ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್‌ ವಿಡಿಯೋ: ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಗೆ ಪುಟ್ಟ ಬಾಲಕನ ಸೆಲ್ಯೂಟ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 25: ಬೆಂಗಳೂರು ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಪುಟ್ಟ ಬಾಲಕನೊಬ್ಬ ಭದ್ರತಾ ಸಿಬ್ಬಂದಿಗೆ ಸೆಲ್ಯೂಟ್‌ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ಬಾಲಕನನ್ನು ಶ್ಲಾಘಿಸಿದ್ದಾರೆ.

ಅಭಿಷೇಕ್‌ ಕುಮಾರ್‌ ಝಾ ಎಂಬವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಿಐಎಸ್‌ಎಫ್‌ ವಾಹನವನ್ನು ನೋಡಿ ಅದರ ಮುಂದೆ ನಿಂತು ಒಬ್ಬ ಅಧಿಕಾರಿಗೆ ಸೆಲ್ಯೂಟ್ ಮಾಡಿದ್ದಾನೆ.

ಬೆಂಗಳೂರಿನಲ್ಲಿ ಶಾಲಾ ಮಕ್ಕಳನ್ನು ಕಟ್ಟಿ ಹಾಕಿ ಬೀಡಿ ಸೇದುವಂತೆ ಮಾಡಿ ಪುಂಡರ ಕ್ರೌರ್ಯಬೆಂಗಳೂರಿನಲ್ಲಿ ಶಾಲಾ ಮಕ್ಕಳನ್ನು ಕಟ್ಟಿ ಹಾಕಿ ಬೀಡಿ ಸೇದುವಂತೆ ಮಾಡಿ ಪುಂಡರ ಕ್ರೌರ್ಯ

ಬಾಲಕನು ಸಿಐಎಸ್‌ಎಫ್‌ ವಾಹನವನ್ನು ನೋಡುತ್ತಿದ್ದಂತೆ ಅದರತ್ತ ಹೋಗಿದ್ದಾನೆ. ಬಳಿಕ ಸಿಐಎಸ್‌ಎಫ್‌ ಅಧಿಕಾರಿಯತ್ತ ನೋಡಿ ಸೆಲ್ಯೂಟ್‌ ಮಾಡಿದ್ದಾನೆ. ಈ ಸಂದರ್ಭದಲ್ಲಿ ವಾಹನದ ಮೇಲೆ ಕುಳಿತಿದ್ದ ಸಿಐಎಸ್‌ಎಫ್‌ ಅಧಿಕಾರಿ ಬಾಲಕನಿಗೆ ಸೆಲ್ಯೂಟ್‌ ಮಾಡಿದ್ದಾರೆ. ಈ ಸುಂದರವಾದ ದೃಶ್ಯ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಹಲವಾರು ಮಂದಿ ಬಾಲಕನನ್ನು ಮೆಚ್ಚಿದ್ದಾರೆ, ಇನ್ನೂ ಕೆಲವರು ಈ ಬಾಲಕನ ಪೋಷಕರನ್ನು ಹೊಗಳಿದ್ದಾರೆ.

 Viral video: Little boy salutes security personnel at Bengaluru airport

ಅಭಿಷೇಕ್‌ ಕುಮಾರ್‌ ಝಾ ಎಂಬವರು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ ಈ ವಿಡಿಯೋವನ್ನು 75 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ಸಕಾರಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ. ಈ ಪುಟ್ಟ ಬಾಲಕನ ವಿಡಿಯೋ ಹಲವಾರು ಮಂದಿಯನ್ನು ಭಾವುಕರನ್ನಾಗಿಸಿದೆ. ಇನ್ನು ಕೆಲವರು ಭದ್ರತಾ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

"ಈ ಸಣ್ಣ ಬಾಲಕನಿಗೆ, ಆತನ ಈ ಉಚ್ಛ ಸಂಸ್ಕಾರಕ್ಕೆ ನಮ್ಮ ಹೃದಯ ತುಂಬಿದ ಸೆಲ್ಯೂಟ್‌. ಈ ಭಾವನೆಯು ನಮ್ಮ ದೇಶದ ಎಲ್ಲಾ ಜನರಿಗೆ ಇರಬೇಕು," ಎಂದು ಟ್ವಿಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ನಾವು ಇದನ್ನು ಪದೇ ಪದೇ ನೋಡುತ್ತಿದ್ದೇವೆ. ಪ್ರತಿ ಬಾರಿ ನೋಡಿದಾಗಲೂ ಸಂತೋಷದ ಕಣ್ಣೀರು ಸುರಿಯುತ್ತಿದೆ. ಈ ಬಾಲಕ ನಮ್ಮ ದೇಶದ ಹೆಮ್ಮೆಯ ಪ್ರತೀಕ ಎಂದು ಹೊಗಳಿದ್ದಾರೆ. "ನಾವು ಹಲವಾರು ಬಾರಿ ನಮ್ಮ ಸುತ್ತಮುತ್ತಲೂ ಇರುವ, ನಮಗೆ ಭದ್ರತೆ ಒದಗಿಸುವ, ನಮ್ಮನ್ನು ಸುರಕ್ಷಿತವಾಗಿರಿಸುವ ಜನರನ್ನು ಮರೆತು ಬಿಡುತ್ತೇವೆ. ಈ ಪುಟ್ಟ ಹೃದಯವು ನಮಗೆ ಈಗ ಈ ನಡೆಯ ಮೂಲಕ ನಾವು ನಮ್ಮ ಯೋಧರಿಗೆ ಸಲ್ಲಿಸಬೇಕಾದ ಗೌರವವನ್ನು ತಿಳಿಸಿದೆ. ನಾವು ನಮ್ಮಿಂದ ಅಷ್ಟು ಮಾಡಲು ಮಾತ್ರ ಸಾಧ್ಯ," ಎಂದು ವಿನೋದ್ ಬಾಲಕೃಷ್ಣನ್‌ ಎಂಬುವರು ಹೇಳಿದ್ದಾರೆ.

