ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಮೆಕ್ಕಾಗೆ ತೆರಳಲು ನಲಪಾಡ್‌ಗೆ ಅನುಮತಿ

|
Google Oneindia Kannada News

ಬೆಂಗಳೂರು, ಮೇ 14: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಪಡೆದುಕೊಂಡಿದ್ದ ಶಾಸಕ ಎನ್‌.ಎ. ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್‌ಗೆ ಮೆಕ್ಕಾಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕೋರ್ಟ್‌ನ ವ್ಯಾಪ್ತಿಯಿಂದ ಆಚೆಗೆ ಹೋಗದಂತೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡುವ ವೇಳೆ ಸೂಚನೆ ನೀಡಿತ್ತು. ಬಳಿಕ ಮೆಕ್ಕಾ ಮತ್ತು ಮದೀನಾ ಯಾತ್ರೆಗೆ ತೆರಳಲು ಅನುಮತಿ ನೀಡುವಂತೆ ಕೋರಿ ನಲಪಾಡ್ ಮನವಿ ಸಲ್ಲಿಸಿದ್ದರು.

ಮೆಕ್ಕಾ ಯಾತ್ರೆಗೆ ಹೊರಟ ನಲಪಾಡ್, ಅನುಮತಿಗಾಗಿ ಅರ್ಜಿ ಮೆಕ್ಕಾ ಯಾತ್ರೆಗೆ ಹೊರಟ ನಲಪಾಡ್, ಅನುಮತಿಗಾಗಿ ಅರ್ಜಿ

ಅದನ್ನು ಮಾನ್ಯ ಮಾಡಿದ ಹೈಕೋರ್ಟ್, ನಲಪಾಡ್‌ಗೆ ವಿಧಿಸಿರುವ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ಮೆಕ್ಕಾ ಯಾತ್ರೆ ಕೈಗೊಳ್ಳಲು ಅದು ಅನುಮತಿ ನೀಡಿದೆ. ಮೇ 25ರಿಂದ ಜೂನ್ 6ರವರೆಗೂ ಮೆಕ್ಕಾಯಾತ್ರೆಯಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾಕ್ಕೆ ತೆರಳಲು ಅವಕಾಶ ನೀಡಲಾಗಿದೆ.

Vidvat assault case Karnataka High court agreed Mohammed nalapad to visit mecca

'ನೀವು ಮಾಡಿರುವ ಪಾಪ ಎಲ್ಲಿಗೆ ಹೋದರೂ ಕಳೆಯೋದಿಲ್ಲ' ಎಂದು ಹೈಕೋರ್ಟ್ ನ್ಯಾಯಮೂರ್ತಿ ಮೆಕ್ಕಾಯಾತ್ರೆಗೆ ತೆರಳಲು ಜಾಮೀನಿನ ಷರತ್ತು ಸಡಿಲಿಸುವಂತೆ ಕೋರಿ ನಲಪಾಡ್ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಚಾಟಿ ಬೀಸಿದ್ದರು. ಬಳಿಕ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿತ್ತು. ಮೆಕ್ಕಾಗೆ ತೆರಳಲು 20 ದಿನಗಳ ಅನುಮತಿ ನೀಡುವಂತೆ ನಲಪಾಡ್ ಕೋರಿದ್ದರು. ಆದರೆ, ಅವರಿಗೆ 13 ದಿನಗಳ ಅವಕಾಶ ನೀಡಲಾಗಿದೆ.

English summary
The Karnataka High Court on Tuesday granted permission to Son of MLA Haris, Mohammed Nalapad to visit Mecca for 13 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X