• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು: ಬದಲಾದ ವಾತಾವರಣ, ವೈರಲ್‌ ಜ್ವರ ಉಲ್ಬಣ

By Nayana
|
   ಬೆಂಗಳೂರಿನಲ್ಲಿ ಬದಲಾದ ವಾತಾವರಣ, ವೈರಲ್‌ ಜ್ವರ ಉಲ್ಬಣ | Oneindia Kannada

   ಬೆಂಗಳೂರು, ಜು.23: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹವಾಮಾನ ಬದಲಾವಣೆಯಾಗುತ್ತಿದೆ. ಇದರಿಂದ ಜನರು ಹಲವಾರು ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

   ನಗರದಲ್ಲಿ ಈಗಾಗಲೇ ಚಿಕನ್‌ಗುನ್ಯಾ, ಡೆಂಗ್ಯೂ ಹಾವಳಿ ವಿಪರೀತವಿದೆ ಆದರೆ ಇದೀಗ ವೈರಲ್‌ ಫೀವರ್‌ ಹೆಚ್ಚಿನದಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ಒಂದು ವಾರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೆ.ಸಿ. ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ ಹೀಗೆ ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ವಿಪರೀತವಾಗಿದೆ.

   ಹೆಗ್ಗಡಹಳ್ಳಿ ಗ್ರಾಮದ 50ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡ ವೈರಲ್ ಜ್ವರ!

   ವಿಶೇಷವಾಗಿ ಸಾಂಕ್ರಾಮಿಕ ವೈರಾಣುಗಳಿಂದಾಗಿ ಮಕ್ಕಳಲ್ಲಿ ವಾಂತಿ-ಭೇದಿ ಸಮಸ್ಯೆ ಹೆಚ್ಚುತ್ತಿದೆ. ಡಯೇರಿಯಾ ಸಮಸ್ಯೆಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ವಾತಾವರಣದಲ್ಲಾಗುವ ನಿರಂತರ ಬದಲಾವಣೆಯಿಂದ ವೈರಾಣುಗಳ ಹಾವಳಿ ಹೆಚ್ಚುತ್ತಿದೆ.

   ವಯಸ್ಕರು ಮತ್ತು ಮಕ್ಕಳಲ್ಲಿ ಶುಚಿತ್ವದ ಕೊರತೆಯಿಂದಾಗಿ ಕೂಡ ಈ ರೋಗ ಹರಡಬಹುದು, ಶುಚಿತ್ವವಲ್ಲದ ಆಹಾರ, ನೀರು ಸೇವನೆ, ಸೋಮಕು ತಗುಲಿದ ವ್ಯಕ್ತಿಯಿಂದ ಉಸಿರಾದ ವೇಳೆ ಹೊಟ್ಟೆಗೆ ಸೇರುವ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.

   ವಾಂತಿ-ಭೇದಿ ಹೆಚ್ಚಾಗಿ ದೇಹದಲ್ಲಿನ ನೀರಿನಂಶ ಕಳೆದುಕೊಳ್ಳುತ್ತಾರೆ, ಹೀಗಾಗಿ ಹೆಚ್ಚಿನ ದ್ರವ ಪದಾರ್ಥವನ್ನು ಸೇವಿಸಲು ನೀಡಬೇಕೆಂದು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

    ಸ್ವಚ್ಛತೆ ಕಾಯ್ದುಕೊಳ್ಳಿ, ಮಾಸ್ಕ್‌ ಬಳಸಿ

   ಸ್ವಚ್ಛತೆ ಕಾಯ್ದುಕೊಳ್ಳಿ, ಮಾಸ್ಕ್‌ ಬಳಸಿ

   ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಒಬ್ಬರಿಂದ ಒಬ್ಬರಿಗೆ ವೈರಾಣು ಹರಡದಂತೆ ಮುಖಕ್ಕೆ ಕರ್ಚೀಫ್‌, ಮಾಸ್ಕ್‌ ಬಳಸಬೇಕು. ಆಹಾರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಬಿಸಿ ಬಿಸಿಯಾದ ತಾಜಜಾ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಬೇಯಿಸದ ಚಟ್ನಿ, ಸಲಾಡ್‌ನಂತಹ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಸಾದ್ಯವಾದಷ್ಟು ಹೋಟೆಲ್‌ ತಿಂಡಿಗಳನ್ನು ಸೇವಿಸಬಾರದು, ಫ್ರೀಜ್‌ ಮಾಡಿದ ಆಹಾರ ಪದಾರ್ಥಗಳಿಂದ ಕೂಡ ಸಾಧ್ಯವಾದಷ್ಟು ದೂರವಿರಬೇಕು.

