ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜೀನಾಮೆ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿದ ಆನಂದ್ ಸಿಂಗ್

|
Google Oneindia Kannada News

Recommended Video

ರಾಜೀನಾಮೆ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿದ ಆನಂದ್ ಸಿಂಗ್

ಬೆಂಗಳೂರು, ಜುಲೈ 01: ವಿಜಯನಗರ ಕ್ಷೇತ್ರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ರಾಜೀನಾಮೆ ನಿರ್ಧಾರಕ್ಕೆ ಕಾರಣವನ್ನೂ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಯ ಪತ್ರಿಯನ್ನು ಅವರಿಗೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಜಿಂದಾಲ್ ವಿಚಾರದಲ್ಲಿ ಸರ್ಕಾರ ತಳೆದ ನಿರ್ಧಾರದಿಂದ ಅಸಮಾಧಾಗೊಂಡು ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ರಾಜೀನಾಮೆ ಕೊಟ್ಟಿರುವುದು ಹೌದು: ಶಾಸಕ ಆನಂದ್ ಸಿಂಗ್ ಸ್ಪಷ್ಟನೆರಾಜೀನಾಮೆ ಕೊಟ್ಟಿರುವುದು ಹೌದು: ಶಾಸಕ ಆನಂದ್ ಸಿಂಗ್ ಸ್ಪಷ್ಟನೆ

ಜಿಂದಾಲ್‌ಗೆ ರೈತರ ಭೂಮಿಯನ್ನು ಶುದ್ಧಕ್ರಯ ಮಾಡಿಕೊಡುತ್ತಿರುವ ಕ್ರಮದ ವಿರುದ್ಧವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಆನಂದ್ ಸಿಂಗ್ ಹೇಳಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ ಸೂಚಕವಾಗಿ ಈ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ವಿಜಯನಗರವನ್ನು ಜಿಲ್ಲೆಯಾಗಿ ಘೋಷಿಸಬೇಕೆಂಬ ಬೇಡಿಕೆಯನ್ನೂ ಸರ್ಕಾರದ ಮುಂದೆ ಇಟ್ಟಿದ್ದೆ ಇದಕ್ಕೂ ಸರ್ಕಾರ ಸ್ಪಂದಿಸಲಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವವನು ನಾನಲ್ಲ, ಜಿಲ್ಲೆಯ ಜನರ ಪರವಾಗಿ ಇರುತ್ತೇನೆ ಎಂದು ಹೇಳಿದ್ದೆ, ಹೇಳಿದಂತೆ ನಡೆದುಕೊಂಡಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದರು.

ರಾಜ್ಯಪಾಲರಿಗೆ ರಾಜೀನಾಮೆ ಪ್ರತಿ ನೀಡಿದ ಆನಂದ್ ಸಿಂಗ್

ರಾಜ್ಯಪಾಲರಿಗೆ ರಾಜೀನಾಮೆ ಪ್ರತಿ ನೀಡಿದ ಆನಂದ್ ಸಿಂಗ್

ರಾಜೀನಾಮೆ ಬಗ್ಗೆ ಸ್ಪಷ್ಟಪಡಿಸಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನಿಜ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ತಲುಪಿಸಿದ್ದೇನೆ, ಅದೇ ಪ್ರತಿಯನ್ನು ರಾಜ್ಯಪಾಲರಿಗೂ ನೀಡಿದ್ದೇನೆ. ರಾಜೀನಾಮೆಯನ್ನು ಹೇಗೆ ನೀಡಬೇಕು ಎಂದು ಹೇಳಿದರೆ ಮತ್ತೊಮ್ಮೆ ನೀಡಲು ತಯಾರಿದ್ದೇನೆ ಎಂದು ಹೇಳಿದರು.

ರಾಜೀನಾಮೆ ನೀಡಲು ಶಾಸಕ ಗಣೇಶ್ ಕಾರಣವಲ್ಲ

ರಾಜೀನಾಮೆ ನೀಡಲು ಶಾಸಕ ಗಣೇಶ್ ಕಾರಣವಲ್ಲ

ತಮ್ಮ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಅವರ ಮೇಲಿನ ಅಮಾನತು ತೆಗೆದ್ದುದ್ದಕ್ಕೆ ರಾಜೀನಾಮೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಕಾಂಗ್ರೆಸ್‌ಗೆ ಮತ್ತೆ ಬಂದರು, ಯಾರ ಮೇಲಿನ ಅಮಾನತು ತೆಗೆಯಲಾಯಿತು ಎಂಬುದೆಲ್ಲಾ ರಾಜೀನಾಮೆಗೆ ಕಾರಣವಲ್ಲ, ರಾಜೀನಾಮೆಗೆ ಜಿಂದಾಲ್‌ ಗೆ ಸರ್ಕಾರ ಭೂಮಿ ನೀಡುತ್ತಿರುವುದು ಮಾತ್ರವೇ ಎಂದು ಹೇಳಿದರು.

ಆನಂದ್ ಸಿಂಗ್ ರಾಜೀನಾಮೆ: ಕಾಂಗ್ರೆಸ್‌ಗೆ ಕೈ ಕೊಡಲಿದ್ದಾರೆ ಐದು ಶಾಸಕರು? ಆನಂದ್ ಸಿಂಗ್ ರಾಜೀನಾಮೆ: ಕಾಂಗ್ರೆಸ್‌ಗೆ ಕೈ ಕೊಡಲಿದ್ದಾರೆ ಐದು ಶಾಸಕರು?

