ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಾಹಿತ್ಯ ಉತ್ಸವದಿಂದ ಹೊರನಡೆದ ವಿಕ್ರಂ ಸಂಪತ್

|
Google Oneindia Kannada News

ಬೆಂಗಳೂರು, ನವೆಂಬರ್ 30 : ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ಚರ್ಚೆಯ ಬಿಸಿ ಬೆಂಗಳೂರು ಸಾಹಿತ್ಯ ಉತ್ಸವಕ್ಕೂ ತಟ್ಟಿದೆ. ಕೆಲವು ಸಾಹಿತಿಗಳ ವಿರೋಧದ ಕಾರಣದಿಂದಾಗಿ ಉತ್ಸವದ ಉಸ್ತುವಾರಿಯಿಂದ ವಿಕ್ರಂ ಸಂಪತ್ ಹಿಂದೆ ಸರಿದಿದ್ದಾರೆ.

ವಿಕ್ರಂ ಸಂಪತ್ 2012ರಿಂದ ಗೆಳೆಯರ ಜತೆಗೆ ಸೇರಿ ಬೆಂಗಳೂರು ಸಾಹಿತ್ಯ ಉತ್ಸವವನ್ನು ಆಯೋಜಿಸುತ್ತಿದ್ದರು. ಸಮರ್ಥವಾಗಿ ಉತ್ಸವವನ್ನು ನಡೆಸಿದ ಖ್ಯಾತಿಯೂ ಅವರಿಗಿದೆ. 2015ನೇ ವರ್ಷದ ಸಾಹಿತ್ಯ ಉತ್ಸವ ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ. [ವಿಕ್ರಂ ಸಂಪತ್ ವೆಬ್ ಸೈಟ್]

vikram sampath

ಸಾಹಿತ್ಯ ಉತ್ಸವಕ್ಕೆ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ವಿಕ್ರಂ ಸಂಪತ್ ಉತ್ಸವದ ಉಸ್ತುವಾರಿಯಿಂದ ಹೊರಬರುವುದಾಗಿ ಹೇಳಿದ್ದಾರೆ. 'ಉತ್ಸವದ ಎಲ್ಲ ಹೊಣೆಯಿಂದ ಹೊರ ನಡೆಯುವ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ. [ಪ್ರಶಸ್ತಿ ವಾಪಸ್ ನೀಡಲಿದ್ದಾರೆ ದೇವನೂರು ಮಹಾದೇವ]

ಹೊರಹೋಗುತ್ತಿರುವುದೇಕೆ? : ಅಸಹಿಷ್ಣುತೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರಶಸ್ತಿ ವಾಪಸ್ ಅಭಿಯಾನದ ಕುರಿತು ವೈಯಕ್ತಿಕ ಅಭಿಪ್ರಾಯಗಳನ್ನು ವಿಕ್ರಂ ಸಂಪತ್ ವ್ಯಕ್ತಪಡಿಸಿದ್ದರು. ಟಿಪ್ಪು ಸುಲ್ತಾನ್ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯಬೇಕೆಂದು ಅವರು ಲೇಖನ ಬರೆದಿದ್ದರು. [ಪ್ರಶಸ್ತಿ ವಾಪಸ್ ಕೊಟ್ಟ ಸಾಹಿತಿಗಳ ಪಟ್ಟಿ]

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಬೇಕಾಗಿದ್ದ ಕೆಲವು ಸಾಹಿತಿಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬರಹಗಾರರಾದ ಆರಿಫ್ ರಾಜಾ ಮತ್ತು ಟಿ.ಕೆ.ದಯಾನಂದ್ ಮುಂತಾದವರು ಪ್ರಶಸ್ತಿ ವಾಪಸ್ ಬಗ್ಗೆ ಸಂಪತ್ ಮಂಡಿಸಿದ್ದ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಈ ಬಗ್ಗೆ ಸಂಪತ್ ಅವರಿಗೆ ಪತ್ರ ಬರೆದಿದ್ದರು. [ಕಿರಿಯ ಗೆಳೆಯ ವಿಕ್ರಮ್ ಬರೆದ ಬೃಹತ್ ಗ್ರಂಥ]

ಕೇರಳದ ಸಚ್ಚಿದಾನಂದನ್, ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಮುಂತಾದವರು ವಿಕ್ರಂ ಸಂಪತ್ ಅವರ ಅಭಿಪ್ರಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಮತ್ತು ಸಾಹಿತ್ಯ ಉತ್ಸವವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದರು.

ಹೊರನಡೆಯಲಿರುವ ಸಂಪತ್ : ಈ ವಿವಾದಗಳಿಂದಾಗಿ ವಿಕ್ರಂ ಸಂಪತ್ ಬೆಂಗಳೂರು ಸಾಹಿತ್ಯ ಉತ್ಸವದಿಂದ ಹೊರನಡೆಯಲು ಮುಂದಾಗಿದ್ದಾರೆ. 'ಅವರ ವಿರೋಧವಿರುವುದು ನನ್ನ ವಿಚಾರಧಾರೆಯ ಬಗ್ಗೆ. ಹಾಗಾಗಿ ನಾನು ಹೊರನಡೆದ ನಂತರದಲ್ಲಿ ಅವರು ಭಾಗವಹಿಸಲು ದಾರಿ ಸುಗಮವಾಗಿದೆ ಎಂದು ಭಾವಿಸುತ್ತೇನೆ' ಎಂದು ಸಂಪತ್ ಹೇಳಿದ್ದಾರೆ.

'ನನ್ನ ವೈಯಕ್ತಿಕ ಅಭಿಪ್ರಾಯದಿಂದ ಬೃಹತ್ ಕಾರ್ಯಕ್ರಮಕ್ಕೆ ತೊಂದರೆಯಾಗುವುದು ಬೇಡ. ನನ್ನ ಜತೆಗೆ ಕಾರ್ಯನಿರ್ವಹಿಸುತ್ತಿರುವ ಪ್ರಬಲ ತಂಡ ಈ ವರ್ಷದ ಉತ್ಸವವನ್ನು ಮುನ್ನಡೆಸಲಿದೆ. ಉತ್ಸವದ ಎಲ್ಲ ಹೊಣೆಯಿಂದ ಹೊರ ನಡೆಯುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ' ಎಂದು ಸಂಪತ್ ತಿಳಿಸಿದ್ದಾರೆ.

English summary
Vikram Sampath stepped down as an organizer of the 4th edition of Bangalore Literature Festival (BLF). Some participants objected to his personal views against writers returning their award. BLF festival is scheduled to start on December 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X