English summary
Karnataka Vokkaligara Sangha election scheduled for 29th December 2013 heats-up in Bangalore Urban, Rural districts and Ramanagara. This time sub communities issue is set play a amjor role. The century-old NGO runs a chain of educational institutions and welfare centres across the state. The word Okka or Okkalu in Kannada (Dravidian in origin) means a family or a clan[9] and an Okkaliga being a person belonging to such a family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X