ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ: ಮೆಟ್ರೋ ಹಳಿ ಮೇಲೆ ಹಾರಿಯೂ ಬದುಕಿದ ಯುವಕ!

|
Google Oneindia Kannada News

ಬೆಂಗಳೂರು, ಜನವರಿ 12: ಬೆಂಗಳೂರಿನ ಬಸವನಗುಡಿ ನ್ಯಾಶ್ನಲ್ ಕಾಲೇಜ್ ಮೆಟ್ರೋ ಸ್ಟೇಷನ್ನಿನ ಹಳಿ ಮೇಲೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿ, ಪವಾಡ ಸದೃಶವಾಗಿ ಪಾರಾದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮೊಬೈಲ್ ಬಳಕೆ ಕಡಿಮೆ ಮಾಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೇ ಕೋಪಕೊಂಡ ಬಸವನಗುಡಿ ನಿವಾಸಿ, ವೇಣುಗೋಪಾಲ್ ಎಂಬ ಯುವಕ ಮೆಟ್ರೋ ಟ್ರೈನ್ ಸ್ಟೇಷನ್ನಿಗೆ ಸಮೀಪಿಸುತ್ತಿದ್ದ ವೇಳೆಯಲ್ಲಿ ಹಳಿಗೆ ಹಾರಿದ್ದಾನೆ.

ಮೆಟ್ರೋ ರೈಲಿನಡಿ ಜಿಗಿದರೂ ಯುವಕ ಪಾರಾಗಿದ್ದು ಹೇಗೆ?ಮೆಟ್ರೋ ರೈಲಿನಡಿ ಜಿಗಿದರೂ ಯುವಕ ಪಾರಾಗಿದ್ದು ಹೇಗೆ?

ಅದೃಷ್ಟವಶಾತ್ ಆತ ಹಳಿಗೆ ಹಾರುತ್ತಿದ್ದಂತೆಯೇ ಹೈವೋಲ್ಟೇಜ್ ಲೈನ್ ಆಟೋಮೆಟಿಕ್(750 ವೋಲ್ಟ್) ಆಗಿ ಸ್ಥಗಿತವಾಗಿದ್ದರಿಂದ ಆತ ಬದುಕುಳಿದಿದ್ದಾನೆ. ಆದರೆ ರೈಲಿನ ಹಳಿಯ ಪಕ್ಕ ಬಿದ್ದಿದ್ದರಿಂದ ಆತನ ತಲೆಗೆ ಬಲವಾದ ಏಟು ಬಿದ್ದಿದ್ದು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Viral Video: Bengaluru man jumps on track of metro train track survived

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ಶುಕ್ರವಾರ ನಡೆದ ಈ ಘಟನೆಯ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿ ಯುವಕನ ಆರೋಗ್ಯ ವಿಚಾರಿಸಿ, ಬುದ್ಧಿವಾದ ಹೇಳಿದ್ದಾರೆ.

ಆತ ಹಳಿಯ ಮೇಲೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
Video of a man jumps on Metro track in National college metro station in Basavangudi Bengaluru becomes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X