Fact Check: ಮಂಗಳೂರು ಕಡಲತೀರದಲ್ಲಿ ಮತ್ಸ್ಯಕನ್ಯೆ?Fact Check: ಮಂಗಳೂರು ಕಡಲತೀರದಲ್ಲಿ ಮತ್ಸ್ಯಕನ್ಯೆ?

"ನಾನು ಈ ವಿಡಿಯೋವನ್ನು ಹಲವಾರು ಬಾರಿ ನೋಡಿದೆ. ಪ್ರತಿ ಬಾರಿಯೂ ನನ್ನ ಕಣ್ಣಿನಲ್ಲಿ ನೀರು ಸುರಿದಿದೆ. ಈ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳು. ಜೈ ಹಿಂದ್‌," ಎಂದು ಅಜಯ್‌ ರಾಣಾ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "ನಾನು ನನ್ನ ಭಾರತೀಯ ಸೇನೆಗೆ ವಂದನೆ ಸಲ್ಲಿಸುತ್ತೇನೆ," ಎಂದು ಖಾಲಿದ್‌ ಪಠಾಣ್‌ ಟ್ವಿಟ್ಟಿಸಿದ್ದಾರೆ. "ಸೂಪರ್‌ ಸೆಲ್ಯೂಟ್‌! ಈ ವಿಡಿಯೋ ನೋಡಿ ಸಂತೋಷವಾಗಿದೆ. ಈ ವಿಡಿಯೋ ನೋಡಿದಾಗ ಈ ಬಾಲಕನಿಗೆ ಆತನ ಪೋಷಕರು ಏನನ್ನು ಕಲಿಸಿದ್ದಾರೆ ಎಂಬುವುದು ಸ್ಪಷ್ಟವಾಗಿ ಕಂಡು ಬಂದಿದೆ. ಗ್ರೇಟ್‌. ಈ ಸಣ್ಣ ವಯಸ್ಸಿನಲ್ಲಿಯೇ ಈ ಬಾಲಕನಿಗೆ ದೇಶದ ಬಗ್ಗೆ ಒಂದು ಭಾವನೆ ಇದೆ. ಆದರೆ ನಮ್ಮ ಕೆಲವು ಯುವಕರು ಎಲ್ಲಾ ವಿಚಾರವನ್ನು ಬಾಲಿಶವಾಗಿ ಕಾಣುತ್ತಾರೆ. ಇದನ್ನು ನೋಡಿ ನನಗೆ ಉತ್ತಮ ಭಾವನೆ ಮೂಡಿತು," ಎಂದಿದ್ದಾರೆ.

"ಈ ವಿಡಿಯೋವನ್ನು ನೋಡಿದಾಗ ಮೈ ನವಿರಾಗುತ್ತದೆ. ಈ ಬಾಲಕನೇ ಮುಂದೇ ಈ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಾನೆ," ಎಂದು ಸಮೀರ್‌ ಎಂಬವರು ಹೇಳಿದ್ದಾರೆ. "ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಸಂಸ್ಕೃತಿಯನ್ನು ಕಲಿಸಬೇಕು. ನಾವು ಯಾವುದೇ ವಿಚಾರದಲ್ಲಿ ದೇಶಕ್ಕೆ ಮೊದಲ ಆದ್ಯತೆ ನೀಡಬೇಕು," ಎಂದು ಉಲ್ಲೇಖ ಮಾಡಿದ್ದಾರೆ. ಇನ್ನು ಹಲವಾರು ಮಂದಿ ಈ ಬಾಲಕನ ಪೋಷಕರನ್ನು ಹಾಡಿ ಹೊಗಳಿದ್ದಾರೆ.

Recommended Video

ಪಾಕ್ ಸೇನೆ ಮತ್ತು ಇಮ್ರಾನ್ ಖಾನ್ ನಡುವೆ ಜಟಾಪಟಿ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Viral video: Little boy salutes security personnel at Bengaluru airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X