ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ: ಉದ್ಯಾನ ನಗರಿ ಬೆಂಗಳೂರು ಎಷ್ಟು ಚೆಂದ

|
Google Oneindia Kannada News

ಬೆಂಗಳೂರು, ಏಪ್ರಿಲ್ 20 : ಸದಾ ಜನಜಂಗುಳಿ, ವಾಹನಗಳ ಸಂಚಾರ, ಮಾಲಿನ್ಯ ಎಂದು ಬೆಂಗಳೂರನ್ನು ದೂರುವವರೇ ಹೆಚ್ಚು. ಎಷ್ಟು ಜನ ಬೆಂಗಳೂರನ್ನು ದೂರುತ್ತಾರೋ ಅದಕ್ಕಿಂತ ಹೆಚ್ಚಿನ ಜನ ನಗರವನ್ನು ಪ್ರೀತಿಸುತ್ತಾರೆ.

ಸಾಲು-ಸಾಲು ಮರಗಳು, ಮನಸ್ಸಿಗೆ ಮುದ ನೀಡುವ ಹವಾಮಾನ, ಹಸಿರಿನ ವಾತಾವರಣ ಮುಂತಾದ ಕಾರಣಗಳಿಗೆ ಬೆಂಗಳೂರು ಹಲವರಿಗೆ ಇಷ್ಟವಾಗುತ್ತದೆ. ಈಗ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್‌ ಜಾರಿಯಲ್ಲಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ವಿರಳವಾಗಿದೆ.

ಬೆಂಗಳೂರು; ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಸ್ಥಗಿತ ಬೆಂಗಳೂರು; ಮೇ 3ರ ತನಕ ನಮ್ಮ ಮೆಟ್ರೋ ಸಂಚಾರ ಸ್ಥಗಿತ

ಈ ಸಮಯದಲ್ಲಿ ಬೆಂಗಳೂರಿನ ವಿಡಿಯೋ ಚಿತ್ರೀಕರಣವನ್ನು ಬಿಬಿಎಂಪಿ ಮಾಡಿದೆ. ದ್ರೋನ್ ಕ್ಯಾಮರಾ ಮೂಲಕ ಸೆರೆ ಹಿಡಿರುವ ಬೆಂಗಳೂರಿನ ಚಿತ್ರಣ ಸುಂದರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ. ಬೆಂಗಳೂರು ಹೀಗೂ ಇದೆಯೇ? ಎಂದು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇಡೀ ಬೆಂಗಳೂರು ಸೀಲ್‌ಡೌನ್ ಬಗ್ಗೆ ಸರ್ಕಾರದ ನಿಲುವೇನು? ಇಲ್ಲಿದೆ ಮಾಹಿತಿಇಡೀ ಬೆಂಗಳೂರು ಸೀಲ್‌ಡೌನ್ ಬಗ್ಗೆ ಸರ್ಕಾರದ ನಿಲುವೇನು? ಇಲ್ಲಿದೆ ಮಾಹಿತಿ

Viral Video View Of Bengaluru City During Lock Down

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಗೌತಮ್ ಕುಮಾರ್ ಜೈನ್ ಫೇಸ್‌ ಬುಕ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸುಮಾರು 2 ನಿಮಿಷಗಳ ವಿಡಿಯೋದಲ್ಲಿ ಬೆಂಗಳೂರು ನಗರದ ವಿವಿಧ ಪ್ರವೇಶಗಳನ್ನು ತೋರಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ

ವಿಧಾನಸೌಧ, ಐಟಿಪಿಎಲ್, ಕೆಎಸ್‌ಸಿಎ, ನಾಯಂಡಹಳ್ಳಿ, ಮೆಜೆಸ್ಟಿಕ್ ರೈಲು ನಿಲ್ದಾಣ, ಹೈಕೋರ್ಟ್, ಕೆ. ಆರ್. ಪುರಂ ಸೇತುವೆ, ಬಿಬಿಎಂಪಿ ಕಚೇರಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಚಿತ್ರೀಕರಿಸಲಾಗಿದೆ. ಜನ ಸಂಚಾರವಿಲ್ಲದ, ವಾಹನ ಸಂಚಾರ ವಿರಳವಾಗಿರುವ ನಗರ ಸುಂದರವಾಗಿ ಕಾಣುತ್ತಿದೆ.

ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದವರು ಹಿಂದಿನ ಬೆಂಗಳೂರು ನಗರವನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ ಈ ವಿಡಿಯೋ. ಈಗ ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಬೆಂಗಳೂರಿಗೆ ಹಿಂದಿನ ಕಳೆ ಬಂದಿದೆ.

ವೈರಲ್ ಆಗಿರುವ ವಿಡಿಯೋವನ್ನು ನೀವು ನೋಡಿ

English summary
View of the Bengaluru city during the lock down. Around 2 minute video goes viral on social media. BBMP mayor shared the video in the facebook page.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X