ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಶ್ವರಪ್ಪ ಪಿಎ ಅಪಹರಣ ಯತ್ನ ಕೇಸ್ : ಆರೋಪಿಗೆ ಗುಂಡೇಟು, ಬಂಧನ

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಸುಪಾರಿ ಕಿಲ್ಲರ್, ಕೆ.ಎಸ್.ಈಶ್ವರಪ್ಪ ಪಿಎ ಅಪಹರಣ ಯತ್ನ ಪ್ರಕರಣದ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಬಾಣಸವಾಡಿ ಪೊಲೀಸರು ಆರೋಪಿ ದಿನೇಶ್‌ನನ್ನು ಬಂಧಿಸಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣೆಯ ಎಸಿಪಿ ಮಹದೇವಪ್ಪ ಆರೋಪಿ ದಿನೇಶ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹೆಣ್ಣೂರಿನ ರೈಲ್ವೆ ಬ್ರಿಡ್ಜ್‌ ಬಳಿ ಗುರುವಾರ ತಡರಾತ್ರಿ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ.

ವಿನಯ್ ಅಪಹರಣ ಪ್ರಕರಣ : ಬಿಎಸ್‌ವೈಗೆ ಶೋಭಾ ಪತ್ರವಿನಯ್ ಅಪಹರಣ ಪ್ರಕರಣ : ಬಿಎಸ್‌ವೈಗೆ ಶೋಭಾ ಪತ್ರ

ದಕ್ಷಿಣ ಭಾರತದ ಕುಖ್ಯಾತ ಸುಪಾರಿ ಕಿಲ್ಲರ್ ದಿನೇಶ್ ವಿರುದ್ಧ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿಯೂ ಹಲವು ಕೊಲೆ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ನಡೆದ ಪಳನಿ ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ.

ಬಿಎಸ್‌ವೈ ಪಿಎ ವಿರುದ್ಧದ ಚಾರ್ಜ್ ಶೀಟ್‌ನಲ್ಲಿ ಏನಿದೆ?ಬಿಎಸ್‌ವೈ ಪಿಎ ವಿರುದ್ಧದ ಚಾರ್ಜ್ ಶೀಟ್‌ನಲ್ಲಿ ಏನಿದೆ?

Vinay Bidre kidnap attempt case accused Dinesh arrested

ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ವಿನಯ್ ಅಪಹರಣ ಪ್ರಕರಣದಲ್ಲಿಯೂ ದಿನೇಶ್ ಆರೋಪಿಯಾಗಿದ್ದ. ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರು ದಿನೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.

ವಿನಯ್ ಅಪಹರಣ ಯತ್ನ: ಮನೆಯಲ್ಲೇ ಯಡಿಯೂರಪ್ಪ ವಿಚಾರಣೆವಿನಯ್ ಅಪಹರಣ ಯತ್ನ: ಮನೆಯಲ್ಲೇ ಯಡಿಯೂರಪ್ಪ ವಿಚಾರಣೆ

ಹೆಣ್ಣೂರಿನ ರೈಲ್ವೆ ಸೇತುವೆ ಬಳಿ ದಿನೇಶ್ ಇರುವ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ತೆರಳಿದ್ದರು. ಶರಣಾಗುವಂತೆ ಸೂಚನೆ ನೀಡಿದಾಗ ಮುಖ್ಯ ಪೇದೆ ಧರ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ದಿನೇಶ್ ಮುಂದಾದ.

ಆಗ ಆತ್ಮ ರಕ್ಷಣೆಯಾಗಿ ದಿನೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ವಿನಯ್ ಅಪಹರಣ ಪ್ರಕರಣದಲ್ಲಿಯೂ ದಿನೇಶ್ ವಿಚಾರಣೆಯನ್ನು ಪೊಲೀಸರು ನಡೆಸುವ ಸಾಧ್ಯತೆ ಇದೆ.

English summary
Bengaluru Banasavadi police arrested supari killer and accused of Vinay Bidre kidnap attempt case Dinesh. Vinay Bidre, the personal assistant of Opposition Leader in the Legislative Council K.S. Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X