ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್ ಫೀಲ್ಡ್ ಉಳಿವಿಗಾಗಿ ಇಂದು ಸೇರಲಿದೆ ಬಹತ್ ಜನಸ್ತೋಮ

|
Google Oneindia Kannada News

ಬೆಂಗಳೂರು, ನವೆಂಬರ್, 26: ಬೆಂಗಳೂರಿನ ಟ್ರಾಫಿಕ್ ಗೂ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೂ ಎಲ್ಲಿಂದೆತ್ತಣ ಸಂಬಂಧ? ಆದರೂ ಸ್ವತಃ ಹಿಟ್ಲರ್ ವೈಟ್ ಫೀಲ್ಡ್ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ತನ್ನ ಅಧಿಕಾರಿಗಳನ್ನು ಕಳುಹಿಸಿಕೊಡಲಿದ್ದಾನೆ.

ಹೌದು... ಇಂಥದ್ದೊಂದು ವಿಡಿಯೋ ಯು ಟ್ಯೂಬ್ ನಲ್ಲಿ ಹರಿದಾಡುತ್ತಿದ್ದು 5 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ. ಹಿಟ್ಲರ್ ತನ್ನ ಕೈ ಕೆಳಗಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಆದೇಶ ನೀಡುತ್ತಾನೆ.[ಪಾದಚಾರಿಗಳಿಗೆ ನರಕ ದರ್ಶನ ಮಾಡಿಸುವ ರೆಸಿಡೆನ್ಸಿ ರಸ್ತೆ]

Video: Hitler takes responsibility to solve Bengaluru traffic problem

ಬೆಂಗಳೂರಿನ ನಿವಾಸಿಗಳಿಗೆ ಟ್ರಾಫಿಕ್ ಎಂಬ ಸಮಸ್ಯೆಯ ಬಗ್ಗೆ ಹೊಸದಾಗಿ ಹೇಳುವುದು ಏನು ಇಲ್ಲ. ನಿಮ್ಮನ್ನು ಮಾನಸಿಕವಾಗಿ, ದೈಹಿವಾಗಿ ಟ್ರಾಫಿಕ್ ಎಂಬ ನಿಲುಗಡೆ ಭೂತ ಜರ್ಜರಿತರನ್ನಾಗಿಸಿರುತ್ತದೆ.

ಸಿಲ್ಕ್ ಬೋರ್ಡ್, ಬೆಳ್ಳಂದೂರು, ಮಾರತ್ ಹಳ್ಳಿ, ಕೆಆರ್ ಪುರ, ವೈಟ್ ಫೀಲ್ಡ್, ನಾಗವಾರ, ಬಿಟಿಎಂ ಲೇಔಟ್ ಮತ್ತು ಕೋರಮಂಗಲ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಅನುಭವಿಸುತ್ತಿರುವ ಪ್ರದೇಶಗಳು ಎಂಬುದು ಪೊಲೀಸ್ ಅಧಿಕಾರಿಗಳ ಲೆಕ್ಕ. ಇದು ಸತ್ಯವೂ ಹೌದು.

ಬೆಂಗಳೂರಿನ ಐಟಿ ವಿಭಾಗದ ರಾಜಧಾನಿಯೂ ಈ ಪ್ರದೇಶಗಳೇ. ಸಮಸ್ಯೆಯಿಂದ ಬೇಸತ್ತ ವೈಟ್ ಫೀಲ್ಡ್ ನಿವಾಸಿಗಳ ತಂಡವೊಂದು ತಮ್ಮದೇ ದೃಷ್ಟಿಕೋನದಲ್ಲಿ ಪರಿಹಾರ ಮಾರ್ಗಕ್ಕೆ ಮುಂದಾಗಿದೆ.[ಕಸ, ಗುಂಡಿ, ಟ್ರಾಫಿಕ್ ಮುಕ್ತ ನಗರಕ್ಕೆ ಮೇಯರ್ ಸೂತ್ರ]

Whitefield Rising ಹೆಸರಿನಲ್ಲಿ ತಂಡ ಸಮಸ್ಯೆ ಪರಿಹಾರ ಮಾರ್ಗೋಪಾಯದ ಬಗ್ಗೆ ನವೆಂಬರ್ 30 ರಂದು ಪ್ರತಿಭಟನೆ ಮತ್ತು ಸಮಾಲೋಚನೆ ಸಭೆ ನಡೆಸಲಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ ಪ್ರತಿಭಟನಾ ಮೆರವಣಿಗೆ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗಲಿದೆ. ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಮಾರತ್ ಹಳ್ಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. 25 ಸಾವಿರ ಜನ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ನೀವು ಭಾಗವಹಿಸಿ,, ಇಲ್ಲವಾದಲ್ಲಿ ಹಿಟ್ಲರ್ ನಿಮಗೆ ಮರಣದಂಡನೆ ವಿಧಿಸಬಹುದು!

English summary
Are you a resident of Bengaluru, or have you been to Bengaluru anytime? Then you too must be a victim of Bengaluru traffic. The time, which is spent navigating through jam packed roads in the IT city, takes a toll on commuters physically and mentally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X