ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ: ಕರುಳಿನ ಕೂಗು ಬದುಕಿಸಿತು ಕೋತಿಯ ಜೀವ!

|
Google Oneindia Kannada News

ಬೆಂಗಳೂರು, ಮೇ.18: ತಾಯಿ ಪ್ರೀತಿಯ ಎದುರು ಆ ದೇವರೇ ಸಲಾಂ ಹೊಡೆಯುತ್ತಾನೆ. ಹೆತ್ತವಳನ್ನೇ ದೇವರಿಗೆ ಹೋಲಿಸುವ ಜಗವಿದು. ಮಮತೆ, ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ. ಮನುಷ್ಯರಷ್ಟೇ ಅಲ್ಲ ಮೂಕಪ್ರಾಣಿಗಳಲ್ಲೂ ಆ ತಾಯಿ ಹೃದಯ ಇದ್ದೇ ಇರುತ್ತದೆ.
ಕೋತಿಯೊಂದು ತನ್ನ ಕಂದನನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದೆ. ವಿದ್ಯುತ್ ತಂತಿಯ ಮಧ್ಯದಲ್ಲಿ ಪ್ರಾಣ ಭೀತಿಯಲ್ಲಿ ಸಿಲುಕಿದ್ದ ಪುಟ್ಟ ಕೋತಿಯನ್ನು ತಾಯಿ ಕೋತಿ ರಕ್ಷಿಸಿರುವ ವಿಡಿಯೋ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.

ಮನಮಿಡಿವ ಕಥೆ: ಜೀವ ಉಳಿಸಿದ ಅರಣ್ಯ ರಕ್ಷಕನ ಹೆಗಲು ಏರಿದ ಮರಿಯಾನೆ
ಕಟ್ಟಡದ ಮೇಲಿಂದ ಜಿಗಿಯುವ ಸಂದರ್ಭದಲ್ಲಿ ವಿದ್ಯುತ್ ತಂತಿಯ ಮಧ್ಯದಲ್ಲಿ ಮರಿಕೋತಿ ಸಿಲುಕಿತು. ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದ ಸಂದರ್ಭದಲ್ಲಿಯೇ ಅದೆಲ್ಲಿತ್ತೋ ತಾಯಿ ಕೋತಿ ತತ್ ಕ್ಷಣ ಪ್ರತ್ಯಕ್ಷವಾಯಿತು. ನಂತರ ನಡೆದಿದ್ದೇ 'ತಾಯಿ ನಡೆಸಿದ ರಕ್ಷಣಾ ಕಾರ್ಯಾಚರಣೆ'.

Viral Story: A Rescue Operation By Mother. How Can It Fail

ತಾಯಿ ನಡೆಸಿದ ರಕ್ಷಣಾ ಕಾರ್ಯಾಚರಣೆ ವಿಫಲವಾಗುವುದೇ?:
ಕೋತಿಯೊಂದು ತನ್ನ ಮರಿಯನ್ನು ರಕ್ಷಿಸಿದ ವಿಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಾಸ್ವಾನ್ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ತಾಯಿ ನಡೆಸಿದ ರಕ್ಷಣಾ ಕಾರ್ಯಾಚರಣೆ, ವಿಫಲವಾಗಲು ಸಾಧ್ಯವೆ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಕೋತಿ ನಡೆಸಿದ ರಕ್ಷಣಾ ಕಾರ್ಯಾಚರಣೆಯು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

English summary
Viral Story: A Rescue Operation By Mother. How Can It Fail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X