• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪ್ಪನ ನೆನದು ಭಾವುಕರಾದ ದಿ. ಅನಂತ್ ಕುಮಾರ್ ಪುತ್ರಿ!

|

ಬೆಂಗಳೂರು, ಜೂ. 21: ವಿಶ್ವ ಅಪ್ಪಂದಿರ ದಿನದಂದು ದಿ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪುತ್ರಿ ವಿಜೇತಾ ಅನಂತ್ ಕುಮಾರ್ ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ. ತಮ್ಮ ತಂದೆ ದಿ. ಅನಂತ್ ಕುಮಾರ್ ಅವರ ಜೊತೆಗಿನ ನೆನಪುಗಳನ್ನು ಪುತ್ರಿ ವಿಜೇತಾ ಅನಂತ್ ಕುಮಾರ್ ನೆನಪಿಸಿಕೊಂಡಿದ್ದಾರೆ. ಜೊತೆಗೆ ಅವರೊಂದಿಗಿನ ಹಳೆಯ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪ್ರತಿವರ್ಷ ಜೂನ್‌ ತಿಂಗಳ ಮೂರನೇ ರವಿವಾರ 'ವಿಶ್ವ ಅಪ್ಪಂದಿರ ದಿನ' ಎಂದು ಆಚರಿಸಲಾಗುತ್ತದೆ.

   ಗಂಗೂಲಿ ಕುಟುಂಬದ ಮೂವರಿಗೆ ಕೊರೊನ ಸೋಂಕು | Oneindia Kannada

   ಅಪ್ಪ, ಎಲ್ಲರೂ ಹೇಳುತ್ತಾರೆ ನಿನ್ನಂತೆಯೆ ನಾನು ಇದ್ದೇನೆಂದು. ನಿನ್ನ ಹಾಗೆಯೆ ಎಲ್ಲ ಸಂಗತಿಗಳನ್ನು, ಎಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತೇನೆ ಎಂದು ಹೇಳುತ್ತಾರೆ. ನೀವು ಕೊಟ್ಟಿರುವ ಎಲ್ಲ ನೆನಪುಗಳು ನನ್ನಲ್ಲಿ ಹಚ್ಚ ಹಸುರಾಗಿವೆ.

   ನಾನು ನಿಮ್ಮನ್ನು ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತೇನೆ. ನಾನು ನಿಮ್ಮಂತೆಯೆ ನಿಸ್ವಾರ್ಥ, ಲೌಕಿಕ, ದೇಶಭಕ್ತಿ ಮತ್ತು ಪ್ರೀತಿಯವಳಾಗಿರಲು ಪ್ರಯತ್ನಿಸುತ್ತೇನೆ ಎಂಬುದನ್ನು ನೀವು ಕೇಳಿಸಿಕೊಂಡರೆ ನಿಮಗೆ ಸಂತೋಷವಾಗುತ್ತದೆ ಎಂದು ಟ್ಟಿಟ್ಟರ್‌ನಲ್ಲಿ ತಮ್ಮ ಭಾವನೆಗಳನ್ನು ವಿಜೇತಾ ಅನಂತ್ ಕುಮಾರ್ ಹಂಚಿಕೊಂಡಿದ್ದಾರೆ.

   ದಿ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಕಳೆದ ಒಂದೂವರೆ ವರ್ಷಗಳ ಹಿಂದೆ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ವಿಶ್ವ ಅಪ್ಪಂದಿದ ದಿನದಂದು ಅಪ್ಪನಿಲ್ಲದೆ ಒಂದೂವರೆ ವರ್ಷ ಕಳೆದಿದ್ದನ್ನು ವಿಜೇತಾ ಅನಂತಕುಮಾರ್ ನೆನಪಿಸಿಕೊಂಡಿದ್ದಾರೆ.

   English summary
   The World Dad's Day Vijeta Ananth Kumar, daughter of Late former Union minister Ananth Kumar, remembers her father.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X