ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟವನ ಗುರುತು ಪತ್ತೆ?

|
Google Oneindia Kannada News

ಬೆಂಗಳೂರು, ಜನವರಿ 13 : ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಾಂಬ್ ಇಟ್ಟ ಶಂಕಿತ ವ್ಯಕ್ತಿಯ ದೃಶ್ಯಾವಳಿಯನ್ನು ಪತ್ತೆ ಹಚ್ಚಿದೆ. ಎನ್‌ಐಎಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿ ಬಾಂಬ್ ಸ್ಫೋಟಗೊಂಡ ಪ್ರದೇಶದಲ್ಲಿ ಸುತ್ತಾಡುತ್ತಿರುವುದು ಸೆರೆಯಾಗಿದೆ.

2014ರ ಡಿಸೆಂಬರ್ 28ರಂದು ಚರ್ಚ್‌ಸ್ಟ್ರೀಟ್‌ನಲ್ಲಿನ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಬೆಂಗಳೂರು ಪೊಲೀಸರು ಮೊದಲು ಸ್ಫೋಟದ ತನಿಖೆ ನಡೆಸಿದರು. ಕೆಲವು ದಿನಗಳ ನಂತರ ಎನ್‌ಐಎಗೆ ತನಿಖೆಯನ್ನು ಹಸ್ತಾಂತರ ಮಾಡಲಾಯಿತು. [Church Street ಸ್ಫೋಟಕ್ಕೆ ಒಂದು ವರ್ಷ]

church street

ದೃಶ್ಯಾವಳಿಯಲ್ಲೇನಿದೆ? : ಸದ್ಯ, ಎನ್‌ಐಎಗೆ ಲಭ್ಯವಾಗಿರುವ ದೃಶ್ಯಾವಳಿಯಲ್ಲಿ ನೀಲಿ ಬಣ್ಣದ ಟೀ ಶರ್ಟ್ ತೊಟ್ಟು, ಕ್ಯಾಪ್ ಧರಿಸಿರುವ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟಗೊಂಡ ಪ್ರದೇಶದಲ್ಲಿ ಸುತ್ತುತ್ತಿರುವುದು ಸೆರೆಯಾಗಿದೆ. ಕೈಯಲ್ಲಿ ಬ್ಯಾಗ್ ಹಿಡಿದಿರುವ ವ್ಯಕ್ತಿ ಹಲವು ಬಾರಿ ಆ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡಿದ್ದಾನೆ. [ಬೆಂಗಳೂರು ಸ್ಫೋಟ : ತನಿಖೆ ಆರಂಭಿಸಿದ NIA]

ಈ ಕ್ಯಾಪ್ ಧರಿಸಿರುವ ವ್ಯಕ್ತಿ ಕೈಯಲ್ಲಿರುವ ಬ್ಯಾಗ್‌ನಲ್ಲಿ ಬಾಂಬ್‌ ಅನ್ನು ತಂದಿರಬಹುದು ಎಂದು ಎನ್ಐಎ ಶಂಕಿಸಿದೆ. ಹೈದರಾಬಾದ್‌ನ ಎನ್‌ಐಎ ಘಟಕ ಬಾಂಬ್ ಸ್ಫೋಟದ ತನಿಖೆಯನ್ನು ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದೆ.

ಬ್ಯಾಗ್ ಹೊಂದಿರುವ ವ್ಯಕ್ತಿಯೇ ಬಾಂಬ್ ಇಟ್ಟಿರಬಹುದು ಎಂದು ಎನ್‌ಐಎ ಶಂಕಿಸಿದೆ. ಬಾಂಬ್ ಸ್ಫೋಟಗೊಂಡ ಡಿಸೆಂಬರ್ 28ರ ಸಂಜೆ 7 ಗಂಟೆಗೆ ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ.

English summary
The National Investigation Agency has got CCTV footage of the man who possibly carried out the blast at Church Street, Bengaluru in the month of December 2014. The footage as seen indicates that a man in a blue shirt and wearing a cap is heading towards Church Street.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X