ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ವತ್ ಡಿಸ್‌ಚಾರ್ಜ್‌ ಸಮರಿ ಸೋರಿಕೆ: ಮಲ್ಯ ಆಸ್ಪತ್ರೆಯಿಂದ ತನಿಖೆ

By Manjunatha
|
Google Oneindia Kannada News

Recommended Video

ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣ : ವಿದ್ವತ್ ಡಿಸ್ಚಾರ್ಜ್ ಸಮ್ಮರಿ ಲೀಕ್ | Oneindia Kannada

ಬೆಂಗಳೂರು, ಮಾರ್ಚ್‌ 17: ಮೊಹಮ್ಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್‌ನ ಡಿಸ್ಚಾರ್ಜ್‌ ಸಮರಿ ಸೋರಿಕೆ ಆದ ಬಗ್ಗೆ ತನಿಖೆ ನಡೆಸಲು ವಿಠಲ್‌ ಮಲ್ಯ ಆಸ್ಪತ್ರೆ ಆಡಳಿತ ಮಂಡಳಿ ನಿರ್ಧರಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ವಿದ್ವತ್‌ನ ಡಿಸ್‌ಚಾರ್ಜ್‌ ಸಮರಿ ಸೋರಿಕೆ ಆಗಿದ್ದು, ಮೊಹಮ್ಮದ್ ನಲಪಾಡ್ ತಂದೆ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್ ಅವರು ಡಿಸ್‌ಚಾರ್ಜ್‌ ಸಮರಿಯ ಚಿತ್ರಗಳನ್ನು ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ವೈದ್ಯರಿಗೇ ತಿರುಗುಬಾಣವಾದ ವಿದ್ವತ್ ಡಿಸ್ಚಾರ್ಜ್ ವರದಿ ವೈದ್ಯರಿಗೇ ತಿರುಗುಬಾಣವಾದ ವಿದ್ವತ್ ಡಿಸ್ಚಾರ್ಜ್ ವರದಿ

ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಕಟಿಸಿದ್ದವು ಮತ್ತು ಪೊಲೀಸರು ಕೂಡಾ ಈ ಬಗ್ಗೆ ಆಸ್ಪತ್ರೆ ಆಡಳಿತವನ್ನು ಪ್ರಶ್ನೆ ಮಾಡಿದ್ದರು. ಹ್ಯಾರಿಸ್ ಅವರು ತಮ್ಮ ಪ್ರಭಾವ ಬಳಸಿ ಆಸ್ಪತ್ರೆ ವರದಿಯನ್ನು ದುರ್ಬಲಗೊಳಿಸಿದ್ದಾರೆ ಎಂದು ಸಹ ಆರೋಪಗಳು ಕೇಳಿಬಂದಿತ್ತು. ಮಲ್ಯ ಆಸ್ಪತ್ರೆಯ ವಿಶ್ವಾಸಾರ್ಹತೆ ಬಗ್ಗೆ ಕೂಡಾ ಪ್ರಶ್ನೆ ಮಾಡಲಾಗಿತ್ತು.

Vidvat discharge summery leak: investigation by Vittal Malya

ವಿದ್ವತ್ ಡಿಸ್‌ಚಾರ್ಜ್‌ ಸಮರಿ ಸೋರಿಕೆ ಕುರಿತು ತನಿಖೆ ಮಾಡುವ ಬಗ್ಗೆ ವಿಠಲ್ ಮಲ್ಯ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದ್ರು ವಾದ್ವಾನಿ ಸ್ಪಷ್ಟಪಡಿಸಿದ್ದು, 'ಆಸ್ಪತ್ರೆಯ ಶಿಸ್ತು ಸಮಿತಿ ಸಭೆ ನಡೆಸಿ ತನಿಖೆ ನಡೆಸಲು ತೀರ್ಮಾನಿಸಿದೆ. ತನಿಖೆಗೆ ನಮ್ಮದೇ ಆದ ಕೆಲವು ಮಾರ್ಗಸೂಚಿಗಳಿವೆ. ಆ ಪ್ರಕಾರ ತನಿಖೆ ಕೈಗೊಳ್ಳಲಾಗುವುದು' ಎಂದಿದ್ದಾರೆ.

ವಿದ್ವತ್ ಮೇಲೆ ಹಲ್ಲೆ : ಮೊಹಮ್ಮದ್ ನಲಪಾಡ್ ಹೇಳಿದ ಘಟನೆಯವಿದ್ವತ್ ಮೇಲೆ ಹಲ್ಲೆ : ಮೊಹಮ್ಮದ್ ನಲಪಾಡ್ ಹೇಳಿದ ಘಟನೆಯ

Vidvat discharge summery leak: investigation by Vittal Malya

ವಿದ್ವತ್‌ ಅವರ ಚಿಕಿತ್ಸೆ ನೇತೃತ್ವವನ್ನು ವಹಿಸಿದ್ದ ಆನಂದ್‌ ಅವರೇ ಡಿಸ್‌ಚಾರ್ಜ್‌ ಸಮರಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನೂ ಅಮಾನತು ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು 'ಆನಂದ್‌ ಅವರು ತಜ್ಞ ವೈದ್ಯರ ತಂಡದಲ್ಲಿ ಪ್ರಮುಖವಾಗಿದ್ದಾರೆ. ಇವರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ' ಎಂದಿದ್ದಾರೆ.

Vidvat discharge summery leak: investigation by Vittal Malya

ಬುಧವಾರ ನಡೆದ ನಲಪಾಡ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶ್ಯಾಂಸುಂದರ್‌ ಅವರು ವೈದ್ಯಕೀಯ ವರದಿ ಸೋರಿಕೆ ವಿಚಾರ ಪ್ರಸ್ತಾಪ ಮಾಡಿದ್ದು 'ವೈದ್ಯರ ತೀವ್ರ ಒತ್ತಡದಿಂದಾಗಿ ವಿದ್ವತ್‌ ಅನ್ನು ಡಿಸ್‌ಚಾರ್ಜ್‌ ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ವರದಿಯನ್ನು ರೋಗಿಗೆ ಅಥವಾ ಅವರ ಹತ್ತಿರದ ಸಂಬಂಧಿಗಳಿಗೆ ಮಾತ್ರ ಕೊಡಬೇಕು. ಆದರೆ ಹ್ಯಾರಿಸ್‌ ಅವರು ಡಿಸ್‌ಚಾರ್ಜ್‌ ಸಮರಿಯನ್ನು ತಮ್ಮ ಸಾಮಾಜಿಕ ಜಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು ಇದರ ಬಗ್ಗೆ ತನಿಖೆ ಆಗಬೇಕು' ಎಂದು ಹೇಳಿದ್ದರು.

English summary
Vittal malya hospital administration is conducting investigation on vidvath discharge summery leak issue. Vidvat's discharge summery leaks to media and congress MLA NA Harris who is the father of Vidvat assault case main accused Mohammad Nalapad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X