ಬಿಜೆಪಿ ಸೇರುವುದನ್ನು ಅಲ್ಲಗಳೆದ ಆನಂದ್ ಸಿಂಗ್

ಬಿಜೆಪಿ ಸೇರುವುದನ್ನು ಅಲ್ಲಗಳೆದ ಆನಂದ್ ಸಿಂಗ್

ಬಿಜೆಪಿ ಸೇರುವುದನ್ನು ಅಲ್ಲಗಳೆದ ಆನಂದ್ ಸಿಂಗ್, ನಾನು ಯಾವ ಬಿಜೆಪಿ ನಾಯಕರನ್ನೂ ಸಂಪರ್ಕ ಮಾಡಿಲ್ಲ, ನಾನು ಯಾವ ಪಕ್ಷಕ್ಕೂ ಸೇರುವುದಿಲ್ಲ, ಪ್ರತಿಭಟನಾರ್ತಕವಾಗಿ ರಾಜೀನಾಮೆ ನೀಡಿದ್ದೇನೆ ಅಷ್ಟೆ. ಮುಂದೆ ಹೋರಾಟದ ಹಾದಿ ಹಿಡಿಯುತ್ತೇನೆ ಎಂದು ಹೇಳಿದರು. ಜೊತೆಗೆ ಮುಂದಿನ ರಾಜಕೀಯ ನಡೆಯ ಬಗ್ಗೆ ಚಿಂತಿಸುತ್ತೇನೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟರು.

ಯಾವ ಅತೃಪ್ತ ಗುಂಪಿನೊಂದಿಗೂ ನಾನಿಲ್ಲ: ಆನಂದ್ ಸಿಂಗ್

ಯಾವ ಅತೃಪ್ತ ಗುಂಪಿನೊಂದಿಗೂ ನಾನಿಲ್ಲ: ಆನಂದ್ ಸಿಂಗ್

ನಾನು ಯಾವ ಅತೃಪ್ತರ ಗುಂಪಿನಲ್ಲೂ ಇರಲಿಲ್ಲ, ನನಗೆ ಅಧಿಕಾರ ಸಿಗಲಿಲ್ಲವೆಂದು ಅಸಮಾಧಾನವೂ ಆಗಿರಲಿಲ್ಲ ಎಂದ ಅವರು, ನನಗೆ ಸಂತೋಶ್ ಲಾಡ್ ಅವರು ಬೆಂಬಲ ಸೂಚಿಸಿದ್ದು, ಏಕಾಂಗಿಯಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡಲಿದ್ದೇನೆ ಎಂದು ಹೇಳಿದರು.

ನನಗೆ ಯಾರೂ ರಾಜೀನಾಮೆ ಪತ್ರ ನೀಡಿಲ್ಲ: ಸ್ಪೀಕರ್ ರಮೇಶ್ ಕುಮಾರ್ನನಗೆ ಯಾರೂ ರಾಜೀನಾಮೆ ಪತ್ರ ನೀಡಿಲ್ಲ: ಸ್ಪೀಕರ್ ರಮೇಶ್ ಕುಮಾರ್

'ಪಕ್ಷದ ಮುಖಂಡರಿಗೆ ಮುಜುಗರ ಉಂಟುಮಾಡಲ್ಲ'

'ಪಕ್ಷದ ಮುಖಂಡರಿಗೆ ಮುಜುಗರ ಉಂಟುಮಾಡಲ್ಲ'

ಪಕ್ಷದ ಮುಖಂಡರಿಗೆ ಮುಜುಗರ ಉಂಟುಮಾಡುವ ಯಾವುದೇ ರೀತಿಯ ಹೇಳಿಕೆಗಳನ್ನು ನಾನು ನೀಡುವುದಿಲ್ಲ, ನನಗೆ ಪಕ್ಷದ ಯಾವೊಬ್ಬರ ಮೇಲೂ ಅಸಮಾಧಾನವೂ ಇಲ್ಲ ಎಂದ ಅವರು, ಮುಖಂಡರು ಮನವೊಲಿಸಿದರೆ ರಾಜೀನಾಮೆ ವಾಪಸ್ ಪಡೆಯುತ್ತೀರಾ? ಎಂಬ ಪ್ರಶ್ನೆಗೆ, ಈಗ ರಾಜೀನಾಮೆ ನಿರ್ಣಯ ಮಾಡಿ ಆಗಿದೆ ಎಂದಷ್ಟೆ ಉತ್ತರಿಸಿದರು.

ಅವಕಾಶ ಸಿಕ್ಕಾಗ ಸರ್ಕಾರ ರಚಿಸದಿರಲು ನಾವೇನು ಸನ್ಯಾಸಿಗಳೇ?: ಯಡಿಯೂರಪ್ಪ ಅವಕಾಶ ಸಿಕ್ಕಾಗ ಸರ್ಕಾರ ರಚಿಸದಿರಲು ನಾವೇನು ಸನ್ಯಾಸಿಗಳೇ?: ಯಡಿಯೂರಪ್ಪ

English summary
Vijayanagara congress MLA Anand Singh gives reason for his resignation decision. He says i am resigning in protest against government decision of giving land to JSW.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X