ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಶಿಕಲಾ ಆಪ್ತರ ದರ್ಶನಕ್ಕಾಗಿ ನಿಯಮಗಳಿಗೆ ಎಳ್ಳು ನೀರು ಬಿಟ್ಟ ಸರ್ಕಾರ?

ಶಶಿಕಲಾ ಅವರಿಗೆ ಜೈಲು ಶಿಕ್ಷೆ ವಿಧಿಸುವಾಗಲೇ ಸುಪ್ರೀಂ ಕೋರ್ಟ್, ಶಶಿಕಲಾ ಅವರನ್ನು ಸಾಮಾನ್ಯ ಕೈದಿಯಂತೆ ಪರಿಗಣಿಸಬೇಕೆಂದು ತಾಕೀತು ಮಾಡಿದೆ. ಆದರೆ, ಶಶಿಕಲಾ ಅವರನ್ನು ವಿಶೇಷ ಕೈದಿಯಾಗಿಯೇ ಪರಿಗಣಿಸಲಾಗಿದೆ ಎನ್ನಲಾಗಿದೆ.

|
Google Oneindia Kannada News

ಬೆಂಗಳೂರು, ಏಪ್ರಿಲ್ 6: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ಶಶಿಕಲಾ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದವರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಿಡಿ ಪಡೆಯಲಾಗಿರುವ ಮಾಹಿತಿಯಲ್ಲಿ ನಿಯಮ ಮೀರಿ ಶಶಿಕಲಾ ಅವರ ಭೇಟಿಗೆ ಅನುಮತಿ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಡೆಕ್ಕನ್ ಕ್ರೋನಿಕಲ್ ವರದಿ ಮಾಡಿದೆ.

ಶಶಿಕಲಾ ಅವರಿಗೆ ಜೈಲು ಶಿಕ್ಷೆ ವಿಧಿಸುವಾಗಲೇ ಸುಪ್ರೀಂ ಕೋರ್ಟ್, ಶಶಿಕಲಾ ಅವರನ್ನು ಸಾಮಾನ್ಯ ಕೈದಿಯಂತೆ ಪರಿಗಣಿಸಬೇಕೆಂದು ತಾಕೀತು ಮಾಡಿದೆ. ಆದರೆ, ಶಶಿಕಲಾ ಅವರನ್ನು ವಿಶೇಷ ಕೈದಿಯಾಗಿಯೇ ಪರಿಗಣಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Visitors make a beeline for Sasikala in Bengaluru jail, prison rules flouted

ಜೈಲಿನ ನಿಯಮಗಳಂತೆ, ಪ್ರತಿ ದಿನ ಸಂಜೆ 5ರ ನಂತರ ಯಾವುದೇ ವ್ಯಕ್ತಿಗಳ ಭೇಟಿಗೆ ಅವಕಾಶ ಇರುವುದಿಲ್ಲ. ಆದರೆ, ಶಶಿಕಲಾ ಅವರ ವಿಚಾರದಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ.

ಶಶಿಕಲಾ ಅವರು ಬಂಧಿಯಾದ ನಂತರ ಈವರೆಗೆ ಅವರನ್ನು 19 ಜನರು ಭೇಟಿಯಾಗಿದ್ದು, ಇವರಲ್ಲಿ ಬಹುತೇಕರು ಸಂಜೆ 6 ಗಂಟೆಯ ನಂತರವೇ ಭೇಟಿಯಾಗಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಲಾಗಿದೆ.

ಮೊದಮೊದಲು ಸುಪ್ರೀಂ ಕೋರ್ಟ್ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸಲಾಗಿದೆ. ಸಾಮಾನ್ಯ ಕೈದಿಯಂತೆಯೇ ನೋಡಿಕೊಳ್ಳಬೇಕು ಎಂದು ಹೇಳಿದ್ದಕ್ಕೆ ಶಶಿಕಲಾ ಅವರಿಗೆ ವಿಶೇಷ ಜೈಲು ಕೊಠಡಿ, ಅವರ ಆಯ್ಕೆಯ ಹಾಸಿಗೆ, ದಿಂಬು, ಟೇಬಲ್ ಫ್ಯಾನ್, ಎಸಿ ಮುಂತಾದ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ.

ಆದರೆ, ಕಾಲ ಕ್ರಮೇಣ ಅವರ ಆಯ್ಕೆಯಂತೆ ಎಲ್ಲವೂ ಬದಲಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

English summary
A Right to Information (RTI) query has revealed that 19 people visited AIADMK general secretary Sasikala Natarajan in Bengaluru's Parappana Agrahara jail since the Supreme Court verdict against her in a Disproportionate Assets (DA) case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X