ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಪ್ರವೇಶ ಶುಲ್ಕ ಏರಿಕೆ

|
Google Oneindia Kannada News

ಬೆಂಗಳೂರು, ಜು. 16 : ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಪ್ರವೇಶ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದೆ. 30 ರೂ.ಇದ್ದ ಪ್ರವೇಶ ಶುಲ್ಕವನ್ನು 40 ರೂ.ಗಳಿಗೆ ಏರಿಕೆ ಮಾಡಲಾಗಿದೆ.

2007ರಲ್ಲಿ ವಸ್ತು ಸಂಗ್ರಹಾಲಯದ ಪ್ರವೇಶ ಶುಲ್ಕ 15 ರೂ. ಇತ್ತು. ನಂತರ ಎರಡು ಬಾರಿ ಶುಲ್ಕವನ್ನು ಪರಿಷ್ಕರಣೆ ಮಾಡಿದ ನಂತರ 30 ರೂ. ಆಗಿತ್ತು. ಸದ್ಯ ಅದನ್ನು ಜುಲೈ 1ರಿಂದ ಜಾರಿಗೆ ಬರುವಂತೆ 40 ರೂ.ಗಳಿಗೆ ಹೆಚ್ಚಿಸಲಾಗಿದೆ.

Visvesvaraya

ಸ್ವಚ್ಛತೆ, ವಿದ್ಯುತ್, ನೀರು, ಹವಾನಿಯಂತ್ರಣ ವ್ಯವಸ್ಥೆ, ಭದ್ರತೆ ಮುಂತಾದವುಗಳ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಆದರೆ, ಕಾರ್ಪೊರೇಷನ್ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳಿಂದ ವಸ್ತು ಸಂಗ್ರಹಾಲಯ ವೀಕ್ಷಿಸಲು ಆಗಮಿಸುವ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಒಟ್ಟು ಎಂಟು ಪ್ರದರ್ಶನ ಗ್ಯಾಲರಿಗಳನ್ನು ಹೊಂದಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಯಾಂತ್ರಿಕ ಕೈಶಾಲೆ ಗ್ಯಾಲರಿ, ಡೈನೊಸಾರ್ ಗ್ಯಾಲರಿ, ಜೈವಿಕ ತಂತ್ರಜ್ಞಾನ ಗ್ಯಾಲರಿ, ಸ್ಪೇಸ್ ಗ್ಯಾಲರಿ, ಬಿಇಎಲ್ ಎಲೆಕ್ಟ್ರಾನಿಕ್ ಗ್ಯಾಲರಿ ಸೇರಿದಂತೆ ಹಲವಾರು ಆಕರ್ಷಣೆಗಳಿವೆ. [ರಜೆ ದಿನಗಳಲ್ಲಿ ಮೈಸೂರು ಮೃಗಾಲಯ ಸ್ವಲ್ಪ ದುಬಾರಿ]

ಕಸ್ತೂರಬಾ ರಸ್ತೆಯಲ್ಲಿರುವ ಈ ವಸ್ತು ಸಂಗ್ರಹಾಲಯಕ್ಕೆ ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳಂದು ಮಾತ್ರ ರಜೆ ಇರುತ್ತದೆ. ಉಳಿದಂತೆ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ. [ಮ್ಯೂಸಿಯಂ ವೆಬ್ ಸೈಟ್]

English summary
Visitors to Visvesvaraya Industrial and Technological Museum Kasturba Road, Bangalore shell out more for entry. Museum hiked entry fee to Rs 40 from 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X