ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ಖಾತೆ ತೆರೆಯೋದು ಹೇಗೆ? ರಮ್ಯಾ ಮೇಡಂ ಪಾಠ ಕೇಳಿ..!

|
Google Oneindia Kannada News

Recommended Video

ನಕಲಿ ಅಕೌಂಟ್ ಹೇಗೆ ತೆರೆಯೋದು ಎಂಬ ಬಗ್ಗೆ ಪಾಠ ಹೇಳ್ತಿರೋ ರಮ್ಯಾ ಮೇಡಂ | ವೈರಲ್ ವಿಡಿಯೋ | Oneindia Kannada

ಬೆಂಗಳೂರು, ಫೆಬ್ರವರಿ 07: ಸಾಮಾಜಿಕ ಜಾಲತಾಣಹಳಲ್ಲಿ ನಕಲಿ ಖಾತೆ ತೆರೆಯುವುದು ಹೇಗೆ ಮತ್ತು ಅವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಪಾಠ ಮಾಡುತ್ತಿರುವ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಮ್ಯಾ ಟ್ವೀಟ್ ಗೆ ಮೌನ ಮುರಿದು ಉತ್ತರಿಸಿದ ರಾಜೀವ್ ಚಂದ್ರಶೇಖರ್ ರಮ್ಯಾ ಟ್ವೀಟ್ ಗೆ ಮೌನ ಮುರಿದು ಉತ್ತರಿಸಿದ ರಾಜೀವ್ ಚಂದ್ರಶೇಖರ್

ಈ ವಿಡಿಯೋದಲ್ಲಿ ಕನ್ನಡದ ಖ್ಯಾತ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ, ತಮ್ಮ ಅನುಯಾಯಿಗಳಿಗೆ, ಕಾರ್ಯಕರ್ತರಿಗೆ ನಕಲಿ ಖಾತೆ ಸೃಷ್ಟಿಸುವ ಕುರಿತು ಪಾಠ ಹೇಳುತ್ತಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ನಶೆಯಲ್ಲಿ ಮಾತನಾಡುತ್ತಾರೆ ಎಂದು ಅವರ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿ ಸುದ್ದಿಯಾಗಿದ್ದ ರಮ್ಯಾ, ಇದೀಗ ಸ್ವತಃ ವಿವಾದದಲ್ಲಿ ಸಿಲುಕಿದ್ದು, ಆಡಿಕೊಳ್ಳುವವರೆದುರು ಎಡವಿ ಬಿದ್ದಂತಾಗಿದೆ.

Viral video: Ramya teaches how to create fake accounts in social media!


'ನಕಲಿ ಖಾತೆ ಹೊಂದುವುದು ತಪ್ಪಲ್ಲವೇ?' ಎಂದು ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, 'ಅದರಲ್ಲಿ ತಪ್ಪೇನಿದೆ?, ನಿಜ ಹೇಳಬೇಕೆಂದರೆ ನಂದೂ ಒಂದು ನಕಲಿ ಖಾತೆಯಿದೆ' ಎಂದು ಉತ್ತರಿಸಿದ್ದಾರೆ.

English summary
Congress Social media chief Divya Spandana alias Ramya in a video teaching people on how to create fake accounts in social media. And she also said, there is nothing wrong in having fake accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X