ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಹೊಸ ರೀತಿಯ ಆಸನ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಮೇ 31: ಬೆಂಗಳೂರಿನ ಹಳೆಯ ಹಾಗೂ ಜನಪ್ರಿಯ ಹೋಟೆಲ್‌ಗಳ ಪೈಕಿ ಮೊದಲ ಸ್ಥಾನದಲ್ಲಿ ಇರುವುದು ವಿದ್ಯಾರ್ಥಿ ಭವನ. ವಿದ್ಯಾರ್ಥಿ ಭವನದ ದೊಸೆ ರುಚಿ ಸವಿದವರು ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತಾರೆ. ಆದರೆ, ಲಾಕ್‌ಡೌನ್ ಸಮಯದಲ್ಲಿ ಇಲ್ಲಿನ ರುಚಿಯನ್ನು ಅನೇಕರು ಮಿಸ್ ಮಾಡಿಕೊಂಡಿದ್ದಾರೆ.

ಈಗ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಹೀಗಾಗಿ, ವಿದ್ಯಾರ್ಥಿ ಭವನ ಹೋಟೆಲ್ ಮತ್ತೆ ತೆರೆದಿದೆ. ಆದರೆ, ಕೊರೊನಾ ನಂತರ ಹೋಟೆಲ್ ಮಾಲೀಕರು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ.

ಮಾಸ್ಕ್ ಇಲ್ಲದಿದ್ದರೆ ಮೈಸೂರಿನ ಈ ಹೋಟೆಲ್‌ನಲ್ಲಿ ಪಾರ್ಸಲ್ ಸಿಗಲ್ಲಮಾಸ್ಕ್ ಇಲ್ಲದಿದ್ದರೆ ಮೈಸೂರಿನ ಈ ಹೋಟೆಲ್‌ನಲ್ಲಿ ಪಾರ್ಸಲ್ ಸಿಗಲ್ಲ

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೊನಾ ವೈರಸ್‌ ಹಬ್ಬದಂತೆ ತಡೆಯುವುದು ಅತ್ಯಗತ್ಯವಾಗಿದೆ. ಹೀಗಾಗಿ, ಹೊಸದೊಂದು ಪ್ಲಾನ್ ಮಾಡಲಾಗಿದೆ. ಹೋಟೆಲ್‌ನಲ್ಲಿ ಹೊಸ ರೀತಿಯ ಆಸನ ವ್ಯವಸ್ಥೆ ಮಾಡಲಾಗಿದೆ. ಮೇಜಿನ ಮೇಲೆ ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಆಗದಂತೆ ತಡೆಯಲಾಗಿದೆ.

Vidyarthi Bhavan Hotel New Seating Pattern Under Trial

ಕೊರೊನಾ ವೈರಸ್‌ ಗ್ರಾಹಕರಿಗೆ ಹರಡದಂತೆ ಈ ರೀತಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿ ಭವನದ ಈ ಪ್ಲಾನ್‌ಅನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ಈ ವ್ಯವಸ್ಥೆಯನ್ನು ಪ್ರಯೋಗದ ರೀತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

'' ವೆಲ್ ಡನ್, ಸಾಮಾಜಿಕ ಅಂತರಕ್ಕಾಗಿ ಹೊಸ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಸಾಂಪ್ರದಾಯಿಕ ವಿದ್ಯಾ ಭವನ ರೆಸ್ಟೋರೆಂಟ್ ಹೊಸ ಆಸನಗಳ ವ್ಯವಸ್ಥೆ ಮಾಡಿದೆ.'' ಎಂದು ಡಾ ಸುಧಾಕರ್ ಟ್ವೀಟ್ ಮಾಡಿದ್ದಾರೆ.

English summary
Bangalore's iconic Vidyarthi Bhavan hotel, new seating pattern under trial, keeping in mind the new social distancing norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X