ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧ ಹೆಸರಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲಿಗೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 25: ವಿಧಾನಸೌಧ ಹೆದರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದೆ.ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ಕಾರು ಬಾಡಿಗೆಗೆ ನೀಡುವ ಸೋಗಿನಲ್ಲಿ ಮೂವರು ವಂಚಕರು 45 ಲಕ್ಷ ರೂ ವಂಚಿಸಿರುವ ಬಗ್ಗೆ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಐಟಿ ಕಂಪನಿಗಳಿಗೆ ಕಾರು ಬಾಡಿಗೆ ನೀಡುವ ಸೋಗಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿಧಾನಸೌಧದಲ್ಲಿ ಹಣ ಪತ್ತೆ : ಎಸಿಬಿಯಿಂದ ಮೋಹನ್ ಬಂಧನ ವಿಧಾನಸೌಧದಲ್ಲಿ ಹಣ ಪತ್ತೆ : ಎಸಿಬಿಯಿಂದ ಮೋಹನ್ ಬಂಧನ

ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ಬಳಕೆ ಮಾಡಲು ಇನ್ನೋವಾ ಕಾರುಗಳ ಅಗತ್ಯವಿದೆ. ಕಾರನ್ನು ಬಾಡಿಗೆಗೆ ನೀಡಿದರೆ ಅಥವಾ ಕಾರಿನ ಮೇಲೆ ಬಂಡವಾಳ ಹೂಡಿದರೆ ತಿಂಗಳಿಗೆ 34ರಿಂದ 50 ಸಾವಿರ ರೂ ಸಿಗುತ್ತದೆ ಎಂದು ನಂಬಿಸಿ ಒಟ್ಟು 15 ಮಂದಿಯಿಂದ ತಲಾ 3 ಲಕ್ಷ ರೂ ಸಂಗ್ರಹಿಸಿದ್ದಾರೆ.

Vidhana soudha car rent scam accused claims he is a victim

ಒಟ್ಟು 45 ಲಕ್ಷ ರೂ ಸಮೇತ ಪರಾರಿಯಾಗಿದ್ದಾರೆ. ಎಸ್ ಕೃಷ್ಣ, ಸಂಪತ್, ಎಚ್‌ ಮಂಜುನಾಥ್ ತಲೆ ಮರೆಸಿಕೊಂಡಿರುವ ವಂಚಕರು. ದೂರುದಾರ ರಾಜಪ್ಪ ಬಾಡಿಗೆಗೆ ಇರುವ ಮನೆಯ ಮಾಲೀಕನ ಮಗ ಕೃಷ್ಣನೇ ವಂಚಕ ಜಾಲದ ಕಿಂಗ್ ಪಿನ್. ರಾಜಪ್ಪ

ವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆ ವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆ

ಅವರ ಬಳಿ ಇನ್ನೋವಾ ಖಾರಿದೆ ಜುಲೈ 2017ರ 10ರಂದು ರಾಜಪ್ಪ ಬಳಿ ಬಂದು ತನ್ನ ಬಳಿಯೂ ಒಂದು ಇನ್ನೋವಾ ಇದೆ ಅದನ್ನು ನಾನು ವಿಧಾನಸೌಧಕ್ಕೆ ಬಾಡಿಗೆಗೆ ನೀಡಿ ಅಟ್ಯಾಚ್ ಮಾಡಿದ್ದೇನೆ ಪ್ರತಿ ತಿಂಗಳು 34 ಸಾವಿರ ರೂ ಮನೆ ಬಾಗಿಲಿಗೆ ಬರುತ್ತದೆ ನೀವೂ ಇದೇ ರೀತಿ ಮಾಡಬಹುದು ಅದಕ್ಕೆ 3 ಲಕ್ಷ ರೂ ಖರ್ಚಾಗುತ್ತದೆ ಎಂದು ನಂಬಿಸಿ ಮೋಸವೆಸಗಿದ್ದಾರೆ.

English summary
A 52 year old man who was accused of cheating 15 people of 45 lakhs after promising to get four wheelers hired by Vidhana Soudha authorities alleged that three men had swindled the money from him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X