• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಸಾಲೆ ದೋಸೆಯ ಹುಚ್ಚು ಹಿಡಿಸಿದ ವಿದ್ಯಾರ್ಥಿ ಭವನ ಸೆಂಚುರಿ ಬಾರಿಸಲಿ

By ಅನಿಲ್ ಆಚಾರ್
|

ತ್ರಿಕೋನದ ಆಕಾರದ ಮಸಾಲೆ ದೋಸೆಯ ಒಳಗೆ ಅವಿತಿಟ್ಟುಕೊಂಡ ಆಲೂಗಡ್ಡೆ ಪಲ್ಯ. ಕೆಂಪು ಚಟ್ನಿ ಹಾಕಬೇಡಿ ಎಂದು ಹೇಳುವ ಅಗತ್ಯವೇ ಇಲ್ಲ. ಏಕೆಂದರೆ ಅಲ್ಲಿ ಕೆಂಪು ಚಟ್ನಿ ಬಳಸಲ್ಲ. ಒಬ್ಬೊಬ್ಬರು ಸಪ್ಲೈಯರ್ ಕೈಲೂ ಇಪ್ಪತ್ತು-ಇಪ್ಪತ್ತೈದು ಪ್ಲೇಟ್ ದೋಸೆ ಕೈ ಬದಲಾಗುತ್ತಾ ಗ್ರಾಹಕರು ಕೂತ ಜಾಗದಲ್ಲಿ ಕೆಲ ನಿಮಿಷಗಳಲ್ಲಿ ಖಾಲಿ ಆಗುತ್ತಲೇ ಇರುತ್ತವೆ.

ವಿದ್ಯಾರ್ಥಿ ಭವನ ಅಂದರೆ ಮಸಾಲೆ ದೋಸೆ ಮಾತ್ರ ಅಲ್ಲ. ತಲೆಮಾರುಗಳ ನೆನಪು, ನಂಬಿಕೆ, ಬಂಧ. ಇಂಥ ಪದಗಳು ಉಳಿದ ಹೋಟೆಲ್ ಗಳ ಪಾಲಿಗೆ ಅತಿ ಎನಿಸಬಹುದೇನೋ ಆದರೆ ವಿದ್ಯಾರ್ಥಿ ಭವನಕ್ಕೆ ಅಲ್ಲ. ಎಪ್ಪತ್ತೈದು ವರ್ಷ ಪೂರೈಸಿರುವ ವಿದ್ಯಾರ್ಥಿ ಭವನಕ್ಕೆ ಶುಕ್ರವಾರದಂದು ಸೊಗಸಾದ ಕಾರ್ಯಕ್ರಮ.

ಆಹಾ! ಘಮಘಮಿಸುವ ಸೊಪ್ಪಿನ ದೋಸೆ ಸವಿಯಲು ಮೈಸೂರಿನ ಜಿಟಿಆರ್ ಗೆ ಬನ್ನಿ

ಬೆಂಗಳೂರಿನ ಗಾಂಧಿ ಬಜಾರ್ ನ ಬಗ್ಗೆ ನೆನಪಿಸಿಕೊಳ್ಳುವುದು, ಬರೆಯುವುದು ಅಂದರೆ ಅದೊಂದು ಬಗೆಯ ಸಂತೋಷ. ಹಬ್ಬದ ಮುನ್ನಾ ದಿನಗಳಲ್ಲಿ, ವಾರಾಂತ್ಯಗಳಲ್ಲಿ ಬೆಂಗಳೂರಿನ ನಾನಾ ಭಾಗದಿಂದ ಬಂದ ಜನರು ಇಲ್ಲಿ ಶಾಪಿಂಗ್ ಮಾಡುತ್ತಾರೆ, ತಿಂಡಿ ತಿನ್ನಲೆಂದೇ ಬರುತ್ತಾರೆ. ಹ್ಞಾಂ, ತಿಂಡಿ ಅಂದಾಕ್ಷಣ ನೆನಪಾಗುವುದು ಗಾಂಧಿ ಬಜಾರ್ ನ ವಿದ್ಯಾರ್ಥಿ ಭವನ.

ಮನಸು ಗಾಂಧಿ ಬಜಾರು ಎಂಬ ಕವಿತೆ

ಮನಸು ಗಾಂಧಿ ಬಜಾರು ಎಂಬ ಕವಿತೆ

ಸಾಲಾಗಿ ಕೂರುವ ಹೂವು ಮಾರಾಟಗಾರರು, ವೀಳ್ಯದೆಲೆ-ಬಾಳೆಹಣ್ಣು, ಇತರೆ ಹಣ್ಣುಗಳನ್ನು ಮಾರುವವರ ಮುಂದೆ ಜನ ಜಂಗುಳಿ ಇರುವಂತೆಯೇ ವಿದ್ಯಾರ್ಥಿ ಭವನದ ಮುಂದೆಯೂ ಜನವೋ ಜನ. ಮೂರು ತಲೆಮಾರಿನ ಜನರ ಬಾಯಿ ರುಚಿ ತಣಿಸುವ ಮಸಾಲೆ ದೋಸೆ ಮತ್ತಿತರ ತಿನಿಸು ಒದಗಿಸುತ್ತಿರುವ ವಿದ್ಯಾರ್ಥಿ ಭವನಕ್ಕೆ ಎಪ್ಪತ್ತೈದು ವರ್ಷದ ಸಂಭ್ರಮ. ಡಿವಿಜಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪಿ.ಲಂಕೇಶ್, ನಿಸಾರ್ ಅಹ್ಮದ್ ಹೀಗೆ ಎಷ್ಟೋ ಸಾಹಿತಿಗಳ ಪಾಲಿಗೂ ಈ ಹೋಟೆಲ್ ಅಚ್ಚುಮೆಚ್ಚು ಹೌದು. ಅದರಲ್ಲೂ ನಿಸಾರ್ ಅಹ್ಮದ್ ರ ಗಾಂಧಿ ಬಜಾರಿನ ಪ್ರೀತಿ ಎಂಥದ್ದು ಅಂದರೆ, ಮನಸು ಗಾಂಧಿ ಬಜಾರು ಎಂಬ ಕವಿತೆಯನ್ನೇ ಬರೆದಿದ್ದಾರೆ.

