ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಕ್ಯಾಮರಾ ಬರಲಿದ್ದು, ಕಳ್ಳತನಕ್ಕೆಂದು ಬಂದರೆ ಕ್ಯಾಮರಾವು ಎಚ್ಚರಿಕೆ ನೀಡಲಿದೆ.

ಅಪರಾಧ ತಡೆಗೆ ಕಡಿವಾಣ ಹಾಕಲು ವೈಟ್‌ಫೀಲ್ಡ್ ಉಪ ವಿಭಾಗದ ಪೊಲೀಸರು ಸಿಸಿ ಕ್ಯಾಮರಾ ಮತ್ತು ಆಡಿಯೋ ಸ್ಪೀಕರ್ ಅಳವಡಿಸಲು ಖಾಸಗಿ ಕಂಪನಿ ಜೊತೆ ಕೈ ಜೋಡಿಸಿದ್ದಾರೆ.

ವಿಡಿಯೋ: ಹಾಡಹಗಲೇ ದೆಹಲಿಯಲ್ಲಿ ಗನ್ ಹಿಡಿದು ರಸ್ತೆಗಿಳಿದ ಅಪರಿಚಿತರುವಿಡಿಯೋ: ಹಾಡಹಗಲೇ ದೆಹಲಿಯಲ್ಲಿ ಗನ್ ಹಿಡಿದು ರಸ್ತೆಗಿಳಿದ ಅಪರಿಚಿತರು

ವೈಟ್‌ಫೀಲ್ಡ್ ಉಪ ವಿಭಾಗ ವ್ಯಾಪ್ತಿಯ ಕೃಷ್ಣ ರಾಜಪುರ, ಮಹದೇವಪುರ, ಕಾಡುಗೋಡಿ, ವೈಟ್‌ಫೀಲ್ಡ್‌ಗಳಲ್ಲಿ ಅಳವಡಿಸಲಾಗುತ್ತಿದೆ.

Voice Based CC Camera For Crime Prevention How Does It Work

ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಸಲಹೆ ಸೂಚನೆ ನೀಡಲು ಸಂಚಾರ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಈ ವ್ಯವಸ್ಥೆ ಅಳವಡಿಸಿಕೊಳ್ಳಬಹುದಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ವಿಡಿಯೋ ಜಾಗದಲ್ಲಿ ಆಡಿಯೋ ಕೇಳಿಸುವ ವ್ಯವಸ್ಥೆ ಇರುತ್ತದೆ. ಯಾರಾದರೂ ಕಿಡಿಗೇಡಿ ಕೃತ್ಯ ಅಥವಾ ಇನ್ನಿತರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದುಬಂದರೆ ಅವರನ್ನು ಎಚ್ಚರಿಸುವ ಸಂದೇಶ ಇದಾಗಿರಲಿದೆ.

ಹೆಬ್ಬಗೋಡಿ, ಜಿಗಣಿ, ಕನಕಪುರ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಧ್ವನಿ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳಡಿಸಲಾಗಿದೆ. ಇದೀಗ ವೈಟ್‌ಫೀಲ್ಡ್ ಉಪವಿಭಾಗದಲ್ಲಿ ಅಳವಡಿಸಲು ಎಸಿಪಿ ಎಂಇ ಮನೋಜ್ ಕುಮಾರ್ ಮುಂದಾಗಿದ್ದಾರೆ.

English summary
A sound-based CC camera is coming to the crime scene and the camera will alert you if theft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X