ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ವಿಜಯ ದಿವಸ ಆಚರಣೆ, ಹುತಾತ್ಮರ ಸ್ಮರಣೆ

|
Google Oneindia Kannada News

ಬೆಂಗಳೂರು, ಡಿ. 16: ನಗರದ ಸೈನಿಕ ಸ್ಮಾರಕದ ಎದುರು ಮಂಗಳವಾರ 1971 ಭಾರತ-ಪಾಕಿಸ್ತಾನ ಯುದ್ಧದ 'ವಿಜಯ ದಿನ' ಆಚರಿಸಲಾಯಿತು. ಎಂಎಲ್ ಸಿ ಗಣೇಶ್ ಕಾರ್ಣಿಕ್, ಸೈನಿಕರು ಮತ್ತು ಮಾಜಿ ಯೋಧರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬೆಂಗಳೂರಿನಲ್ಲಿಯೂ ಇಂಥದ್ದೊಂದು ಸ್ಮಾರಕ ಇರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಸೈನಿಕರಿಗೆ ಗೌರವ ಸಲ್ಲಿಸುವುದು ಒಂದು ದಿನದ ಕೆಲಸವಾಗಬಾರದು. ದೇಶ ಕಾಯುವ ಯೋಧನನ್ನು ಪ್ರತಿದಿನ ಸ್ಮರಿಸಬೇಕು ಎಂದು ಹೇಳಿದರು.[ಪಾಕಿಸ್ತಾನದಲ್ಲಿ ಉಗ್ರರ ದಾಳಿಗೆ ನೂರಾರು ಮಕ್ಕಳು ಬಲಿ]

soldier

ವೇದಿಕೆಯ ಮೇಲೆ ಯೋಧರನ್ನು ಬಣ್ಣಿಸಿದರೆ ನಮ್ಮ ಕೆಲಸ ಮುಗಿಯುವುದಿಲ್ಲ. ನಿಜವಾಗಿ ಅವರು ಎದುರಿಸುತ್ತಿರುವ ಸಮಸ್ಯೆಗಳೇನು ಎಂಬುದನ್ನು ಮನಗಂಡು ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.

ಸೈನಿಕನ ಪುತ್ಥಳಿಗೆ ಪುಷ್ಪ ಅರ್ಪಣೆ ಮಾಡಲಾಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರಗೀತೆಗೆ ಶಿಸ್ತಿನಿಂದ ವಂದಿಸಿದರು.[ಬೇಗನೆ ಔಷಧಿ ಹಚ್ಚಿ, ಯುದ್ದಕ್ಕೆ ಹೋಗಬೇಕು]

soldier 1

1971 ಭಾರತ-ಪಾಕಿಸ್ತಾನ ಯುದ್ಧ ಯಾವುದು?
ಅದು 1971, ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ(ಈಗಿನ ಬಾಂಗ್ಲಾದೇಶ)ದ ನಡುವೆ ಉಂಟಾದ ಭಿನ್ನಾಭಿಪ್ರಾಯಗಳು ಯುದ್ಧಕ್ಕೆ ಕಾರಣವಾದವು . ಅನಿವಾರ್ಯವಾಗಿ ಭಾರತವೂ ಯುದ್ಧ ರಂಗಕ್ಕೆ ಪ್ರವೇಶ ಮಾಡಬೇಕಾಗಿ ಬಂದಿತು. ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಭಾರತ ವಿಜಯಿಯಾಗುವುದರ ಜತೆಗೆ ಸ್ವತಂತ್ರ ಬಾಂಗ್ಲಾ ಉದಯಕ್ಕೂ ಕಾರಣವಾಯಿತು.

soldier

ರಾಜಾಜಿನಗರದಲ್ಲಿ ವಿಜಯ ದಿವಸ
ಬಿಜೆಪಿ ಘಟಕ ಮತ್ತು ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕೆತಮಾರನಹಳ್ಳಿ ಉದ್ಯಾನದಲ್ಲಿ ಡಿಸೆಂಬರ್ 16 ರಂದು ಸಂಜೆ 6 ಗಂಟೆಗೆ ವಿಜಯ ದಿನ ಆಚರಣೆ ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣೆ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ನಾಗರಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದೆ.

English summary
Bengaluru: 16 December, is the 43rd anniversary of the 1971 India-Pakistan war, the first war after World War-II that the Indian Army won conclusively. Bengaluru National Military Memorial tributes our soldiers. MLC Ganesh Karnik and number of children's recalled soldiers achievements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X