    ಸೊಳ್ಳೆಯಿಂದಲೂ ವೈರಲ್‌ ಫೀವರ್‌ ಬರಬಹುದು ಎಚ್ಚರ

   ಸೊಳ್ಳೆಯಿಂದಲೂ ವೈರಲ್‌ ಫೀವರ್‌ ಬರಬಹುದು ಎಚ್ಚರ

   ಸೋಂಕುಕಾರಕ ರೋಗಾಣು, ಬ್ಯಾಕ್ಟೀರಿಯಾಗಳು, ಗಾಳಿ ಇತ್ಯಾದಿಗಳಿಂದ ಅಲ್ಲದೆ ಸೊಳ್ಳೆ ಕಡಿತದಿಂದಲೂ ಹರಡಬಹುದು. ಹಾಗಾಗಿ ಜನರು ಸೊಳ್ಳೆಗಳು ಆದಷ್ಟು ಮನೆಯೊಳಗೆ ಬರದಂತೆ ನೋಡಿಕೊಳ್ಳಬೇಕು. ಹಳ್ಳ-ಕೊಳ್ಳ ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡ್ರಮ್‌ಗಳಲ್ಲಿ ನೀರು ಶೇಖರಿಸಿಟ್ಟು ಮೇಲ್ಭಾಗವನ್ನು ಸರಿಯಾಗಿ ಮುಚ್ಚಬೇಕು. ಹಾಗೆಯೇ ಆಹಾರ ಸೇವನೆಯಲ್ಲೂ ಎಚ್ಚರ ವಹಿಸಬೇಕು.

    ವೈರಲ್‌ ಫೀವರ್‌ ಲಕ್ಷಣಗಳು

   ವೈರಲ್‌ ಫೀವರ್‌ ಲಕ್ಷಣಗಳು

   ವೈರಲ್‌ ಫೀವರ್ ಗಳಲ್ಲಿ ಹಲವು ವಿಧಗಳಿವೆ ಹೀಗೆ ಅದರ ಲಕ್ಷಣಗಳಿರುತ್ತದೆ ಎನ್ನಲು ಸಾಧ್ಯವಿಲ್ಲ, ಆದರೆ ಇದರಲ್ಲಿ ಕೆಲವೊಂದು ಲಕ್ಷಣಗಳು ಆ ರೋಗವಿದೆ ಎನ್ನುವುದನ್ನು ಹೇಳುತ್ತದೆ. ವಿವಿಧ ಮಾಹಿತಿಗಳ ಪ್ರಕಾರ ಈ ವೈರಾಣುಗಳು ದೇಹವನ್ನು ಸೇರಿದಾಗ, ತಲೆನೋವು, ನೆಗಡಿ, ಕೆಮ್ಮು, ಮೈ-ಕೈನೋವಿನೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ-ಭೇದಿಯೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಜ್ವರ ತೀವ್ರವಾಗಿ ಕಾಡುತ್ತಿರುವ ಅನುಭವವಾಗುವುದಿಲ್ಲ. ವೈರಲ್‌ ಫೀವರ್‌ ವಿಪರೀತ ಮೈ-ಕೈನೋವು, ಕಣ್ಣಿನ ಹಿಂಭಾಗದಲ್ಲಿ ನೋವು ತರುತ್ತದೆ.

    ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಿ

   ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಿ

   ಮಕ್ಕಳಲ್ಲಿ ಡಯೇರಿಯಾ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು, ಇದನ್ನು ತಡೆಯಲು ಶುಚಿತ್ವದಿಂದ ಕೂಡಿದ ಆಹಾರ ಸೇವಿಸಬೇಕು. ಆಹಾರ ಹಾಗೂ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕಾಗಿದೆ. ವೈರಾಣುಗಳು ಹೊಟ್ಟೆ ಸೇರುವುದನ್ನು ತಡೆಯಲು ಪ್ರತಿ ಬಾರಿ ಊಟಕ್ಕೆ ಮೊದಲು ಶುಚಿಯಾಗಿ ಕೈ ತೊಳೆದುಕೊಳ್ಳಬೇಕು. ಸಾಮಾನ್ಯದಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಜ್ವರ ಬಂದರೆ ಮನೆ ಮಂದಿಗೆಲ್ಲಾ ಕಾಡುತ್ತದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   You need to take precautions in the changing season. Because many types of diseases are born at this time. The most dangerous disease in those cases is viral fever.Capital city Bengaluru is witnessing many types of Viral fever.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more