ಮುನಿಸು ಕರಗಲು ಮಸಾಲೆ ದೋಸೆ

ಮುನಿಸು ಕರಗಲು ಮಸಾಲೆ ದೋಸೆ

ಸಾಹಿತಿಗಳು ಅಂತಲ್ಲ. ರಾಜಕಾರಣಿಗಳು, ಸಿನಿ ನಟ-ನಟಿಯರು ಪಾಲಿಗೂ ಈ ಸ್ಥಳ ಅಚ್ಚುಮೆಚ್ಚು. ಒಂದು ಮಸಾಲೆ ದೋಸೆ ತಿಂದು ತೃಪ್ತಿ ಆಗಲಿಕ್ಕಿಲ್ಲ. ಮತ್ತೊಮ್ಮೆ ಆರ್ಡರ್ ಮಾಡುವುದು ಹೊತ್ತಾಗಬಹುದು ಎಂಬ ಗುಮಾನಿಯಿಂದ ಒಟ್ಟೊಟ್ಟಿಗೆ ಒಬ್ಬರಿಗೆ ಎರಡೆರಡು ಮಸಾಲೆ ದೋಸೆ ಹೇಳಿಬಿಡುವ ಗ್ರಾಹಕರು ಈ ಹೋಟೆಲ್ ಗೆ ಇದ್ದಾರೆ. ಪ್ರೀತಿಸುವವರು ಭೇಟಿಯಾಗಲು, ಗಂಡ-ಹೆಂಡತಿ ಮಧ್ಯೆ ಮುನಿಸು ಕರಗಲು, ಸ್ನೇಹಿತರ ಮಧ್ಯದ ಲೋಕಾಭಿರಾಮದ ಹರಟೆಗೆ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಕಾರಣವನ್ನು ಒದಗಿಸುತ್ತಲೇ ಇದೆ! ಅಲ್ಲಿನ ರವೆ ವಡೆ, ಬೆಳಗಿನ ಹೊತ್ತು ಸಿಗುವ ಸಾಗು ಮಸಾಲೆ ದೋಸೆಗೂ ಅಭಿಮಾನ ಇರದವರು ಉಂಟೇ ಎಂದರೆ ಅತಿಶಯೋಕ್ತಿ ಅಲ್ಲ.

ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ತಲೆಮಾರಿನವರ ತನಕ

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ತಲೆಮಾರಿನವರ ತನಕ

ಹೋಟೆಲ್ ಗೆ ಹೋಗುತ್ತಾ, ಅಲ್ಲಿನ ಮಸಾಲೆ ದೋಸೆ ಸವಿಯುತ್ತಾ ವಯಸ್ಸಾಗುತ್ತಿರುವುದೇ ಗೊತ್ತಾಗುತ್ತಿಲ್ಲ ಎನ್ನುವವರ ಮಧ್ಯೆ, ಹೊಸ ತಲೆಮಾರಿನವರು ಮಸಾಲೆ ದೋಸೆ ಪ್ಲೇಟು ಹಾಗೂ ವಿದ್ಯಾರ್ಥಿ ಭವನ್ ಬೋರ್ಡ್ ನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ತಲೆಮಾರಿನ ತನಕ ಏನೆಲ್ಲ ಬದಲಾವಣೆಗಳು ಆಗಿವೆ. ಆದರೆ ರುಚಿಯಲ್ಲಿ ಮಾತ್ರ ಅದೇ ಮಸಾಲೆ ದೋಸೆಯ ಸ್ವಾದ. ರುಚಿ.

ಅಣ್ಣಾವ್ರು ಕೂಡ ರುಚಿ ನೋಡಿದ್ದರು ಮೈಸೂರು ಮೈಲಾರಿ ಹೋಟೆಲ್ ತಿಂಡಿ

ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿದೆ

ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿದೆ

ವಿದ್ಯಾರ್ಥಿ ಭವನಕ್ಕೆ ಎಪ್ಪತ್ತೈದು ವರ್ಷ ತುಂಬಿದ ಸಂಭ್ರಮಕ್ಕೆ ಅಕ್ಟೋಬರ್ 26ರ ಶುಕ್ರವಾರ ಸಂಜೆ 5.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಲೀಕರಾದ ರವೀಂದ್ರ ಅಡಿಗ ಅದ್ಭುತ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಈ ರೀತಿಯ ಹೋಟೆಲ್ ನಂತೆಯೇ ಬಹುಶಃ ಈ ರೀತಿಯ ಕಾರ್ಯಕ್ರಮವೂ ಅಪರೂಪ. ಗಾಂಧಿ ಬಜಾರಿನ ನೆನಪಿನ ಭಾಗವೇ ಆಗಿರುವ ವಿದ್ಯಾರ್ಥಿ ಭವನದ ಈ ಕಾರ್ಯಕ್ರಮಕ್ಕೆ ಸಾಧ್ಯವಾದರೆ ಹೋಗಿಬರಬಹುದು.

ಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vidyarthi Bhavan hotel famous for Masala Dosa. It has completed 75 years. On this occasion grand function organised in Bengaluru Ravindra Kalakshetra on 26th evening 5.30 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more