• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಮಹಿಳಾ ಸಿಬ್ಬಂದಿ ಕೆನ್ನೆಗೆ ಬಾರಿಸಿದ ಡೊಮಿನೊಸ್ ''ಪಿಜ್ಜಾ'' ಮ್ಯಾನೇಜರ್

|
Google Oneindia Kannada News

ಬೆಂಗಳೂರು, ಆ.03: ಪ್ರೀತಿಯನ್ನು ನಿರಾಕರಿಸಿದ ಯುವತಿ ಕಪಾಳಕ್ಕೆ ಬಾರಿಸಿ ಹಲ್ಲೆ ಮಾಡಿರುವ ಘಟನೆ ಬಸವನಗುಡಿಯಲ್ಲಿರುವ ಡೊಮಿನೊಸ್ ಪಿಜ್ಜಾ ದಲ್ಲಿ ನಡೆದಿದೆ. ಡೊಮಿನೊಸ್ ಪಿಜ್ಜಾ ಮ್ಯಾನೇಜರ್ ಪುರುಷೋತ್ತಮ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆ ರಭಸಕ್ಕೆ ಯುವತಿ ಕುಸಿದು ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಬಸವನಗುಡಿಯ ರಾಮಕೃಷ್ಣ ಆಶ್ರಮದ ಸಮೀಪ ಇರುವ ಡೊಮಿನೊಸ್ ಪಿಜ್ಜಾ ಹಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುವಂತೆ ಮ್ಯಾನೇಜರ್ ಪುರುಷೋತ್ತಮ್ ಬಲವಂತ ಮಾಡುತ್ತಿದ್ದ. ಯುವತಿ ನಿರಾಕರಿಸಿ ಬೇರೊಬ್ಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ. ಇದರಿಂದ ದ್ವೇಷ ಕಾರುತ್ತಿದ್ದ ಮ್ಯಾನೇಜರ್ ಕೆಲಸ ಹೇಳುವ ನೆಪದಲ್ಲಿ ಕಪಾಳಕ್ಕೆ ಬಾರಿಸಿದ್ದಾನೆ. ಏಟಿನ ರಭಸಕ್ಕೆ ಯುವತಿ ಕುಸಿದು ಬಿದ್ದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲಸ ಹೋಗುತ್ತದೆ ಎನ್ನುವ ಭಯದಿಂದ ಆಕೆ ಈವರೆಗೂ ದೂರು ನೀಡಿರಲಿಲ್ಲ.

ಹಲ್ಲೆ ಮಾಡುವ ವಿಡಿಯೋ ಸುದ್ದಿಯಾಗುತ್ತಿದ್ದಂತೆ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುರುಷೋತ್ತಮ್‌ಗಾಗಿ ಶೋಧ ನಡೆಸುತ್ತಿದ್ದಾರೆ. ಘಟನೆ ಬಳಿಕ ಎಚ್ಚೆತ್ತ ಡೊಮಿನೊಸ್ ಪಿಜ್ಜಾ ಮ್ಯಾನೇಜರ್ ಪುರುಷೋತ್ತಮ್ ನನ್ನು ಕೆಲಸದಿಂದ ವಜಾ ಮಾಡಿದೆ. ಬಸವನಗುಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮ್ಯಾನೇಜರ್ ಮಹದೇವ್ ಎಂಬಾತನನ್ನು ವಶಕ್ಕೆ ಪಡೆದು ಮಾಹಿತಿ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಪುರುಷೋತ್ತಮ್ ವಿರುದ್ಧ ಕೇಸು ದಾಖಲಿಸಿಕೊಂಡು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

   CM ಆಗೋಕಂತು ಆಗ್ಲಿಲ್ಲ DCM ಸ್ಥಾನ ಸಿಗುತ್ತೆ ಅಂದುಕೊಂಡೋರಿಗೆ ಶಾಕ್ ಕೊಟ್ಟ ಹೈ ಕಮಾಂಡ್ | Oneindia Kannada

   English summary
   A serious assault on a young woman working at Domino's Pizza has been captured on the CCTV know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X